Advertisement

ಗಮನ ಸೆಳೆದ ಇಸ್ರೇಲ್‌ ಮಾದರಿ

10:59 AM Jan 19, 2020 | Suhan S |

ಧಾರವಾಡ: ಹನಿ ನೀರನ್ನು ಪರಿಪೂರ್ಣವಾಗಿ ಬಳಸಿ, ನಿಗದಿತ ಸಮಯದಲ್ಲಿ ಅದನ್ನು ಹಣವಾಗಿ ಪರಿವರ್ತಿಸುವ ಕೃಷಿ ವಿಧಾನವನ್ನು ಜಗತ್ತಿಗೆ ಮಾದರಿಯಾಗಿ ಕೊಟ್ಟಿದ್ದು ಇಸ್ರೇಲ್‌ ದೇಶ. ಇಸ್ರೇಲ್‌ ಕೃಷಿ ಮಾದರಿ ಇದೀಗ ಸದಾ ಬರಗಾಲಕ್ಕೆ ತುತ್ತಾಗುವ ಉಕ ಭಾಗದ ರೈತರಿಗೂ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಇದಕ್ಕೆ ಪೂರಕ ಎನ್ನುವಂತೆ ಕೃಷಿಮೇಳದಲ್ಲಿ ಇಸ್ರೇಲ್‌ ಕೃಷಿ ಮಾದರಿ ಪ್ರಾತ್ಯಕ್ಷಿಕೆ ನಿರ್ಮಿಸಿದ್ದು, ಹೆಚ್ಚು ರೈತರನ್ನು ಆಕರ್ಷಿಸುತ್ತಿದೆ. “ಪ್ರತಿ ಹನಿ-ಸಮೃದ್ಧ ತನಿ’ ಎಂಬಘೋಷವಾಕ್ಯದಲ್ಲಿ ನಡೆದಿರುವ ಈ ಸಲದ ಕೃಷಿ ಮೇಳದಲ್ಲಿ ಇಸ್ರೇಲ್‌ ಕೃಷಿ ಮಾದರಿಗಳು ಗಮನ ಸೆಳೆಯುತ್ತಿವೆ. ಎರಡೂವರೆ ಲಕ್ಷ ಹಾಗೂ 27 ಸಾವಿರ ಮೌಲ್ಯದ ಎರಡು ಯಂತ್ರಗಳ ತಂತ್ರಜ್ಞಾನದ ಬಗ್ಗೆ ಮೇಳದಲ್ಲಿ ಮಾಹಿತಿ ಲಭ್ಯವಿದ್ದು, ಈ ಮೂಲಕ ಶೇ.40 ರಿಂದ ಶೇ.60 ನೀರಿನ ಉಳಿತಾಯ ಆಗಲಿದೆ. ಇದಲ್ಲದೇ ಮೊಬೈಲ್‌ ಮೂಲಕವೇ ನಿಗದಿತ ಸಮಯಕ್ಕೆ ಸಂದೇಶಗಳ ರವಾನೆ ಮೂಲಕ ನೀರು ಹಾಯಿಸುವಿಕೆ ಆಗಲಿದೆ. ಈ ತಂತ್ರಜ್ಞಾನದ ಸಾಧನಗಳ ಮಾಹಿತಿಯ ಜೊತೆಗೆ ಅಡಿಕೆ, ಪೇರು, ಪಪ್ಪಾಯಿ, ಸಪೋಟ ಸೇರಿದಂತೆಎಲ್ಲ ಬೆಳೆಗಳಿಗೆ ಈ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದಾಗಿದೆ.

ಅದರಲ್ಲೂ ಕಬ್ಬಿನ ಬೆಳೆಯಲ್ಲಿ ಶೇ.50ಕ್ಕೂ ಹೆಚ್ಚು ನೀರಿನ ಉಳಿತಾಯ ಆಗಲಿದೆ. ಹನಿ ನೀರಾವರಿ ಹಾಗೂ ತುಂತುರು ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಯುವ ಕೃಷಿ ಬೆಳೆಗಳು, ಹೂ-ತೋಟದ ಬೆಳೆಗಳ ಪ್ರಾತ್ಯಕ್ಷಿತೆಗಳು ಇಲ್ಲಿವೆ. ಮನೆಯಲ್ಲಿ ಕುಳಿತೇ ಮೊಬೈಲ್‌ ಮೂಲಕ ಬೆಳೆಗಳಿಗೆ ನೀರು ಒದಗಿಸಬಹುದಾಗಿದೆ. ಯಾವ ಬೆಳೆಗೆ ಎಷ್ಟು ನೀರು ಎಂಬ ಮಾಹಿತಿ ಸಾಧನದಲ್ಲಿ ಅಳವಡಿಸಿದರೆ ಸಾಕು. ಅದಕ್ಕೆ ತಕ್ಕಂತೆ ನಿಗದಿತ ಸಮಯಕ್ಕೆ ನೀರು ಪೂರೈಸಲಿದೆ. ಬೆಳೆಗಳಿಗೆ ನೀರು ಕಡಿಮೆ ಮಾಡಲಾಗದು. ಆದರೆ ವ್ಯರ್ಥವಾಗುವ ನೀರನ್ನು ಉಳಿತಾಯ ಮಾಡಬಹುದು. ಇದಕ್ಕೆ ಸರಕಾರದಿಂದ ಶೇ.90ರಷ್ಟು ಸಬ್ಸಿಡಿ ಇದೆ ಎಂದು ಹೇಳುತ್ತಾರೆ ಬೇಸಾಯ  ಶಾಸ್ತ್ರದ ತಜ್ಞ ಪ್ರೊ| ಶಶಿಧರ.

Advertisement

Udayavani is now on Telegram. Click here to join our channel and stay updated with the latest news.

Next