Advertisement

ಮುಖ ನೋಡಿ ಆಮಂತ್ರಣ ಪತ್ರಿಕೇಲಿ ಹೆಸರು ಹಾಕಲ್ಲ: ಸಚಿವ ಯು.ಟಿ.ಖಾದರ್‌

08:16 AM Nov 06, 2017 | |

ಚಿಕ್ಕಮಗಳೂರು: ಸರ್ಕಾರಿ ಕಾರ್ಯಕ್ರಮಗಳಿಗೆ ಹೆಸರು ಹಾಕುವಾಗ ಸಂವಿಧಾನದ ನಿಯಮಗಳಂತೆ ಹೆಸರನ್ನು ಹಾಕಬೇಕಾಗುತ್ತದೆ. ಅದನ್ನು ಬಿಟ್ಟು ಯಾರ ಮುಖವನ್ನು ನೋಡಿಕೊಂಡು ಹೆಸರು ಹಾಕುವುದಿಲ್ಲ ಎಂದು ಆಹಾರ ಸಚಿವ ಯು.ಟಿ.ಖಾದರ್‌ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರಿಗೆ ತಿರುಗೇಟು ನೀಡಿದ್ದಾರೆ.

Advertisement

ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಿರುವಂತೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಒತ್ತಾಯಿಸಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರತಿಕ್ರಿಯಿಸಿದ ಖಾದರ್‌, ಪ್ರಜಾಪ್ರಭುತ್ವದಲ್ಲಿ ಜನ ಅವರಿಗೆ ಒಂದು ಸ್ಥಾನ ಕೊಟ್ಟಿದ್ದಾರೆ. ಇವರ ಮುಖವನ್ನು ನೋಡಿಕೊಂಡು ಯಾರೂ ಹೆಸರು ಹಾಕುವುದಿಲ್ಲ. ಬೇಕಾದವರು ಕಾರ್ಯಕ್ರಮಕ್ಕೆ ಬರಬಹುದು ಎಂದು ಖಾದರ್‌ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕಾರ್ಯಕ್ರಮಕ್ಕೆ ಹೋಗಲಾಗದಿದ್ದರೆ ಬಿಡಬಹುದು. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಸತ್ತು ಗೋರಿಯಲ್ಲಿ ಮಲಗಿದವರ ಹೆಸರಲ್ಲಿ ರಾಜಕೀಯ ಮಾಡುವುದು ಬೇಡ. ಬದುಕಿದವರ ಬಗ್ಗೆ ಆಲೋಚನೆ ಮಾಡಲಿ. ಅದನ್ನು ಬಿಟ್ಟು ಬೇರೆಯದಕ್ಕೆ ಜನ ಮಹತ್ವ ಕೊಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next