Advertisement

2025ಕ್ಕೆ ಜೀವಿತಾವಧಿ 70ಕ್ಕೆ ಏರಿಕೆ?

08:02 AM Mar 17, 2017 | Team Udayavani |

ಹೊಸದಿಲ್ಲಿ: ಸುಖೀ ಭಾರತಕ್ಕೆ ನರೇಂದ್ರ ಮೋದಿ ಸರಕಾರ “ರಾಷ್ಟ್ರೀಯ ಆರೋಗ್ಯ ನೀತಿ’ ಜಾರಿಗೊಳಿಸಲು ಮುಂದಾಗಿದೆ. ಲೋಕಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಈ ಹೊಸ ಕಾಯ್ದೆ ಕುರಿತು ಪ್ರಸ್ತಾವಿಸಿದ್ದು, 2025ರ ವೇಳೆಗೆ ಭಾರತೀಯರ ಜೀವಿತಾವಧಿ 70ಕ್ಕೆ ಏರಿಸಲು ಈ ಪಾಲಿಸಿ ನೆರವಾಗಲಿದೆ.

Advertisement

ಪ್ರಸ್ತುತ ಭಾರತೀಯರ ಸರಾಸರಿ ಜೀವಿತಾವಧಿ 67.5 ವರ್ಷವಿದೆ. ಅಲ್ಲದೆ, ಸಾರ್ವಜನಿಕರ ಆರೋಗ್ಯಕ್ಕಾಗಿ ಜಿಡಿಪಿಯಲ್ಲಿ ಈಗ ಶೇ.2ರಷ್ಟು ಹಣವನ್ನು ವೆಚ್ಚ ಮಾಡಧಿಲಾಗುತ್ತಿದ್ದು, 2015ರ ವೇಳೆಗೆ 2.5ರಷ್ಟು ಹಣ ನೀಡಲಾಗುವುದು. ಶಾಲೆಗಳು, ಔದ್ಯೋಗಿಕ ಕಚೇರಿಗಳಲ್ಲಿ ಯೋಗ ಪ್ರಚಾರಕ್ಕೆ ಕ್ರಮ ಕೈಗೊಳ್ಳುವುದಾಗಿ ನಡ್ಡಾ ಹೇಳಿದರು.

ನೀತಿಯ ವಿಶೇಷತೆ: ಶಿಶು ಮರಣ, ತಾಯಿಧಿಮರಣ ಪ್ರಮಾಣವನ್ನು ಗಣನೀಯ ಕಡಿಮೆ ಮಾಡುವುದು, ಕಾಲರಾ, ಕುಷ್ಠ, ಆನೆಕಾಲು ರೋಗಗಳನ್ನು  2025ರ ಒಳಗಾಗಿ ನಿರ್ಮೂಧಿಲನೆ, ಆರೋಗ್ಯ ಕೇಂದ್ರಗಳಿಗೆ ಸೌಲಭ್ಯ ಹೆಚ್ಚಳ, ಪ್ರತಿ 1 ಸಾವಿರ ಮಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ 2 ಹಾಸಿಗೆ ನಿಗದಿ, ಸಾಂಕ್ರಾಮಿಕ ರೋಗ, ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ, ಸಾರ್ವಧಿಜನಿಕ ಆಸ್ಪತ್ರೆಗಳಲ್ಲಿ ಎಲ್ಲ ರೋಗಗಳಿಗೂ ಉಚಿತ ಔಷಧಗಳ ವಿತರಣೆ ಕುರಿತು ಈ ಪಾಲಿಸಿ ಬೆಳಕು ಚೆಲ್ಲಿದೆ. ಮೇಕ್‌ ಇನ್‌ ಇಂಡಿಯಾ ಯೋಜನೆ ಅಡಿಯಲ್ಲಿ ಔಷಧಗಳ ಉತ್ಪಾದನೆಗೆ ಈ ನೀತಿ ನೆರವಾಗಲಿದೆ. ಗುಣಮಟ್ಟದ ಆರೋಗ್ಯದ ಸೇವೆ, ದಾದಿಗಳ ಜೀವನ ಸುಧಾರಣೆಗೂ ಅದರಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಭಾರತದ ಆರೋಗ್ಯ ಕ್ಷೇತ್ರದಲ್ಲಿ  ಈ ಪಾಲಿಸಿ ಮೈಲುಗಲ್ಲು. 2002ರಲ್ಲಿ ಇಂಥ ಪಾಲಿಸಿ ರಚಿಸಲಾಗಿತ್ತು. ಸುಖೀ ಭಾರತವೇ ನಮ್ಮ ಕನಸಾಗಿದೆ.
ಜೆ.ಪಿ. ನಡ್ಡಾ, ಕೇಂದ್ರ ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next