Advertisement
ರಸ್ತೆ ಬಿಡಲು ಒತ್ತಾಯ: ತಿಪ್ಪಸಂದ್ರ ಹೋಬಳಿಯ ಚಿಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯ ಮಾಯಸಂದ್ರ ಗ್ರಾಮದ ಸರ್ವೆ ನಂ. 44 ಪಿ.1 ರಲ್ಲಿ 2.10 ಎಕರೆ ಜಮೀನನ್ನು ಜಯಲಕ್ಷ್ಮಮ್ಮ ಹೊಂದಿದ್ದಾರೆ. ಇವರ ಸಂಬಂಧಿ ಸಾಕಮ್ಮ ಎಂಬುವರು ಸರ್ವೆ ನಂ 44 ರಲ್ಲಿ 1.10 ಎಕರೆ ಜಮೀನು ಹೊಂದಿದ್ದಾರೆ. ಈ ಜಮೀನಿನಲ್ಲಿ ರಸ್ತೆ ಬಿಡಬೇಕೆಂದು ವಿರುಪಾಪುರ ಗ್ರಾಮದ ವೆಂಕಟೇಶ್, ಬೆಟ್ಟಯ್ಯ, ಜಯಣ್ಣ ಹಾಗೂ ಮುದ್ದರಂಗಯ್ಯ ಎಂಬುವವರು ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಎರಡು ಕಡೆಯವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
Related Articles
Advertisement
ಪದೇ ಪದೆ ಜಗಳ- ಆರೋಪ: ನಂತರ ಸುದ್ದಿಗಾರ ರೊಂದಿಗೆ ಮಾತನಾಡಿ, ಜಮೀನಿನಲ್ಲಿ ರಸ್ತೆ ಬಿಡುತ್ತಿಲ್ಲ ಎಂದು ಕೆಲವು ಸವರ್ಣಿಯರು ತಮ್ಮ ಕುಟುಂಬದ ಮೇಲೆ ಪದೇ ಪದೆ ಜಗಳ ತೆಗೆಯುತ್ತಿದ್ದು. ಕೈ, ಕಾಲು ಮುರಿಸುತ್ತೇವೆ, ಕೊಲೆ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಶುಕ್ರವಾರ ಸಾವಿರಾರು ರೂ. ಬೆಲೆ ಬಾಳುವ ತೆಂಗು ಹಾಗೂ ಇತರೆ ಗಿಡಗಳನ್ನು ನಾಶ ಪಡಿಸಿದ್ದಾರೆ. ದಲಿತ ಮೇಲೆ ಇನ್ನೂ ಸಹ ದೌರ್ಜನ್ಯ ನಿಂತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು: ದಲಿತ ಮುಖಂಡ ಸಿ.ಜಯರಾಂ ಮಾತನಾಡಿ, ಸುಮಾರು 20 ವರ್ಷಗಳ ಹಿಂದೆ ತಾಲೂಕಿನಲ್ಲಿ ದಲಿತರು ಹಾಗೂ ಸವರ್ಣಿಯರ ನಡುವೆ ಕಿತ್ತಾಟ ನಡೆಯುತ್ತಿತ್ತು. 20 ವರ್ಷಗಳಿಂದ ಯವುದೇ ಗಲಾಟೆ ನಡೆದಿರಲಿಲ್ಲ ಆದರೆ ಈಗ ವಿರೂಪಾಪುರ ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.