Advertisement

ಪ್ರತ್ಯೇಕ ಜಿಲ್ಲೆಗಾಗಿ ಜಮಖಂಡಿ ಬಂದ್ ಸಂಪೂರ್ಣ ಯಶಸ್ವಿ

10:02 AM Oct 04, 2019 | sudhir |

ಬಾಗಲಕೋಟೆ : ಜಿಲ್ಲೆಯ ಕಂದಾಯ ಉಪವಿಭಾಗ ಆಗಿರುವ ಜಮಖಂಡಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಗುರುವಾರ ಕರೆ ನೀಡಿದ್ದ ಜಮಖಂಡಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

Advertisement

ಜಿಲ್ಲಾ ಕೇಂದ್ರ ಘೋಷಣೆಗೆ ಒತ್ತಾಯಿಸಿ ನಗರದ ವ್ಯಾಪಾರಸ್ಥರು ಸ್ವಯಂ ಪ್ರೇರಯಿಂದ ಅಂಗಡಿ-ಮುಗ್ಗಟ್ಟು ಬಂದ್ ಮಾಡಿದ್ದರು. ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯಲಿಲ್ಲ. ಇನ್ನು ಶಾಲಾ-ಕಾಲೇಜುಗಳಿಗೆ ಸ್ಥಳೀಯವಾಗಿ ರಜೆ ನೀಡಲಾಗಿತ್ತು. ಜಮಖಂಡಿ ಹಾಗೂ ಸಾವಳಗಿ ಹೋಬಳಿ ವ್ಯಾಪ್ತಿಯ ಸಾವಿರಾರು ಜನರು, ಪ್ರಮುಖರು ಪಕ್ಷಾತೀತವಾಗಿ ಬಂದ್‌ನಲ್ಲಿ ಪಾಲ್ಗೊಂಡು, ಬ್ರಿಟಿಷರ ಆಡಳಿತದಲ್ಲಿ ಸಂಸ್ಥಾನ ಕೇಂದ್ರವಾಗಿದ್ದ ಜಮಖಂಡಿ, ಪ್ರಸ್ತುತ ಜಿಲ್ಲಾ ಕೇಂದ್ರವಾದ ಬಾಗಲಕೋಟೆಯಿಂದ 90ಕ್ಕೂ ಹೆಚ್ಚು ಕಿ.ಮೀ ದೂರವಿದೆ. ಜಿಲ್ಲಾ ಕೇಂದ್ರವಾಗಲು ಜಮಖಂಡಿ, ಎಲ್ಲ ರೀತಿಯಿಂದಲೂ ಸಶಕ್ತವಾಗಿದ್ದು, ಸರ್ಕಾರ ತಕ್ಷಣವೇ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಲಾಯಿತು.

ಜಮಖಂಡಿ ನಗರದ ಹನುಮಾನ ಚೌಕ್‌ನಿಂದ ಆರಂಭಗೊಂಡ ಬೃಹತ್ ಪ್ರತಿಭಟನೆ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು, ಬಸ್ ನಿಲ್ದಾಣ ಪಕ್ಕದಲ್ಲಿರುವ ಎ.ಜಿ. ದೇಸಾಯಿ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ, ಗಮನ ಸೆಳೆಯಲಾಯಿತು.

ಓಲೇಮಠದ ಡಾ.ಚನ್ನಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಕೊಣ್ಣೂರಿನ ಡಾ.ಪ್ರಭು ದೇವರು, ಬನಹಟ್ಟಿ ವಿರಕ್ತಮಠದ ಶಿವಾಚಾರ್ಯರು ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಸ್ವಾಮೀಜಿಗಳು, ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next