Advertisement

ಪ್ರಕರಣ ಬಾಕಿಗೆ ನ್ಯಾಯಾಧೀಶರು ಹೊಣೆಯಲ್ಲ

12:23 PM Jul 22, 2018 | |

ಬೆಂಗಳೂರು: ನ್ಯಾಯಾಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ಬಾಕಿ ಉಳಿದಿರುವುದಕ್ಕೆ ನ್ಯಾಯಾಂಗ ಮತ್ತು ನ್ಯಾಯಾಧೀಶರು ಹೊಣೆ ಅನ್ನುವುದು ತಪ್ಪು ಅಭಿಪ್ರಾಯ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ವಿ.ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ನಗರದ ಇಂದಿರಾನಗರ ಕ್ಲಬ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಆರ್‌ಎನ್‌ಬಿ ಮಧ್ಯಸ್ಥಿಕೆ ಮತ್ತು ಸಂಧಾನ ಕೇಂದ್ರ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಕರಣಗಳು ಬಾಕಿ ಉಳಿಯಲು ನ್ಯಾಯಾಂಗ ಮತ್ತು ನ್ಯಾಯಾಧೀಶರು ಕಾರಣ ಎಂಬ ತಪ್ಪು ಭಾವನೆ ಇದೆ. ಹೆಚ್ಚುತ್ತಿರುವ ಜನಸಂಖ್ಯೆ, ಅವಶ್ಯಕತೆಗೆ ತಕ್ಕಂತೆ ನ್ಯಾಯಾಲಯಗಳ ಸಂಖ್ಯೆ ಹೆಚ್ಚಿಸದಿರುವುದು ಮತ್ತು ತಮ್ಮ ಹಕ್ಕುಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿರುವುದು ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಮತ್ತು ಬಾಕಿ ಉಳಿಯಲು ಕಾರಣ ಎಂದರು. 

ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಮಧ್ಯಸ್ಥಿಕೆ ಮತ್ತು ಸಂಧಾನ ಕೇಂದ್ರಗಳಂತಹ ಪರ್ಯಾಯ ವ್ಯಾಜ್ಯ ವಿಲೇವಾರಿ ವ್ಯವಸ್ಥೆ ಬೇಕಿದೆ. ಇದು ಕಡಿಮೆ ವೆಚ್ಚದ, ಅನುಕೂಲಕರ ಮತ್ತು ಸಮಯವನ್ನು ಉಳಿಸುವ ವ್ಯವಸ್ಥೆ ಆಗಿದೆ. ವ್ಯಾಜ್ಯ ಪರಿಹಾರದ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಸಾಮಾನ್ಯ ಜನರಲ್ಲಿ ವಿಶ್ವಾಸ ಹೆಚ್ಚಿಸುವ ಕೆಲಸವೂ ಆಗಬೇಕು ಎಂದು ಹೇಳಿದರು.

ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನಾಯಮೂರ್ತಿಗಳಾದ ಎಂ.ಎನ್‌.ವೆಂಕಟಾಚಲಯ್ಯ, ಎಸ್‌. ರಾಜೇಂದ್ರಬಾಬು, ನ್ಯಾ. ಎನ್‌. ಸಂತೋಷ್‌ ಹೆಗ್ಡೆ, ನ್ಯಾ. ಶಿವರಾಜ್‌ ವಿ. ಪಾಟೀಲ್‌, ನ್ಯಾ. ಆರ್‌.ವಿ. ರವೀಂದ್ರನ್‌, ನ್ಯಾ. ವಿ. ಗೋಪಾಲಗೌಡ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next