Advertisement
ಇದನ್ನೂ ಓದಿ: ಕಂದಾಹಾರ್ ಜನಪ್ರಿಯ ಹಾಸ್ಯ ನಟನ ಬರ್ಬರ ಹತ್ಯೆ: ತಾಲಿಬಾನ್ ವಿರುದ್ಧ ಆಕ್ರೋಶ
Related Articles
Advertisement
ಜೆಡಿಎಸ್‌ನಲ್ಲೂ ಚರ್ಚೆ: ಮತ್ತೂಂದೆಡೆ ಯಡಿಯೂ ರಪ್ಪ ಅವರ ನಿರ್ಗಮನದಿಂದ ಜೆಡಿಎಸ್ ವಲಯದಲ್ಲೂ ಆಸೆಚಿಗುರೊಡೆದಿತ್ತು. ಯಡಿಯೂರಪ್ಪ ಅವರು ಬಯಸಿದಂತೆ ಹೊಸ ಮುಖ್ಯಮಂತ್ರಿ ಆಗಲಿಲ್ಲ ಎಂದರೆ ಅವರ ಬೆಂಬಲಿಗರು ಸಿಡಿದೇಳಬಹುದು. ಆಗ ಬಿಜೆಪಿಗೆ ಜೆಡಿ ಎಸ್ ಸಖ್ಯ ಬೇಕಾಗಬಹುದು ಎಂಬ ಲೆಕ್ಕಾಚಾರವಿತ್ತು. ವಿಧಾನಸಭೆಯಲ್ಲಿ ಜೆಡಿಎಸ್ 32 ಸಂಖ್ಯಾಬಲ ಹೊಂದಿದ್ದು,ಅನಿವಾರ್ಯತೆಎದುರಾದರೆಮತ್ತೂಂದು ರಾಜಕೀಯ ಧ್ರುವೀಕರಣವೂ ನಡೆಯಬಹುದು.
ಸರ್ಕಾರಕ್ಕೆ ಆತಂಕ ಎದುರಾದರೆ ಜೆಡಿಎಸ್ ಬೆಂಬಲ ಪಡೆಯಬಹುದು ಎಂದು ಜೆಡಿಎಸ್‌ನ ಶಾಸಕರೂ ಲೆಕ್ಕಾಚಾರ ಹಾಕಿಕೊಂಡಿದ್ದರು. ಬಿಜೆಪಿ ಸರ್ಕಾರಕ್ಕೆ ಆತಂಕ ಎದುರಾದರೆ ಜೆಡಿಎಸ್ ಬೆಂಬಲ ಗಳಿಸುವ ನಿಟ್ಟಿನಲ್ಲಿ ಬಿಜೆಪಿಯ ನಾಯಕರೊಬ್ಬರು ಕುಮಾರಸ್ವಾಮಿ ಜತೆ ಮಾತನಾಡಿದ್ದರು. ಎಚ್.ಡಿ.ರೇವಣ್ಣ ಅವರು ದೆಹಲಿಯಲ್ಲಿ ಆ ಬಿಜೆಪಿ ನಾಯಕರ ಜತೆ ಚರ್ಚಿಸಿದ್ದರು ಎಂಬ ಮಾತುಗಳು ಇವೆ. ಆದರೆ, ಅಚ್ಚರಿ ಬೆಳವಣಿಗೆಯಲ್ಲಿ ವಿದ್ಯಮಾನ ಬದಲಾಗಿದೆ. ಯಡಿಯೂರಪ್ಪ ಅವರ ಕೈ ಮೇಲಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಜೆಡಿಎಸ್ ಸಹ ಇದೀಗ ತನ್ನಕಾರ್ಯತಂತ್ರ ಬದಲಿಸಿಕೊಳ್ಳಬೇಕಾಗಿದೆ.
ಅಷ್ಟೇ ಅಲ್ಲದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿಯವರ ಜತೆಯೂ ಬಸವರಾಜ ಬೊಮ್ಮಾಯಿ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಹೀಗಾಗಿ, ಬಿಜೆಪಿ ಸರ್ಕಾರದ ವಿರುದ್ಧ ಜೆಡಿಎಸ್‌ನ ಹೋರಾಟ ಯಾವ ಸ್ವರೂಪದಲ್ಲಿ ಇರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕೈ, ತೆನೆ ನಾಯಕರೊಂದಿಗೆ ಉತ್ತಮ ಬಾಂಧವ್ಯಬಿಜೆಪಿ ಸರ್ಕಾರ ಅವಧಿ ಪೂರೈಸಲು ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಜತೆ ಉತ್ತಮ ಸಂಬಂಧ ಹೊಂದಿರುವ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಇದೂ ಒಂದು ರೀತಿಯಲ್ಲಿ ಬಿಜೆಪಿಯ ಕಾರ್ಯತಂತ್ರವೇ ಎಂದೂ ಹೇಳಲಾಗುತ್ತಿದೆ. ಯಡಿಯೂರಪ್ಪ ಅವರ ಪರ ಅನುಕಂಪ ತೋರಿ ರಾಜಕೀಯ ಲಾಭ ಪಡೆದುಕೊಳ್ಳಲು ಯೋಚಿಸುತ್ತಿದ್ದ ಕಾಂಗ್ರೆಸ್ ಪ್ರಯತ್ನ ಸಫಲವಾಗದಂತೆ ನೋಡಿಕೊಂಡಿದ್ದಾರೆ ಎಂಬ ಮಾತುಗಳು ಇವೆ. *ಎಸ್.ಲಕ್ಷ್ಮೀನಾರಾಯಣ