Advertisement

ಜೆಡಿಎಸ್‌ ಒಳ ಏಟು, ದಲಿತ ಓಟು, ಬಿಜೆಪಿ ಗೆಲುವಿನ ಗುಟ್ಟು

10:17 PM May 24, 2019 | Team Udayavani |

ಚಾಮರಾಜನಗರ: ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸಂಸದ ಆರ್‌.ಧ್ರುವನಾರಾಯಣ ಅವರು ಅಭಿವೃದ್ಧಿ ಕೆಲಸಗಳಲ್ಲಿ ದೇಶದ ಮೂರನೇ ಮತ್ತು ರಾಜ್ಯದ ಮೊದಲನೇ ಸಂಸದ ಎಂಬ ಹೆಗ್ಗಳಿಕೆ ಪಡೆದಿದ್ದರೂ, ಸೋಲು ಕಾಣಲು ಪ್ರಮುಖ ಕಾರಣವಾದದ್ದು, ದೇಶಾದ್ಯಂತ ಎದ್ದ ಮೋದಿ ಅಲೆ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಅವರ ವೈಯಕ್ತಿಕ ವರ್ಚಸ್ಸು.

Advertisement

ಶ್ರೀನಿವಾಸ ಪ್ರಸಾದ್‌ ಅವರು 1,817 ಮತಗಳ ಅಂತರದ ಪ್ರಯಾಸದ ಗೆಲುವು ಸಾಧಿಸಿದ್ದಾರೆ. 18 ಸುತ್ತುಗಳಲ್ಲೂ ಮುಂದಿದ್ದ ಧ್ರುವ ಅವರನ್ನು ಕೊನೆಯ ನಾಲ್ಕು ಸುತ್ತುಗಳಲ್ಲಿ ಹಿಂದಿಕ್ಕಿ ಜಯವನ್ನು ಬಿಜೆಪಿ ತನ್ನದಾಗಿಸಿಕೊಂಡಿತು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಐದು ಬಾರಿ ಗೆದ್ದು, ಸಂಸದರಾಗಿದ್ದ ಶ್ರೀನಿವಾಸಪ್ರಸಾದ್‌ಗೆ ಕ್ಷೇತ್ರದ ಆಳ-ಅಗಲ ಕರಗತವಾಗಿದೆ.

ಧ್ರುವನಾರಾಯಣ ಅವರು ಕ್ಷೇತ್ರದ ಮೂಲೆ, ಮೂಲೆ ಗಳಿಗೂ ಹೋಗಿ ಮತಯಾಚಿಸಿದರೆ, ಶ್ರೀನಿವಾಸಪ್ರಸಾದ್‌ ಅವರು ಬಹಿರಂಗ ಪ್ರಚಾರಕ್ಕೆ ಹೆಚ್ಚು ಬರಲಿಲ್ಲ. ತಮ್ಮ ಅನು ಭವದ ಬಲದಿಂದ ಗೆಲುವಿನ ತಂತ್ರಗಳನ್ನು ಪ್ರಯೋಗಿಸಿ ಯಶಸ್ವಿಯಾದರು.

* ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿರುವ ದಲಿತ ಮತಗಳು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಾಗಿದ್ದವು. ರಾಜ್ಯದ ಅಗ್ರಪಂಕ್ತಿಯ ದಲಿತ ನಾಯಕರಾಗಿರುವ ಶ್ರೀನಿವಾಸಪ್ರಸಾದ್‌ ಅವರು ಬಿಜೆಪಿಯವರಾದರೂ ಸಹ ತಮ್ಮ ಶಕ್ತಿಯಿಂದ ದಲಿತ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಪಡೆಯುವಲ್ಲಿ ಯಶಸ್ವಿಯಾದರು.

* ಇನ್ನು, ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿ ನಿರೀಕ್ಷೆಗಿಂತ ಹೆಚ್ಚು ಮತಗಳನ್ನು ಪಡೆದದ್ದು ಸಹ ಕಾಂಗ್ರೆಸ್‌ಗೆ ಮುಳುವಾಯಿತು. ಬಿಎಸ್‌ಪಿಯ ಡಾ.ಶಿವಕುಮಾರ್‌ 87,631 ಮತಗಳನ್ನು ಪಡೆದರು. ಕಳೆದ ಬಾರಿ ಬಿಎಸ್‌ಪಿ 34 ಸಾವಿರ ಮತಗಳನ್ನು ಪಡೆದಿತ್ತು. ಬಿಎಸ್‌ಪಿ ಕಸಿದುಕೊಂಡಿರುವ ಮತಗಳಲ್ಲಿ ಹೆಚ್ಚಿನವು ಕಾಂಗ್ರೆಸ್‌ಗೆ ಬರಬೇಕಾಗಿದ್ದ ಮತಗಳು.

Advertisement

* ಕ್ಷೇತ್ರದಲ್ಲಿ ಪುಟ್ಟರಂಗ ಶೆಟ್ಟಿ ಶಾಸಕರಾದ ನಂತರ ಉಪ್ಪಾರ ಸಮುದಾಯದ ಮತಗಳು ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷಕ್ಕೆ ಹೋಗುತ್ತಿರಲಿಲ್ಲ. ಈ ಬಾರಿ ಉಪ್ಪಾರ ಮತಗಳು ಗಮನಾರ್ಹ ಪ್ರಮಾಣದಲ್ಲಿ ಬಿಜೆಪಿಗೆ ಹೋಗಿವೆ. ಅದೇ ಸಮುದಾಯದ ಉಸ್ತುವಾರಿ ಸಚಿವರಿದ್ದರೂ ಉಪ್ಪಾರರ ಮತಗಳನ್ನು ಇಡುಗಂಟಾಗಿ ಉಳಿಸಿಕೊಳ್ಳುವಲ್ಲಿ ಅವರು ಸಫ‌ಲರಾಗಲಿಲ್ಲ.

* ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next