Advertisement
//yezdi.com/ ಇದು ಅಧಿಕೃತ ವೆಬ್‌ಸೈಟ್ ಆಗಿದ್ದು, ಹಳೆಯ ಯಜ್ಡಿ ಬ್ರ್ಯಾಂಡ್‌ನ ಬೈಕ್‌ಗಳ ವಿವರಗಳನ್ನು ನೀಡ ಲಾಗಿದೆ. ಇದನ್ನು ಮಹೀಂದ್ರಾ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. 70-80ರ ದಶಕದಲ್ಲಿ ಈ ಬೈಕ್‌ಗಳು ಹೆಸರುವಾಸಿ ಯಾಗಿದ್ದು ಮೈಸೂರಿನಲ್ಲಿ ತಯಾರಾಗು ತ್ತಿದ್ದವು. ಇತ್ತೀಚೆಗೆ ಬಿಎಸ್‌ಎ ಬ್ರ್ಯಾಂಡ್ ಖರೀದಿಸುವ ಮೂಲಕ ಮಹೀಂದ್ರಾ ಜಾವಾದಿಂದ ಭಾರತದಲ್ಲಿ ಯಜ್ಡಿ ಬೈಕ್‌ಗಳ ಸಂಪೂರ್ಣ ಹಕ್ಕುಗಳನ್ನು ಪಡೆದುಕೊಂಡಿದೆ. ಮುಂದಿನ ವರ್ಷ ನಡೆಯಲಿರುವ ದಿಲ್ಲಿಯ ಆಟೋ ಎಕ್ಸ್‌ಪೋದಲ್ಲಿ ಹೊಸ ತಲೆಮಾರಿನ ಯಜ್ಡಿ ಬೈಕ್ ಬಿಡುಗಡೆ ಯಾಗುವ ನಿರೀಕ್ಷೆ ಇದೆ. ಮಧ್ಯಪ್ರದೇಶದ ಪೀತಾಂಪುರ್‌ನಲ್ಲಿ ಯಜ್ಡಿ ತಯಾರಾಗಲಿವೆ. 90ರ ದಶಕದಲ್ಲಿ ಮೈಸೂರಿನಲ್ಲಿದ್ದ ಯಜ್ಡಿ ತಯಾರಿಕಾ ಘಟಕ ಬಂದ್ ಆಗಿತ್ತು. Advertisement
ಶೀಘ್ರ ಬರಲಿದೆ ಜಾವಾ ಯಜ್ಡಿ ಬೈಕ್
08:00 AM Jul 23, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.