Advertisement

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಸದ್ಯಕ್ಕಿಲ್ಲ

10:10 AM Mar 15, 2020 | Team Udayavani |

ಹೊಸದಿಲ್ಲಿ: ದಿಲ್ಲಿ ಸರಕಾರ ಯಾವುದೇ ಕ್ರೀಡಾಕೂಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದ ಬೆನ್ನಲ್ಲೇ “ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾ ವಳಿಯನ್ನು ಎ. 12ರ ತನಕ ಅಮಾನತಿನಲ್ಲಿ ಇಡಲಾಗಿದೆ. ಮೂಲ ವೇಳಾಪಟ್ಟಿ ಪ್ರಕಾರ ಈ ಕೂಟ ಮಾ. 24ರಿಂದ ಮಾ. 29ರ ತನಕ ರಾಷ್ಟ್ರ ರಾಜಧಾನಿಯಲ್ಲಿ ನಡೆಯಬೇಕಿತ್ತು.

Advertisement

ಇದೇ ವೇಳೆ “ಬ್ಯಾಡ್ಮಿಂಟನ್‌ ವರ್ಲ್ಡ್ ಫೆಡರೇಶನ್‌‘ (ಬಿಡಬ್ಲ್ಯುಎಫ್) ತನ್ನ ವ್ಯಾಪ್ತಿಯ ಎಲ್ಲ ಅಂತಾರಾಷ್ಟ್ರೀಯ ಕೂಟಗಳನ್ನು ಎ. 12ರ ತನಕ ತಡೆಹಿಡಿದಿದೆ ಅಥವಾ ರದ್ದುಗೊಳಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಇದರಂತೆ ಯೋನೆಕ್ಸ್‌ ಸ್ವಿಸ್‌ ಓಪನ್‌, ಯೋನೆಕ್ಸ್‌-ಸನ್‌ರೈಸ್‌ ಇಂಡಿಯಾ ಓಪನ್‌, ಓರ್ಲಾನ್ಸ್‌ ಮಾಸ್ಟರ್, ಸೆಲ್ಕಾಂ ಅಕ್ಸಿಯಾಟ ಮಲೇಶ್ಯ ಓಪನ್‌, ಸಿಂಗಾಪುರ್‌ ಓಪನ್‌ ಮತ್ತು ಬಹಳಷ್ಟು ಗ್ರೇಡ್‌-3 ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಪಂದ್ಯಗಳನ್ನು ಅಮಾನತಿನಲ್ಲಿ ಇಡಲಾಗಿದೆ. ಇವೆಲ್ಲ ಮಾ. 16- ಎ. 12ರ ಅವಧಿಯಲ್ಲಿ ನಡೆಯಬೇಕಿತ್ತು.

ಆಲ್‌ ಇಂಗ್ಲೆಂಡ್‌ ಕೂಟವೇ ಕೊನೆಯದು
ಸದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ ನಡೆಯುತ್ತಿದ್ದು, ಇದು ರವಿವಾರ ಕೊನೆಗೊಳ್ಳಲಿದೆ. ಅನಂತರ ನಡೆಯುವ ಎಲ್ಲ ಬ್ಯಾಡ್ಮಿಂಟನ್‌ ಕೂಟಗಳನ್ನು ಅಮಾನತಿನಲ್ಲಿ ಇಡಲಾಗಿದೆ ಎಂದು ಬಿಡಬ್ಲ್ಯುಎಫ್ ತಿಳಿಸಿದೆ. ಬ್ರಿಟಿಷ್‌ ಸರಕಾರ ಶುಕ್ರವಾರ ಹೊರಡಿಸಿದ ಮಾರ್ಗಸೂಚಿಯಂತೆ, ಈಗಾಗಲೇ ಮೊದಲ್ಗೊಂಡಿರುವ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಕೂಟಕ್ಕೆ ಯಾವುದೇ ಅಡ್ಡಿಯಾಗದು.ಇವೆಲ್ಲವೂ ಒಲಿಂಪಿಕ್ಸ್‌ ಅರ್ಹತಾ ವ್ಯಾಪ್ತಿಗೆ ಒಳಪಡುವ ಬ್ಯಾಡ್ಮಿಂಟನ್‌ ಪಂದ್ಯಾವಳಿಗಳಾಗಿದ್ದವು. ಒಲಿಂಪಿಕ್ಸ್‌ ಅರ್ಹತಾ ಪ್ರಕ್ರಿಯೆಯನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಬಿಡಬ್ಲ್ಯುಎಫ್ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next