Advertisement

ಆರ್ಥಿಕ ಶಿಸ್ತಿಗೆ ಜಪಾನಿನ ಕಾಕಿಬೋ ಸೂತ್ರ

09:45 PM Jan 12, 2020 | Sriram |

ಜಗತ್ತಿನಲ್ಲಿ ಹಣಕಾಸಿನ ಸಮಸ್ಯೆ ಎಲ್ಲರನ್ನೂ ಕಾಡುವಂತಹದ್ದೇ. ಇದು 15 ಸಾ. ರೂ. ವೇತನ ಪಡೆಯುವವನಿಂದ ಲಕ್ಷ ಮಾಸಿಕ ಸಂಬಳ ಪಡೆ ಯುವ ವ್ಯಕ್ತಿಯದು ಅದೇ ಗೋಳು. ಎಲ್ಲರಲ್ಲೂ ಖರ್ಚು ಮತ್ತು ಉಳಿತಾಯಗಳು ನಿಯಂತ್ರಣಕ್ಕೆ ಬರದೇ ಈ ಸಮಸ್ಯೆಗಳು ಹೆಚ್ಚಾಗುತ್ತವೆ.

Advertisement

ಆರ್ಥಿಕ ಶಿಸ್ತು ಉಲ್ಲಂಘನೆಯಾಗುತ್ತಿರುವ ವೇಳೆ ಯಲ್ಲಿಯೆ ಎಚ್ಚೆತ್ತುಕೊಂಡರೆ ಈ ಸಂಭಾವ್ಯ ಆರ್ಥಿಕ ಅನಾಹುತದಿಂದ ತಪ್ಪಿಸಿಕೊಳ್ಳಬಹುದು. ಈ ಕುರಿತಂತೆ ಜಪಾನಿನಲ್ಲಿ ಒಂದು ಒಳ್ಳೆಯ ಉಳಿತಾಯ ವ್ಯವಸ್ಥೆ ಇದೆ.

“ಕಾಕಿಬೋ’ ಜಪಾನ್‌ ಮೂಲದ ಹಣ ಉಳಿಸುವ ಸರಳ ವಿಧಾನವಾಗಿದ್ದು, ಮೊಟೊಕೊ ಹನಿ ಎಂಬ ಪತ್ರಕರ್ತೆ 1094ರಲ್ಲಿ ಈ ಒಂದು ಸ್ವಯಂಪ್ರೇರಿತ ಹಣ ಉಳಿತಾಯ ಮಾರ್ಗೋ ಪಾಯವನ್ನು ಪರಿಚಯಿಸಿದ್ದರು. ಬಳಿಕ ಇದು ಆ ದೇಶದಲ್ಲಿ ಹೆಚ್ಚು ಪಾಲಕರನ್ನು ಪಡೆಯಿತು. ಮೊಟೊಕೊ ಹನಿ ಜಪಾನ್‌ ದೇಶದ ಮೊದಲ ಮಹಿಳಾ ನಿಯತಕಾಲಿಕದ ಸ್ಥಾಪಕರಾಗಿದ್ದು, ಖರ್ಚು ವೆಚ್ಚಗಳನ್ನು ಹೇಗೆ ನಿಯಂತ್ರಿಸಬಹುದು ಎಂಬ ತಂತ್ರಗಾರಿಕೆ ಇದರಲ್ಲಿದೆ. ಹಣದ ಕೊರತೆ ನೀಗಿಸಲು ಕಾಕಿಬೋ ನೆರವಾಗಲಿದ್ದು, ಸರಳ ಹಣ ಉಳಿತಾಯ ಮಾರ್ಗಗಳನ್ನು ಸೂಚಿಸಲಿದೆ.

ಬರೆದಿಟ್ಟುಕೊಳ್ಳುವಿಕೆ
ಒಂದು ನೋಟ್‌ಬುಕ್‌ ಮತ್ತು ಪೆನ್‌ ನಿಮ್ಮ ಹಣವನ್ನು ಉಳಿಸಲು ನೆರವಾಗಲಿದೆ. ದುಂದು ವೆಚ್ಚಕ್ಕೆ ಮೊದಲ ಕಾರಣವೆಂದರೆ ಸರಿಯಾದ ಬಜೆಟ್‌ ಇಲ್ಲದೇ ಇರುವುದು. ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡಿ, ಕೊನೆಗೆ ಹಣ ಹೇಗೆ ಖರ್ಚಾ ಗಿ ಹೋಯ್ತು ಎಂದು ಲೆಕ್ಕ ಹಾಕುವುದರಲ್ಲೇ ಹೆಚ್ಚು ಕಾಲ ಕಳೆಯಬೇಕಾಗುತ್ತದೆ. ನಿಮ್ಮ ಖರ್ಚು ವೆಚ್ಚಗಳ ವಿವರಗಳನ್ನು ಪುಸ್ತಕದಲ್ಲಿ ಬರೆದಿಡಲು ಸೂಚಿಸುತ್ತದೆ. ಈ ಮೂಲಕ ತಿಂಗಳಿಗೆ ಎಷ್ಟು ಹಣ ಖರ್ಚು ಮಾಡುತ್ತೀರಿ ಎಂಬ ಲೆಕ್ಕ ಒಂದೇ ಕಡೆ ಲಭ್ಯವಾಗಿ, ಖರ್ಚಿನ ನಿಯಂತ್ರಣವಾಗುತ್ತದೆ.

