Advertisement

3ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಠಾವಧಿ ಸತ್ಯಾಗ್ರಹ

05:29 PM Nov 29, 2019 | Suhan S |

ಶಿರಾ: ನಗರದ ತಾಲೂಕು ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಠಾವಧಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಮಾಜಿ ಶಾಸಕ ಸಾಲಿಂಗಯ್ಯ ಧರಣಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.

Advertisement

ಈ ವೇಳೆ ಮಾತನಾಡಿದ ಮಾಜಿ ಶಾಸಕ ಸಾಲಿಂಗಯ್ಯ, ತಾಲೂಕಿನಲ್ಲಿ ಕಳೆದ 10 ವರ್ಷ ದಿಂದ ಸರಿಯಾಗಿ ಮಳೆಯಾಗದೆ ಅಂತರ್ಜಲ ಸಾವಿರ ಅಡಿ ದಾಟಿದ್ದು ಕುಡಿಯುವ ನೀರಿಗೂ ಕಷ್ಟ ಪಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕೂಡಲೇ ತಾಲೂಕಿನ ಕಳ್ಳಂಬೆಳ್ಳ ಶಿರಾ ಮದಲೂರು ಕೆರೆ ಹಾಗೂ ಹೇಮಾವತಿ ನಾಲಾ ವ್ಯಾಪ್ತಿ ಒಟ್ಟು 14 ಕೆರೆಗಳಿಗೆ ನೀರು ಬಿಡಲೇ ಬೇಕೆಂದು ನಾನೂ ಕೂಡಾ ಒತ್ತಾಯಿಸುತ್ತಿದ್ದೇನೆ ಎಂದು ಮಾಜಿ ಶಾಸಕ ಸಾಲಿಂಗಯ್ಯ ತಿಳಿಸಿದರು.

ಹೇಮಾವತಿ ಶಿರಾ ತಾಲೂಕಿಗೆ ಹರಿಯ ಬೇಕೆನ್ನುವುದು ಕೇವಲ ಒಂದು ಊರಿನ ಕೂಗಲ್ಲಇಡೀ ತಾಲೂಕು ಹೇಮಾವತಿ ನೀರಿನ ಮೇಲೆ ಅವಲಂಭಿತವಾಗಿರುವ ಕಾರಣ ಎಲ್ಲಾ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಹೋರಾಟದಲ್ಲಿ ಪಾಲ್ಗೊಂಡು ನೀರನ್ನು ನಮ್ಮ ತಾಲೂಕಿಗೆ ತರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಎಸ್‌.ಎನ್‌.ಕೃಷ್ಣಯ್ಯ ಎಂದರು. ತುಮುಲ್‌ ನಿರ್ದೇಶಕ ಎಸ್‌.ಆರ್‌.ಗೌಡ, ಹಿರಿಯ ಸಹಕಾರಿ ಧುರೀಣ ಎಸ್‌.ಎನ್‌. ಕೃಷ್ಣಯ್ಯ, ಜಿಪಂ ಮಾಜಿ ಸದಸ್ಯ ಪರ್ವತಪ್ಪ, ಧರಣಿ ಸತ್ಯಾಗ್ರಹ ಹೋರಾಟಗಾರರಾದ ಜಯ ರಾಮಯ್ಯ, ಆರ್‌.ವಿ.ಪುಟ್ಟಕಾಮಯ್ಯ, ತಾಲೂಕು ರೈತಸಂಘದ ಅಧ್ಯಕ್ಷ ಲಕ್ಷ್ಮ ಣ್‌ಗೌಡ, ಹೆಂಜಾರಪ್ಪ, ರಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next