Advertisement

ಆಡಿಯೋ ವೀಡಿಯೋ ಕ್ಷೇತ್ರದತ್ತ ಹೆಚ್ಚುತ್ತಿರುವ ಒಲವು

11:08 AM Dec 28, 2020 | mahesh |

ಭಾರತದಲ್ಲಿ ಕೋವಿಡ್‌ ಬಳಿಕ ಹಲವು ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆಗಳು ಕಂಡುಬರುತ್ತಿವೆ. ಇದಕ್ಕೆ ಮನೋ ರಂಜನೆ ಕ್ಷೇತ್ರವೂ ಹೊರತಾಗಿಲ್ಲ. ಅಧ್ಯಯನವೊಂದರ ವರದಿ ಪ್ರಕಾರ ಜನರು ತಂತ್ರಜ್ಞಾನ ಮತ್ತು ಮನೋರಂಜನೆ ಕ್ಷೇತ್ರವನ್ನು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಮುಖ್ಯವಾಗಿ ಜನರು ಗುಣಮಟ್ಟದ ಆಡಿಯೋ ಮತ್ತು ವೀಡಿಯೋಗಳಿಗಾಗಿ ಹೆಚ್ಚಿನ ಹಣವನ್ನು ಮೀಸಲಿಡಲು ಸಿದ್ಧರಿದ್ದಾರೆ. ಜತೆಗೆ ತಮ್ಮ ಹೆಚ್ಚಿನ ಸಮಯವನ್ನೂ ಆಡಿಯೋ ಮತ್ತು ವೀಡಿಯೋ ಆನಂದಿಸಲು ಬಳಸುತ್ತಿದ್ದಾರೆ.

Advertisement

ಶೇ. 94
ಡಾಲ್ಬಿ ಸಂಸ್ಥೆಗಾಗಿ “ವೇಕ್‌ ಫೀಲ್ಡ್‌ ರಿಸರ್ಚ್‌ ಸಂಸ್ಥೆ’ ನಡೆಸಿದ ಅಧ್ಯಯನದಿಂದ ಹಲವು ಮಾಹಿತಿಗಳು ತಿಳಿದುಬಂದಿವೆೆ. ಭಾರತದಲ್ಲಿ ಶೇ. 94ರಷ್ಟು ಮಂದಿ ತಮ್ಮ ವೀಡಿಯೋ ಮತ್ತು ಆಡಿಯೋ ಗುಣಮಟ್ಟಕ್ಕಾಗಿ ಪ್ರೀಮಿಯಂ ಚಂದಾದಾರಿಕೆ ಪಡೆಯಲು ಹೆಚ್ಚಿನ ಹಣವನ್ನು ನೀಡಲು ಸಿದ್ಧರಿದ್ದಾರೆ.

ಶೇ. 96
ಸರ್ವೇಯಲ್ಲಿ ಕಂಡುಕೊಂಡ ಇನ್ನೊಂದು ಬಹು ಮುಖ್ಯ ಅಂಶ ಎಂದರೆ ಶೇ. 96ರಷ್ಟು ಜನರು ಮುಂದಿನ 6 ತಿಂಗಳುಗಳಲ್ಲಿ ತಮ್ಮ ಮನೋರಂಜನ ಸಾಧನಗಳನ್ನು ಅಪ್‌ಗ್ರೇಡ್‌ ಮಾಡಲು ಯೋಚಿಸುತ್ತಿದ್ದಾರೆ. ಕೋವಿಡ್‌ ಲಾಕ್‌ಡೌನ್‌ ಅನೇಕ ಭಾರತೀಯರನ್ನು ಮನೋರಂಜನ ಕ್ಷೇತ್ರಕ್ಕೆ ಒಗ್ಗಿಕೊಳ್ಳುವಂತೆ ಪ್ರೇರೇಪಿಸಿದೆ. ಶೇ. 66ರಷ್ಟು ಭಾರತೀಯರು ವಿಶ್ರಾಂತಿ ಪಡೆಯಲು ಮನೋರಂಜನೆಯ ಮೊರೆ ಹೋಗಿದ್ದಾರೆ. ಇದೀಗ ಜನರ ಈ ಅಭಿರುಚಿಯನ್ನು ನೋಡಿಕೊಂಡು ಸಂಗೀತ ಮತ್ತು ವೀಡಿಯೋ ತಯಾರಕ ಕಂಪೆನಿಗಳು ಈ ಸಂದರ್ಭವನ್ನು ಬಳಸಿಕೊಳಕ್ಷೆು ಉತ್ಸುಕವಾಗಿವೆ.

