Advertisement
ಮಾನವನ ಸಂರಚನಾತ್ಮಕ ವ್ಯವಸ್ಥೆಗಳಾದ ಭೌತಿಕ, ಮಾನ ಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಜೀವನ ಶೈಲಿಗಳ ಜತೆಗೆ ಸಾಮರಸ್ಯ ವ್ಯವಸ್ಥೆ ಉಂಟು ಮಾಡುವುದೇ ಪ್ರಕೃತಿ ಚಿಕಿತ್ಸೆ ಅಥವಾ ಯೋಗ ಚಿಕಿತ್ಸೆ. ಉತ್ತಮ ಆರೋಗ್ಯ ವೃದ್ಧಿಸಲು, ರೋಗರುಜಿನಗಳ ತಡೆಗಟ್ಟಲು ಮತ್ತು ಶಮನಗೊಳಿಸಲು, ಉತ್ತಮ ಆರೋಗ್ಯವಂತ ಜೀವನ ಪಡೆದುಕೊಳ್ಳಲು ಈ ಚಿಕಿತ್ಸಾ ಪದ್ಧತಿ ಸಹಾಯಕ. ಯೋಗ ಶಿಕ್ಷಕರಿಗೆ, ಚಿಕಿತ್ಸಕರಿಗೆ ಭಾರೀ ಡಿಮ್ಯಾಂಡ್ ಕೇಳಿಬಂದಿದೆ. ಯೋಗಿಕ್ ಸೈನ್ಸ್ ಪದವಿಗೆ ಸೇರು ವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇನ್ನೊಂದೆಡೆ ಯೋಗ ಥೆರಪಿ ಕ್ಲಿನಿಕ್‌ಗಳ ಸಂಖ್ಯೆಯೂ ಹೆಚ್ಚಾಗಿದೆ.
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಯಿಂದ ಹಲವು ಕಾಯಿಲೆಗಳನ್ನು ದೂರ ಮಾಡಬಹುದು. ಇದರಲ್ಲಿ ಪ್ರಮು ಖವಾಗಿ ಚರ್ಮದ ಅಲರ್ಜಿ ರೋಗಗಳು (ಮೊಡವೆ, ಕಪ್ಪು ಕಲೆ), ಅಸ್ತಮಾ (ಅಲರ್ಜಿ ಮತ್ತು ಶ್ವಾಸಕೋಶದ ಸಮಸ್ಯೆ), ರಕ್ತಹೀನತೆ, ಆತಂಕ, ಖನ್ನತೆ, ಹೊಟ್ಟೆಯುಬ್ಬರ, ಬೊಜ್ಜು, ಅಧಿಕ ರಕ್ತದೊತ್ತಡ, ಜಠರದ ಉರಿತ, ಮಧುಮೇಹ, ಪಾರ್ಶ್ವವಾಯು, ಸೋರಿಯಾಸಿಸ್, ಅಸ್ಥಿ ಸಂಧಿವಾತ, ಸಂಧಿ ವಾತ, ಗರ್ಭದ ಸ್ಪಾಂಡಿಲೋಸಿಸ್, ಮಲಬದ್ಧತೆ, ಚರ್ಮದ ಉರಿಯೂತ, ಅಧಿಕ ಆಮ್ಲಿàಯತೆ, ಸೊಂಟ ನೋವು, ನಿದ್ರಾಹೀನತೆ, ಬೆನ್ನು ನೋವು, ಪಿಸಿಒಡಿ, ಮುಟ್ಟಿನ ತೊಂದರೆ, ಬಂಜೆತನ, ಮೈಗ್ರೇನ್ ತಲೆನೋವು, ರಕ್ತನಾಳಗಳ ಸಮಸ್ಯೆ ಯನ್ನು ದೂರ ಮಾಡಬಹುದು ಎನ್ನುತ್ತಾರೆ ಪರಿಣತರು. ಲಭ್ಯವಿರುವ ಚಿಕಿತ್ಸೆಗಳು
ಯೋಗದ ಆಸನ, ಪ್ರಾಣಾಯಾಮ, ಕ್ರಿಯಾ, ಧ್ಯಾನದ ಮೂಲಕ ಹೆಚ್ಚಿನ ಚಿಕಿತ್ಸೆಗಳು ಲಭ್ಯ. ಪ್ರಕೃತಿ ಚಿಕಿತ್ಸಾ ವಿಧಾನ ದಿಂದ ಉಗಿ ಸ್ನಾನ, ಮಸಾಜ್ (ಪೂರ್ಣ ದೇಹ ಮಸಾಜ್, ಆಂಶಿಕ ಮಸಾಜ್, ಹೊಳಪಿಗೆ ಉಪ್ಪು ಮಸಾಜ್ ಮತ್ತು ಪುಡಿ ಮಸಾಜ್), ಮಣ್ಣಿನ ಲೇಪ, ಕಟಿ ಸ್ನಾನ, ಅಕ್ಯುಂಪಕ್ಚರ್- ಕಪ್ಪಿಂಗ್ ಕಾಲು ಸ್ನಾನ, ಬಿಸಿ ಮತ್ತು ಶೀತ ಶಾಖ, ಎದೆ ಪಟ್ಟಿ, ಮಂಡಿ ಪಟ್ಟಿ, ಗಂಟಲು ಪಟ್ಟಿ, ಗಂಜಿ ಅರಿಸಿನ ಸ್ನಾನ, ಸಾಸಿವೆ ಪಟ್ಟಿ, ಎಲೆಕ್ಟ್ರೋ ಥೆರಪಿ ಮೊದಲಾದವುಗಳಿವೆ.