ಸಾಮಾನ್ಯವಾಗಿ ನದಿಯ ದಂಡೆಯು ಕೆಸರಿನಿಂದ ಆವೃತವಾಗಿರುತ್ತದೆ, ಅಥವಾ ನೀರಿಲ್ಲದೆ ಒಣಗಿ ಹೋಗಿರುತ್ತದೆ. ಎರಡೂ ಸಮಯದಲ್ಲೂ ಓಡಾಡಲು ನಮಗೆ ಕಷ್ಟವೆನಿಸಬಹುದು. ಯಾಕೆಂದರೆ, ಆ ಕೆಸರಿನಲ್ಲಿ ಕಾಲು ಹೂತು ಹೋದರೆ ಎಂಬ ಭಯ. ಇಲ್ಲವೇ ಕೊರಕಲಿನಲ್ಲಿ ಗಾಯವಾಗಬಹುದು ಎಂಬುದು ಅದಕ್ಕೆ ಕಾರಣವಿರಬಹುದು. ಆದರೆ ಛತ್ತೀಸ್‌ಗಡ ರಾಜ್ಯದಲ್ಲಿರುವ ಶಿಮ್ಲಾ ಎನ್ನುವ ಪ್ರದೇಶದಲ್ಲಿನ “ಜಲ್‌ಜಲಿ ‘ ಎಂಬ ನದಿಗೆ ಜನ ತಂಡೋಪತಂಡವಾಗಿ ಆಗಮಿಸಿ ಅಲ್ಲಿನ ದಡದ ಮೇಲೆ ಕುಣಿದು ಕುಪ್ಪಳಿಸುತ್ತಾರೆ. ಅರೇ, ಇದೇನಿದು? ನದಿಯ ದಡದಲ್ಲೇಕೆ ಕುಣಿದು ಕುಪ್ಪಳಿಸುತ್ತಾರೆ ಎಂದು ಆಶ್ಚರ್ಯವಾಗು ತ್ತದೆಯಲ್ಲವೇ? ಈ ನದಿ ದಂಡೆಯ ಮೇಲೆ ಕಾಲಿಟ್ಟಾಗ ಕಾಲು ಹೂಳಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಬದಲಾಗಿ ಚೆಂಡಿನಂತೆ ಮೇಲಕ್ಕೆ ಪುಟಿದು ನೆಗೆಯುವಂತೆ ಮಾಡು ತ್ತದೆ. ಅದೇ ಈ ನದಿ ದಂಡೆಯ ವೈಶಿಷ್ಟ್ಯ ಹಾಗೂ ವಿಸ್ಮಯ.
ಈ ನದಿಯನ್ನು ನೋಡಲಿಕ್ಕಾಗಿಯೇ ಪ್ರವಾಸಿಗರು ದೂರದೂರಿನಿಂದ ಬರುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸ್ಥಳೀಯರು ಹೇಳುವ ಪ್ರಕಾರ, ಈ ಜಾಗವು ಹಿಂದೆ ಒಣಗಿಹೋಗಿದ್ದ ನದಿಯ ಜೌಗು ಪ್ರದೇಶವಾಗಿತ್ತಂತೆ. ಕಾಲಾಂತರದಲ್ಲಿ ಭೂಮಿಯ
ಅಂತರಾಳದಲ್ಲಿ ಉಕ್ಕುವ ನೀರಿನ ಸೆಲೆಯಿಂದ ಮತ್ತೆ ನೀರನ್ನು ಹಿಡಿದಿಟ್ಟುಕೊಂಡು ನಿಂತಿದೆ. ಹಾಗಾಗಿ ಈ ನೀರಿನ ಮೇಲ್ಮೆ„ ಸ್ಪಂಜಿನಂತೆ ವರ್ತಿಸುತ್ತದೆ. ಕೆಲವರ ಪ್ರಕಾರ ಈ ಸ್ಥಳವು ಭೂಕಂಪನದಿಂದ ಉಂಟಾಗಿದೆ ಎಂದು ಹೇಳುತ್ತಾರೆ. ಏನೇ ಆದರೂ
ಈ ತಾಣ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.
ಪುರುಷೋತ್ತಮ್