Advertisement

“ಪ್ರಾಧಿಕಾರವಾದ ಬಳಿಕ ಆದಾಯದಲ್ಲಿ ಹೆಚ್ಚಳ’

02:46 PM Jan 14, 2017 | Team Udayavani |

ಹನೂರು: ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ರಚನೆಯಾದ ಬಳಿಕ ದೇವಾಲಯದ ಆದಾಯದಲ್ಲೂ ಗಣನೀಯ ಹೆಚ್ಚಳವಾಗಿದ್ದು ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಮೂಲ ಸೌಕರ್ಯಕ್ಕೆ ಪ್ರಥಮ ಪ್ರಾಶಸ್ತ ನೀಡಲಾಗುವುದು ಎಂದು ಶಾಸಕ ಆರ್‌.ನರೇಂದ್ರ ತಿಳಿಸಿದರು. 

Advertisement

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ನರೇಂದ್ರ ಈ ಹಿಂದೆ ಮಲೆ ಮಹದೇಶ್ವರ ಬೆಟ್ಟ ಮುಜರಾಯಿ ವ್ಯಾಪ್ತಿಗೆ ಒಳಪಟ್ಟಿತ್ತು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದರೂ ಸರ್ಕಾರದಿಂದ ಮಂಜೂರಾತಿ ಪಡೆದು ಹಣ ಬಿಡುಗಡೆಗೊಳಿಸಿ ಅಭಿವೃದ್ಧಿ ಪಡಿಸಬೇಕಿತ್ತು. 

ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಧಿಕಾರಕ್ಕೆ ಬಂದ ಬಳಿಕ ಪ್ರಾಧಿಕಾರ ರಚನೆಯಲ್ಲಿ ಆಗಿದ್ದ ಕೆಲವೊಂದು ನಿಯಮಾ ವಳಿಗಳನ್ನು ತಿದ್ದುಪಡಿಗೊಳಿಸಿ ಶ್ರೀ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಶ್ರೀ ಕ್ಷೇತ್ರದಲ್ಲಿ ಬರುತ್ತಿರುವ ಎಲ್ಲಾ ಆದಾಯದ ಬಹುಪಾಲನ್ನು ಶ್ರೀಕ್ಷೇತ್ರದ ಅಭಿವೃದ್ಧಿಗೆ ವಿನಿಯೋ ಗಪಡಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆವಲತ್ತುಗಳನ್ನು ಭಕ್ತಾದಿಗಳಿಗೆ ಕಲ್ಪಿಸಲು ಕ್ರಮವಹಿಸುವುದಾಗಿ ತಿಳಿಸಿದರು.

ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ: ಇದೇ ವೇಳೆ ಶ್ರೀ ಕ್ಷೇತ್ರದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಲಾಡು ವಿತರಣಾ ಕೇಂದ್ರ, 13 ಲಕ್ಚ ರೂ. ವೆಚ್ಚದಲ್ಲಿ ಸಂಕಮ್ಮ ನಿಲಯ ದ ಸಮೀಪ ನಿರ್ಮಿಸಿರುವ ಉಪಹಾರ ದರ್ಶಿನಿ, 14 ಲಕ್ಷ ರೂ. ವೆಚ್ಚದಲ್ಲಿ ದಾಸೋಹ ಭವನದ ಅಡುಗೆಕೋಣೆ ನವೀಕರಣ, ಸ್ಟೀಲ್‌ಬಾಯ್ಲರ್‌ಗಳ ಅಳವಡಿಕೆ, ದಾಸೋಹ ಭವನ ಮುಂಭಾಗದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಕಾರಂಜಿಯನ್ನು ಉದ್ಘಾಟನೆಗೊಳಿಸಿದರು.

ಸಾಲೂರು ಬೃಹನ್ಮಠದ ಪೀಠಾಧ್ಯಕ್ಷ ಪಟ್ಟದ ಗುರುಸ್ವಾಮಿಗಳು, ಅಪರ ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಡಿ.ಭಾರತಿ, ಉಪಕಾರ್ಯದರ್ಶಿ ಬಸವರಾಜು, ಜಿಪಂ ಮಾಜಿ ಸದಸ್ಯರಾದ ಈಶ್ವರ್‌, ಲೋಕೋಪಯೋಗಿ ಇಲಾಖಾ ಎಇಇ ಕುಮಾರ್‌, ದೇವಾಲಯದ ಸಿಬ್ಬಂದಿ, ಬೇಡಗಂಪಣ ಅರ್ಚಕ ವೃಂದ ಹಾಜರಿದ್ದರು.

Advertisement

ಕುಟುಂಬ ಸಮೇತ ಪೂಜೆ ಸಲ್ಲಿಕೆ: ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಶಾಸಕ ನರೇಂದ್ರ ಅವರು ಕುಟುಂಬ ಸಮೇತ ಆಗಮಿಸಿ ಮಲೆ ಮಹದೇಶ್ವರನ ದರ್ಶನ ಪಡೆದರು. ಬಳಿಕ ಮಲೆ ಮಹದೇಶ್ವರ ಬೆಟ್ಟದಲ್ಲಿ ಇದ್ದು ಶುಕ್ರವಾರ ಬೆಳ್ಳಂಬೆಳಗ್ಗೆ ಕುಟುಂಬ ಸಮೇತರಾಗಿ ನಾಗಮಲೆ ಕ್ಷೇತ್ರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next