Advertisement

ಜೈಲು ಹಕ್ಕಿಗಳಿಗೆ ಈ ಬಾರಿ ಬಿಡುಗಡೆ ಭಾಗ್ಯ ಇಲ್ಲ

06:00 AM Aug 15, 2017 | Harsha Rao |

ಬೆಂಗಳೂರು: 71ನೇ ಸ್ವಾತಂತ್ರೊತ್ಸವದಲ್ಲಿ ಸನ್ನಡತೆ ಆಧರಿಸಿ ಬಿಡುಗಡೆ ಕನಸು ಹೊತ್ತ ಕೈದಿಗಳಿಗೆ ತಪ್ಪದು
ಜೈಲುವಾಸ! ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮದಿಂದ ಮುಜುಗರಕ್ಕೊಳಗಾಗಿರುವ
ರಾಜ್ಯ ಸರ್ಕಾರ ಕೈದಿಗಳ ಬಿಡುಗಡೆ ಭಾಗ್ಯಕ್ಕೆ ಕೊಕ್ಕೆಹಾಕಿ ದೆ. ಇತ್ತ ಕಾರಾಗೃಹದ ಹಿರಿಯ ಅಧಿಕಾರಿಗಳು ಕೂಡ ಸನ್ನಡತೆ ಕೈದಿಗಳ ಪಟ್ಟಿ ಸಿದಟಛಿಪಡಿಸಿದ್ದರೂ ಸರ್ಕಾರ ಮಾತ್ರ ಅದರ ಗೋಜಿಗೇ ಹೋಗಿಲ್ಲ.

Advertisement

ಸಾಮಾನ್ಯವಾಗಿ ಪ್ರತಿ ಸ್ವಾತಂತ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದಂತೆ ರಾಜ್ಯದ ಇತರೆ ಜೈಲಿನಲ್ಲಿರುವ ಜೀವಾವಧಿ ಹಾಗೂ ಕೊಲೆ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಪೈಕಿ ಉತ್ತಮ ನಡವಳಿಕೆ ಹಾಗೂ ಮೌಲ್ಯಯುತ ಗುಣಗಳನ್ನು ಬೆಳೆಸಿಕೊಂಡ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಪಟ್ಟಿಮಾಡಿ ರಾಜ್ಯಪಾಲರ ಅನುಮತಿ ಪಡೆದು ಬಿಡುಗಡೆಮಾಡುವುದು ವಾಡಿಕೆ.

ಅದರಂತೆ ಡಾ. ಪರಮೇಶ್ವರ ಅವರು ಗೃಹ ಸಚಿವರಾದ ಅವಧಿಯಲ್ಲಿ ಸನ್ನಡತೆ ಆಧಾರದ ಮೇಲೆ ಕೈದಿಗಳ ಪಟ್ಟಿ ಮಾಡಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ಯೊತ್ಸವ ದಿನಾಚರಣೆಯಲ್ಲಿ 500ಕ್ಕೂ ಅಧಿಕ ಕೈದಿಗಳನ್ನು ಬಿಡುಗಡೆ ಮಾಡಿಸಿದ್ದರು.
ಆದರೆ, ಈ ಬಾರಿ ತಮಿಳುನಾಡು ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್‌ ಹಾಗೂ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲ್‌ ತೆಲಗಿಗೆ ಐಷಾರಾಮಿ ಜೀವನ ನಡೆಸಲು ಕೋಟ್ಯಂತರ ರೂ. ಲಂಚದ ವ್ಯವಹಾರ ನಡೆದಿದೆ. ಇದರೊಂದಿಗೆ ಜೈಲಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಸೇರಿದಂತೆ ಅನೇಕ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಡಿಐಜಿ ರೂಪ ಡಿಜಿ ಸತ್ಯನಾರಾಣರಾವ್‌ಗೆ ವರದಿ ಸಲ್ಲಿಸಿದ್ದರು. ಇದರಿಂದ ತೀವ್ರ ಮುಜುಗರ
ಕ್ಕೊಳಗಾದ ಸರ್ಕಾರ ಕೂಡಲೇ ಎಲ್ಲ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಹೊಸ ಕಾಯಕಲ್ಪ ನೀಡಿತು. ಆದರೆ, ಸ್ವಾತಂತ್ಯ  ದಿನಾಚರಣೆ ಮತ್ತು ಗಣರಾಜ್ಯೋತ್ಸವದ ವೇಳೆ ಬಿಡುಗಡೆಯಾಗುವ ಕೈದಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಮಾನದಂಡಗಳೇನು?
ಪಟ್ಟಿಯಲ್ಲಿರುವ ಮಹಿಳೆಯರು ಹಾಗೂ ಪುರುಷರ ವಯಸ್ಸು ಎಷ್ಟು. 60ರಿಂದ 70 ವಯೋಮಾನದ ವೃದಟಛಿರು. ಯಾವ ಪ್ರಕರಣದಲ್ಲಿ ಜೈಲು ಸೇರಿದ್ದಾರೆ ಎಂಬೆಲ್ಲ ಮಾಹಿತಿಯನ್ನು ಶಿಫಾರಸ್ಸಿನ ಪತ್ರದೊಂದಿಗೆ ನೀಡಬೇಕು. ಪದೇಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ರ ಬಾರದು. ಸಮಾಜಘಾತುಕ, ಭಯೋತ್ಪಾದನೆ ಯಂಥ ಕೃತ್ಯದಲ್ಲಿ ಭಾಗಿಯಾಗಿರ
ಬಾರದು. 14-17ವರ್ಷ ಶಿಕ್ಷೆ ಅನುಭವಿಸಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next