ನವದೆಹಲಿ: ಬೆಂಗಳೂರಿನಲ್ಲಿ ಯುವತಿಯೊಬ್ಬಳ ಮೇಲೆ ಪುಂಡರು ಹೊಸವರ್ಷ ಆಚರಣೆ ವೇಳೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಯನ್ನೇ ನೆನಪಿಸುವ ಇನ್ನೊಂದು ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಹೊಸ ವರ್ಷದ ಆಚರಣೆಯ ವೇಳೆ ಯವತಿಯಬ್ಬಳನ್ನು ಅಡ್ಡಗಟ್ಟಿದ ಪಾನಮತ್ತ ಯುವಕರ ಗುಂಪು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದೆ. ಈ ವೇಳೆ ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆ ನಡೆಸಿದೆ. ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ವಾಯವ್ಯ ದೆಹಲಿಯ ಮುಖರ್ಜಿ ನಗರ ಪ್ರದೇಶದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಯುವತಿಯನ್ನು ಕೆಳಕ್ಕುರುಳಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಪುಂಡರ ಗುಂಪು ಯತ್ನ ನಡೆಸಿದೆ. ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಅರೋಪಿಗಳನ್ನು ತಡೆದು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಹೀಗಾಗಿ ಯುವತಿ ಯಾವುದೇ ಅಪಾಯವಿಲ್ಲದೆ ಕಾಮುಕ ರಿಂದ ತಪ್ಪಿಸಿಕೊಂಡಿದ್ದಾಳೆ.
ಈ ವೇಳೆ, ಪಾನಮತ್ತ ಸ್ಥಿತಿಯಲ್ಲಿದ್ದ ಕಾಮುಕರ ಗುಂಪು ಪೊಲೀಸರ ಮೇಲೂ ಹಲ್ಲೆ ನಡೆಸಿದೆ. ಅಲ್ಲದೇ, ಗೂಂಡಾವರ್ತನೆ ತೋರಿದ್ದು, ಪೊಲೀಸ್ ವಾಹನ ಮತ್ತು ಚೆಕ್ ಪೋಸ್ಟ್ ಅನ್ನು ಪುಡಿಪುಡಿ ಮಾಡಿದ್ದಾರೆ.
ಇವರ ಜತೆಗೂಡಿದ ಇತರ ವಿದ್ಯಾರ್ಥಿಗಳು ಕೂಡ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಬ್ಯಾರಿಕೇಡ್‌ಗಳನ್ನು ಮುರಿಯಲು ಯತ್ನಿಸಿದ್ದಾರೆ. ಈ ಘಟನೆ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅವರ ತಲೆಗೆ ಗಾಯವಾಗಿದೆ. ದುರುಳರ ವಿರುದ್ಧ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದ ಮತ್ತು ಸರ್ಕಾರಿ ಸೇವಕರ ಮೇಲೆ ಹಲ್ಲೆ ನಡೆಸಿದ ಮತ್ತು ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.