Advertisement

224 ಕ್ಷೇತ್ರದಲ್ಲೂ ಜೆಡಿಎಸ್‌ ಹೋರಾಟ

12:51 PM Dec 15, 2017 | Team Udayavani |

ನಂಜನಗೂಡು: ಹಕೀಂ ನಂಜುಂಡನ ಸನ್ನಿಧಿಯಲ್ಲಿ ಗುರುವಾರ ಬೆಳಗ್ಗೆಯೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ದೇವಿರಮ್ಮಹಳ್ಳಿ ವೃತ್ತದಲ್ಲಿನ ನಂದಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಸಭೆಗೆ ಆಗಮಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. 

Advertisement

ಉಪಚುನಾವಣೆ ಗೆಲುವಿನ ಹೆಗ್ಗಳಿಕೆ ಬೇಡ: ನಂಜನಗೂಡು -ಗುಂಡ್ಲುಪೇಟೆ ಗೆಲುವಿನಲ್ಲಿ ಯಾರ್ಯಾರ ಪಾತ್ರ ಎಷ್ಟಿದೆ ಗೆಲುವಿಗೆ ಕಾರಣವೇನು ಎಂಬುದನ್ನು ಜಾnಪಿಸಿಕೊಳ್ಳಿ ಎಂದ ಅವರು, ಆ ರೀತಿ ಚುನಾವಣೆ ಈಗ ನಡೆಯಲು ತಾವು ಬಿಡುವುದಿಲ್ಲ ಎಂದು ಕಿಡಿಕಾರಿದರು. ಗೆಲುವೋ ಸೋಲೋ ನಾವಂತು ಈ ಬಾರಿ 224 ಕ್ಷೇತ್ರದಲ್ಲೂ ಹೋರಾಟ ನಡೆಸುತ್ತೇವೆಂದು ತಿಳಿಸಿದರು.

ನಿಮ್ಮ ಗೆಲುವಿನಲ್ಲಿ ನಮ್ಮ ಪಾತ್ರವೂ ಇಲ್ಲವೇ ಎಂದು ಕಾಂಗ್ರೆಸ್‌ ಕಾಲೆಳೆದ ದೇವೇಗೌಡರು, ನಾವು ಸ್ಪರ್ಧಿಸಿದ್ದರೆ ನೀವೆಲ್ಲಿ ಗೆಲುವು ಕಾಣುತ್ತಿದ್ದಿರಿ ಎಂದು ಮುಖ್ಯಮಂತ್ರಿ ಅವರನ್ನು ಕುಟುಕಿದರು.  ಅತ್ಯುತ್ತಮ ಮಂತ್ರಿಯಾಗಿದ್ದ ವಿ.ಶ್ರೀನಿವಾಸ ಪ್ರಸಾದ್‌ರನ್ನು ಷಡ್ಯಂತರದ ಮೂಲಕ ಅವಮಾನ ಮಾಡಿ ಹೊರ ಕಳಿಸಿದವರು ನೀವೇ ತಾನೇ.

ನಂತರ ಅವರ ಸೋಲಿಗೂ ಕಾರಣರಾಗಿ ಅವರನ್ನು ಅವಮಾನ ಮಾಡಿದ್ದೀರಿ. ಬಿಜೆಪಿ ಗೆಲ್ಲಬಾರದು ಎಂಬ ಏಕೈಕ ಉದ್ದೇಶದಿಂದ, ಹಣದ ಪ್ರವಾಹದ ವಿರುದ್ಧ ಸೆಣಸಾಟ ಬೇಡ ಎಂದು ನಾವು ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲಿಲ್ಲ ಎಂದು ಹೇಳಿದರು.  

ವೃದ್ಧರಿಗೆಲ್ಲಾ 5 ಸಾವಿರ ಮಾಶಾಸನ: ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿ ಮಾಡಬೇಡಿ, ಜೆಡಿಎಸ್‌ಗೆ 115 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಿಸಿದರೆ 75 ವರ್ಷದ ಮೇಲ್ಪಟ್ಟ ಎಲ್ಲ ವೃದ್ಧರಿಗೂ ತಿಂಗಳಿಗೆ 5 ಸಾವಿರ ಮಾಶಾಸನ ನೀಡುತ್ತೇವೆಂದರು. 

Advertisement

3 ಪಕ್ಷಗಳ ಆಡಳಿತದ ಕುರಿತು ಚರ್ಚೆಯಾಗಲಿ: ತಮ್ಮ ಮಗ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿಸುವುದನ್ನು ನನ್ನ ಗುರಿ ಅಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ನಡೆಸಿದ 20 ತಿಂಗಳಿನ ಆಡಳಿತ, ಬಿಜೆಪಿ-ಕಾಂಗ್ರೆಸ್‌ನ 9 ವರ್ಷದ ಆಡಳಿತದ ವೈಖರಿ ಕುರಿತು  ರಾಜಾÂದ್ಯಂತ ಚರ್ಚೆಯಾಗಬೇಕು. ಇದಾದ ನಂತರ ಮಹಾ ಜನತೆ ತೀರ್ಪು ನೀಡಬೇಕು ಎಂಬುದೇ ತಮ್ಮ ಹೆಬ್ಬಯಕೆ ಎಂದರು.

