Advertisement

ಜನತಾ ಕರ್ಫ್ಯೂ ನಡುವೆ ಯೋಗದಾನ

03:04 PM May 07, 2021 | Team Udayavani |

ದೇವನಹಳ್ಳಿ: ಪಟ್ಟಣದ ರಾಣಿ ಸರ್ಕಲ್‌ನಬಳಿಯ ಮುತ್ತಪ್ಪರೈ ಲೇಔಟಿನಲ್ಲಿ ದೇವನಹಳ್ಳಿ ಪಟ್ಟಣದ ಯುವಕರ ತಂಡವೊಂದುಪಟ್ಟಣದಲ್ಲಿ ಬೀದಿ ಅಲೆಯುವ ಭಿಕ್ಷುಕರನನ್ನು ಕರೆತಂದು ಅವರಿಗೆ ಕ್ಷೌರ ಮಾಡಿಸಿ,ಉಡುಪು ನೀಡಿ ಹೊಸ ಹುರುಪು ತುಂಬುವ ಕೆಲಸ ಮಾಡುತ್ತಿದ್ದಾರೆ.

Advertisement

ಪಟ್ಟಣದ ವಿವಿದ ಕಡೆಗಳ ಬಸ್‌ಸ್ಟಾಂಡ್‌,ಜಗುಲಿ, ದೇವಾಲಯ, ರಸ್ತೆ ಅಕ್ಕ ಪಕ್ಕಹಾಗೂ ಇತರೆ ಜಾಗಗಳಲ್ಲಿ ಹೊಟ್ಟೆಗೆ, ಬಟ್ಟೆಗೆಇಲ್ಲದೆ ನರಳುತ್ತಿರುವ ಭಿಕ್ಷುಕರನ್ನು ತಮ್ಮಸ್ವಂತ ವಾಹನದಲ್ಲಿ ಒಂದು ಜಾಗದಲ್ಲಿ ಕರೆತಂದು ಅವರಿಗೆ ಸೇವೆ ಸಲ್ಲಿಸಿ, ಅವರ ತಲೆಯುದ್ದಕ್ಕೂ ಬೆಳೆದ ಕೂದಲು ತೆಗೆದು, ಸ್ನಾನಮಾಡಿಸಿ, ಹೊಸ ಬಟ್ಟೆ ನೀಡಿ, ಊಟಕೊಟ್ಟು ಆಶ್ರಮಕ್ಕೆ ಸೇರಿಸುವ ಪ್ರಯತ್ನದೇವನಹಳ್ಳಿ ಯುವಕರ ತಂಡ ಮಾಡಿದೆ.

ಯುವಕ ಸಂತೋಷ್‌ ಮಾತನಾಡಿ,ಸುಮಾರು 50 ಜನ ಯುವಕರು ತಂಡೋಪತಂಡವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಲಾಕ್‌ಡೌನ್‌ ಸಂದರ್ಭ ದಲ್ಲಿ ಆಸ್ಪತ್ರೆಗಳಲ್ಲಿ ಬೆಡ್‌ಸಿಗುತ್ತಿಲ್ಲ, ಆಕ್ಸಿಜನ್‌ ಕೊರತೆ ಆಗುತ್ತಿದೆ.ಅದೇ ರೀತಿ, ಫ‌ುಟ್‌ಬಾತ್‌ನಲ್ಲಿ ಬಿಕ್ಷುಕರುಯಾರಿದ್ದಾರೆ ಅವರಿಗೆ ಯಾರು ಸಹಾಯಮಾಡುತ್ತಿಲ್ಲ. ಅಂತಹವರಿಗೆ ನಮ್ಮ ಕೈಲಾದಸಹಾಯ ಮಾಡಲಾಗುತ್ತಿದೆ. ಈಗಾಗಲೇಸುಮಾರು ಐದಾರು ಮಂದಿಗೆ ಸೇವೆ ನೀಡಿದ್ದು, ಅದ ರಲ್ಲಿ ಕೆಲವರು ಗಾಯಗಳಿಂದಕೂಡಿದ ದೇಹಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ದೇವನಹಳ್ಳಿ ಆರಕ್ಷಕ ಠಾಣೆ ಮತ್ತು ಪಿಎಸ್‌ಐ ನಾಗರಾಜ್‌ ಅವರ ಸಹಕಾರದಲ್ಲಿಸೇವೆಗೆ ಮುಂದಾಗಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next