ಯಾವುದಕ್ಕೆ ಆದ್ಯತೆ
ಕಡಿಮೆ ವೇತನವಿದ್ದರೂ ಕೂಡ ಚೆನ್ನಾಗಿ ಬಾಳಲು ಸಾಧ್ಯವಿದೆ. ಹಣವಿದ್ದಾಗ ಮತ್ತು ಇಲ್ಲದಿದ್ದಾಗ ಒತ್ತಡ ಇರುವುದು ಸಹಜ. ಆದರೆ ಶಾಂತವಾಗಿ ಯೋಚಿಸಿ. ಹಣವನ್ನು ಆವಶ್ಯಕತೆಗೆ ತಕ್ಕಂತೆ ಮಿತವಾಗಿ, ಹಿತವಾಗಿ ಬಳಸಿ. ನಿಮಗೆ ಅಗತ್ಯವೆನ್ನಿಸುವ ವಸ್ತುಗಳ ಮೇಲೆ ಮಾತ್ರ ಹಣ ವ್ಯಯಿಸಬೇಕು. ಕಾಕಿಬೋ ನಿಮ್ಮ ಖರ್ಚುಗಳು ಮತ್ತು ಆದಾಯದ ಆಧಾರದ ಮೇಲೆ ನಿಮ್ಮ ಅಗತ್ಯ ವಸ್ತುಗಳ ಪಟ್ಟಿ ಮಾಡಲು ಸೂಚಿಸುತ್ತದೆ. ಈ ಮೂಲಕ ಉಳಿತಾಯವನ್ನು ಹೇಗೆ ಆರಂಭಿ ಸಬೇಕು ಎಂಬುದರ ಕುರಿತು ನಿಮಗೆ ಸ್ಪಷ್ಟವಾದ ಆಲೋಚನೆ ಲಭ್ಯವಾಗುತ್ತದೆ.

Advertisement

ಬ್ಯಾಂಕ್‌ ಬ್ಯಾಲೆ®Õ… ಚೆಕ್‌ ಮಾಡಿ
ನಿಮ್ಮ ಬಜೆಟ್‌ ಹಾಗೂ ಉಳಿತಾಯ ಖಾತೆಗಳ ಮೇಲೆ ಕಣ್ಣಿಡಿ. ಬಜೆಟ್‌ ಹಾಗೂ ಉಳಿತಾಯವು ಯಾವ ಪ್ರಮಾಣದಲ್ಲಿ ಆಗುತ್ತಿದೆ ಎಂಬುದರ ಕುರಿತು ಗಮನವಿರಲಿ. ಆಗಾಗ ಉಳಿತಾಯ ಖಾತೆಗಳ ಮೊತ್ತವನ್ನು ಪರಿಶೀಲಿಸಿ. ಒಂದು ವೇಳೆ ಅಂದುಕೊಂಡಷ್ಟು ಉಳಿತಾಯ ಸಾಧ್ಯವಾಗುತ್ತಿಲ್ಲ ಎಂದು ಅರಿವಾದರೆ, ಅದಕ್ಕೆ ಅಡ್ಡಿಯಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ.

ನಗದು ರಹಿತ ವ್ಯವಹಾರ ನಿಗಾ ಇರಲಿ
ವ್ಯಾಪಾರ ವಹಿವಾಟು ಖರೀದಿಗಾಗಿ ಕಾರ್ಡ್‌ ಗಳನ್ನು ಸ್ವೆ „ಪ್‌ ಮಾಡುವ ಬದಲು ನೇರವಾಗಿ ಹಣ ನೀಡಲು ಪ್ರಯತ್ನಿಸಿ. ಅವಕಾಶವಿದ್ದಲ್ಲಿ ನಗದು ರೂಪದಲ್ಲಿ ಹೆಚ್ಚು ಖರ್ಚು ಮಾಡಲು ಪ್ರಯತ್ನಿಸಿ. ಕೈಯಲ್ಲಿ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಇದ್ದರೆ ಶಾಪಿಂಗ್‌ ಮಾಡುವಾಗ ಮನಸ್ಸಿನ ಮೇಲೆ ನಿಯಂತ್ರಣ ಇರುವುದಿಲ್ಲ. ಈ ಮೂಲಕ ಹಣದ ಉಳಿತಾಯ ಮಾಡಬಹುದು.

ಆನ್‌ಲೈನ್‌ ಶಾಪಿಂಗ್‌ ಮೂಲಕ ಡಿಜಿಟಲ್‌ ಉತ್ಪನ್ನಗಳಿಗಾಗಿ ಹಣ ಪಾವತಿಸಬೇಡಿ. ಈ ಉತ್ಪನ್ನಗಳು ಮುಖ್ಯವಾಗಿ ಸಾಫ್ಟ್ವೇರ್‌ ಮತ್ತು ಡೌನೊÉàಡ್‌ ಮಾಡಬಹುದಾದ ಸಾಮಗ್ರಿಗಳನ್ನು ಹೊಂದಿರುತ್ತವೆ. ಕಾರ್ಡ್‌ ಮೂಲಕ ಪಾವತಿಸಿ ಇಂತಹ ಉತ್ಪನ್ನಗಳನ್ನು ಖರೀದಿಸುದಕ್ಕಿಂತ ಶಾಪ್‌ಗ್ಳಿಂದ ಖರೀದಿಸಿ.

 -ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next