ಭ್ಯರ್ಥಿಗಳ ಮೂಗಿಗೆ ತುಪ್ಪ ಸವರಿದ ಗೌಡರು: ಕಾರ್ಯಕರ್ತರ ಸಭೆಯನ್ನು ಅಚ್ಚುಕಟ್ಟಾಗಿ ರೂಪಿಸಿ ಚುನಾವಣೆ ಹುರಿಯಾಳುಗಳು ಸಿದ್ಧವಾಗಿ ನಿಂತಿದ್ದ ಆಕಾಂಕ್ಷಿಗಳ ಮೂಗಿಗೆ ದೇವೇಗೌಡರು ತುಪ್ಪ ಸವರಿ ಅವರ ಆಸೆ ಜೀವಂತವಾಗಿರಿಸಿದರು. ನಂಜನಗೂಡಿನ ಆಕಾಂಕ್ಷಿಗಳಾದ ಶಿವಕುಮಾರ, ಸೋಮಸುಂದರ್‌, ವರುಣಾದ ಅಭಿಷೇಕಗೌಡರು ತಮ್ಮ ಹೆಸರನ್ನು ಹೇಳಬಹುದು ಎಂದು ಕಾದಿದ್ದರು. ಈ ಕುರಿತು ಪ್ರಸ್ತಾಪಿಸಿದ ಗೌಡರು, ಅಭ್ಯರ್ಥಿಯ ಆಯ್ಕೆ ಈಗಲ್ಲ. ಅದಕ್ಕೆ ಸಮಿತಿ ಇದೆ, ಅಲ್ಲಿ ಚರ್ಚೆಯಾಗಬೇಕು ಎಂದು ಹೇಳಿ ಸುಮ್ಮನಾದರು.

ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಬಿಜೆಪಿ ಪರಿವರ್ತನಾ ಯಾತ್ರೆ ಈಗಾಗಲೇ ನೆಲ ಕಚ್ಚಿದೆ. ಕಾಂಗ್ರೆಸ್‌ ನವನಿರ್ಮಾಣ ವೇದಿಕೆಯೂ ಪ್ಲಾಪ್‌ ಆಗಲಿದೆ. ರಾಜ್ಯಕ್ಕೆ ಕುಮಾರಸ್ವಾಮಿಯವರ ಜೆಡಿಎಸ್‌ ಪಕ್ಷ ಮಾತ್ರ ಪರ್ಯಾಯವಾಗಿದೆ ಎಂದರು. ಈ ವೇಳೆ ಸ್ಪರ್ಧಾ ಆಕಾಂಕ್ಷಿಗಳಾದ ಬೆಳವಾಡಿ ಶಿವಕುಮಾರ, ಸೋಮಸುಂದರ್‌ ಮಾತನಾಡಿದರು.

ಹಾಗೆಯೇ ಪಕ್ಷಕ್ಕೇ ಸೇರ್ಪಡೆಯಾದ ರಾಜ್ಯ ಕುಂಬಾರ ಸಂಘದ ಅಧ್ಯಕ್ಷ ಚೌಡಶೆಟ್ಟಿ, ಮಹದೇವನಾಯಕ ಮತ್ತಿತರರನ್ನು ಮಾಜಿ ಪ್ರಧಾನಿ ದೇವೇಗೌಡರು ಹಾರ ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷದ ಜಿಲ್ಲಾಧ್ಯಕ್ಷ ಎನ್‌.ನರಸಿಂಹಸ್ವಾಮಿ, ವಿಶ್ರಾಂತ ಕುಲಪತಿ ರಂಗಪ್ಪ, ಜಿಪಂ ಅಧ್ಯಕ್ಷೆ ನಹೀಮಾ ಸುಲ್ತಾನ್‌, ಸಂತೋಷ, ಸುಜಾತಾ, ಸುಧಾ ಶಿವಕುಮಾರ, ಸಣ್ಣಪ್ಪಗೌಡ ರವಿಚಂದ್ರ, ಮಹದೇವಸ್ವಾಮಿ, ಭಾಸ್ಕರ್‌ಗೌಡ, ತಾಲೂಕು ಅಧ್ಯಕ್ಷ ಆರ್‌.ವಿ. ಮಹದೇವಸ್ವಾಮಿ ಮತ್ತಿತರರಿದ್ದರು.
 
ಬಿಜೆಪಿ ಸೇರಿದ ರಾಜಶೇಖರಮೂರ್ತಿ, ಎಸ್‌.ಎಂ.ಕೃಷ್ಣ, ಮುಂತಾದವರ ಕಥೆ ಏನಾಯಿತು?. ಕಮಲಕ್ಕೆ ಸೇರಿದ ಇವರ ರಾಜಕೀಯ ಜೀವನ ತಾವರೆಯಂತೆ ಮುರುಟಿ ಹೋಯಿತು ಎಂಬುದನ್ನು ರಾಜಕಾರಣಿಗಳೆಲ್ಲಾ ನೆನಪಿಟ್ಟುಕೊಳ್ಳಿ. ಹೀಗಾಗಿ ಜೆಡಿಎಸ್‌ ರಾಜ್ಯಕ್ಕೆ ನಿಜವಾದ ಪರ್ಯಾಯ ಎಂಬುದನ್ನು ಮರೆಯಬೇಡಿ.
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next