Advertisement
ಲೋಕಸಭಾ ಚುನಾವಣೆ: ಪಡೆದ ಮತ2014ರ ಲೋಕಸಭಾ ಚುನಾವಣೆಯಲ್ಲಿ ಚಲಾವಣೆ ಯಾದ 10,34,108 ಮತಗಳಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆಗೆ 5,81,168, ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆಯವರಿಗೆ 3,99,525, ಜೆಡಿಎಸ್‌ನ ವಿ. ಧನಂಜಯ ಕುಮಾರರಿಗೆ 14,895 ಮತಗಳು ದೊರಕಿದ್ದವು. ಆಗ ಪೈಪೋಟಿ ಇದ್ದದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ. ಜೆಡಿಎಸ್ ಆರಂಕಿಯನ್ನೂ ತಲುಪಿ ರಲಿಲ್ಲ. ಹಾಗೆ ನೋಡಿದರೆ 2012 ರ ಲೋಕಸಭಾ ಉಪ ಚುನಾವಣೆಯಲ್ಲೇ ಒಟ್ಟು ಚಲಾಯಿತ ಮತಗಳ 8, 52, 824 ಮತಗಳ ಪೈಕಿ ಜೆಡಿಎಸ್ ಅಭ್ಯರ್ಥಿ ಭೋಜೇಗೌಡರು 72, 080 ಮತಗಳನ್ನು ಪಡೆದಿದ್ದರು. ಆಗ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ 3,98,723 ಪಡೆದು ಆಯ್ಕೆಯಾಗಿದ್ದರು. ಬಿಜೆಪಿಯ ವಿ. ಸುನಿಲ್‌ಕುಮಾರ್ 3,52,999 ಮತ ಪಡೆದಿದ್ದರು. 2009ರ ಚುನಾವಣೆಯಲ್ಲೂ ಬಿಜೆಪಿಯ ಸದಾನಂದ ಗೌಡರು 4,01,441 ಗಳಿಸಿ ಗೆದ್ದಿದ್ದರೆ, ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆಯವರು 3,74,423 ಮತ ಗಳಿಸಿದ್ದರು. ಆಗ ಜೆಡಿಎಸ್ ಸ್ಪರ್ಧಿಸಿ ರಲಿಲ್ಲ. ಅಂದರೆ ಕಾಂಗ್ರೆಸ್ ನಿರ್ದಿಷ್ಟ ಸಂಖ್ಯೆಯ ಮತದಾರರ ಬೆಂಬಲವಿದ್ದರೆ, ಲಕ್ಷ ಮತ ಗಳಿಸಲೂ ಜೆಡಿಎಸ್ ಪ್ರಯಾಸ ಪಟ್ಟಿರುವುದು ಸ್ಪಷ್ಟ.
Related Articles
Advertisement
ಜೆಡಿಎಸ್ ಸಾಧನೆಲೋಕಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಮತ ಗಳಿಸಿದ್ದು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಐದಂಕಿ ಮುಟ್ಟದ ಜೆಡಿಎಸ್ ಅಭ್ಯರ್ಥಿಗಳು ಚಿಕ್ಕಮಗ ಳೂರು ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಧಾನಕರ ಮತ ಪಡೆದದ್ದು ಗೋಚರಿಸುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗಳು ವೈಯಕ್ತಿಕ ವರ್ಚಸ್ಸಿನ ಆಧಾರದಲ್ಲಿ ಮತ ಗಳಿಸಿರಬಹುದು. 8 ವಿಧಾನಸಭಾ ಕ್ಷೇತ್ರಗಳ ಪೈಕಿ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಆದ ಕಾರಣ ಬಿಜೆಪಿ ಬಳಿಕ ಕಾಂಗ್ರೆಸ್ ಉತ್ತಮ ಸ್ಥಿತಿಯಲ್ಲಿದೆ. “ಎರಡೂ ಜಿಲ್ಲೆಗಳ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದರೆ ಸ್ಥಾನ ಕೈತಪ್ಪುವುದನ್ನು ತಡೆಯಬಹುದಿತ್ತು ಎನ್ನುತ್ತಾರೆ ಕೆಲವು ಕಾಂಗ್ರೆಸ್ ನಾಯಕರು. ಟಯರ್ ಸುಟ್ಟು ಕಾಂಗ್ರೆಸ್ ಪ್ರತಿಭಟನೆ
ಉಡುಪಿ: ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದನ್ನು ವಿರೋಧಿಸಿ ಗುರುವಾರ ರಾತ್ರಿ ಜಿಲ್ಲಾ ಕಾಂಗ್ರೆಸ್ ಭವನದ ಎದುರು ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಟಯರ್ ಸುಟ್ಟು ಪ್ರತಿಭಟನೆ ನಡೆಸಿದರು. ನಾಯಕರಾದ ವಿಶ್ವಾಸ್ ಅಮೀನ್, ಯತೀಶ ಕರ್ಕೇರ, ಪ್ರಖ್ಯಾತ ಶೆಟ್ಟಿ, ಮಹಮ್ಮದ್ ಇಮ್ರಾನ್ ಪಾಲ್ಗೊಂಡಿದ್ದರು. ಮೈಸೂರು- ಉಡುಪಿ ಅದಲು ಬದಲು?
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಿ ಮೈಸೂರನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆ ಇದೆಯೆ? ಬುಧವಾರದ ಮಾತುಕತೆಯಲ್ಲಿ ಡಾ| ಜಿ. ಪರಮೇಶ್ವರ್ ಅವರ ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಸಿದ್ದರಾಮಯ್ಯನವರ ಮೈಸೂರನ್ನು ಉಳಿಸಿಕೊಳ್ಳಲಾಯಿತು. ಈಗ ಅದನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಮಾತುಕತೆ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು. – ಮಟಪಾಡಿ ಕುಮಾರಸ್ವಾಮಿ