ಎಲ್ಲೆಲ್ಲಿ ಅಧ್ಯಯನ
ಹೊಸದಿಲ್ಲಿ, ಮುಂಬಯಿ, ಚೆನ್ನೈ, ಕೋಲ್ಕತಾ, ಹೈದರಾಬಾದ್‌ ಮತ್ತು ಅಹ್ಮದಾಬಾದ್‌ ಸಹಿತ ಆರು ನಗರಗಳಲ್ಲಿ ನಡೆಸಿದ ಅಧ್ಯಯನ ಈ ವರದಿಯ ಹಿಂದಿದೆ. ಶೇ. 60ರಷ್ಟು ಜನರು ಮನೋರಂಜನೆಯನ್ನು ಉತ್ತಮ ಸಾಮಾಜಿಕ ಅನುಭವ ಎಂದು ಕಂಡುಕೊಂಡಿ¨ªಾರೆ. ಶೇ. 92ರಷ್ಟು ಜನರು ಸುದ್ದಿ ಮುಖ್ಯಾಂಶಗಳನ್ನು ನೋಡಲು ಬಳಸುತ್ತಿದ್ದಾರೆ.

ಗುಣಮಟ್ಟ ವೃದ್ಧಿ
ಅನೇಕ ಗ್ರಾಹಕರು ತಾವು ಈವರೆಗೆ ತಿಳಿದುಕೊಳ್ಳದ ಹೊಸ ಕ್ಷೇತ್ರಗಳ ಕಡೆಗೆ ಮುಖಮಾಡಿದ್ದಾರೆ. ಅವರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಟ್ರೀಮಿಂಗ್‌ ಲೈವ್‌ ಮ್ಯೂಸಿಕ್‌ ಈವೆಂಟ್‌ಗಳು, ಹಾಸ್ಯ, ವೀಡಿಯೋ ಗೇಮ್‌ ಸ್ಟ್ರೀಮಿಂಗ್‌ ಮೊದಲಾದವುಗಳನ್ನು ನೋಡುತ್ತಿದ್ದಾರೆ.

Advertisement

ಸ್ಮಾರ್ಟ್‌ಫೋನ್‌ ಮನೋರಂಜನ ಸಾಧನ
ಭಾರತದಲ್ಲಿ ಶೇ. 29ರಷ್ಟು ಜನರು ತಮ್ಮ ಸ್ಮಾರ್ಟ್‌ಫೋನ್‌ ಪ್ರಾಥಮಿಕ ಮನೋರಂಜನ ಸಾಧನ ಎಂದಿದ್ದಾರೆ. ಬಳಿಕದ ಸ್ಥಾನಗಳಲ್ಲಿ ಟಿ.ವಿ. (ಶೇ. 22), ಕಂಪ್ಯೂಟರ್‌ (ಶೆ‌. 20) ಇದೆ. ಸ್ಟ್ರೀಮಿಂಗ್‌ ವೀಡಿಯೋಗಳನ್ನು ನೋಡುವಾಗ ಲೈವ್‌-ಚಾಟ್‌ನಲ್ಲಿ ಶೇ. 65ರಷ್ಟು ಮಂದಿ ತೊಡಗಿಕೊಂಡಿದ್ದಾರೆ.

ಸರಾಸರಿ ಹೆಚ್ಚು
ಶೇ. 97ರಷ್ಟು ಮಂದಿ ಆಡಿಯೋ ಮತ್ತು ವೀಡಿಯೋ ಆನಂದಿಸುತ್ತಿದ್ದು, ಇದರ ಪ್ರಮಾಣ ಈ ಹಿಂದಿಗಿಂತ ಶೇ. 48ರಷ್ಟು ಹೆಚ್ಚಾಗಿದೆ. ಕಳೆದ ಆರು ತಿಂಗಳುಗಳಲ್ಲಿ ಶೇ. 88 ರಷ್ಟು ಭಾರತೀಯರು ತಮ್ಮ ಸ್ಟ್ರೀಮಿಂಗ್‌ ಸೇವೆಗಳನ್ನು ನವೀಕರಿಸಲು ಈಗಾಗಲೇ ಹೂಡಿಕೆ ಮಾಡಿಗ್ರೇರೆ. ಮಾತ್ರವಲ್ಲದೆ ಶೇ. 96ರಷ್ಟು ಮಂದಿ ಮುಂದಿನ 6 ತಿಂಗಳುಗಳಲ್ಲಿ ತಮ್ಮ ಮನೋರಂಜನ ಸಾಧನಗಳನ್ನು ನವೀಕರಿಸುವ ಯೋಚನೆಯಲ್ಲಿದ್ದಾರೆ. ಸಲಕರಣೆಗಳ ನವೀಕರಣಗಳು ಉತ್ತಮ ಮೊಬೈಲ್‌ ಸಾಧನಗಳನ್ನೂ ಒಳಗೊಂಡಿವೆ. ಶೇ. 61ರಷ್ಟು ಮಂದಿ ತಮ್ಮ ಮೊಬೈಲ್‌ಅನ್ನು ಅಪ್‌ಗ್ರೇಡ್‌ ಮಾಡಲು ಚಿಂತನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next