Advertisement
ದಸರಾ ಮಹೋತ್ಸವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅ. 7ರಂದು ಚಾಲನೆ ನೀಡಲಾಗಿತ್ತು.
ನವರಾತ್ರಿ ಮಹೋತ್ಸವದ ಪ್ರಯುಕ್ತ ಮಂಗಳೂರು ನಗರ ಮತ್ತು ಗ್ರಾಮಾಂತರ ದೇವಸ್ಥಾನಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ.
Related Articles
Advertisement
ದಸರಾ ಮಹೋತ್ಸವವನ್ನು ಸಾಮಾನ್ಯ ವಾಗಿ 10 ದಿನ ಆಚರಿಸಲಾಗುತ್ತಿದ್ದು, ಈ ವರ್ಷ ಅದು 9 ದಿನಗಳ ಕಾಲ ನಡೆಯಲಿದೆ. ರವಿವಾರ (ಅ. 10) ಪಂಚಮಿ ಆಚರಿಸಲಾ ಗುತ್ತಿದೆ. ಹಾಗಾಗಿ ನವರಾತ್ರಿಯ ತೃತೀಯ ಮತ್ತು ಚತುರ್ಥ ದಿನಗಳೆರಡನ್ನೂ ಶನಿವಾರ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ನವ ದುರ್ಗೆಯರಲ್ಲಿ ಚಂದ್ರ ಘಂಟಾ ಮತ್ತ ಕೂಷ್ಮಾಂಡಿನಿ ಸಹಿತ ಇಬ್ಬರೂ ದೇವಿಯರ ಪೂಜೆ ನೇರವೇರಿತು.
ಇದನ್ನೂ ಓದಿ:ಲಖೀಂಪುರ ಹಿಂಸೆ: ಆಶಿಷ್ ಮಿಶ್ರಾ ಬಂಧನ; ಸತತ 8 ಗಂಟೆ ಎಸ್‌ಐಟಿ ವಿಚಾರಣೆ
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶನಿವಾರ ಆರ್ಯ ದುರ್ಗಾಹೋಮ, ಪುಷ್ಪಾಲಂಕಾರ ಮಹಾ ಪೂಜೆ, ಭಜನೆ ಹಾಗೂ ರಾತ್ರಿ ಶ್ರೀದೇವಿ ಪುಷ್ಪಾಲಂಕಾರ ಮಹಾ ಪೂಜೆ ಜರಗಿತು. ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಸರ್ವಾಲಂಕಾರ ಪೂಜೆ, ಮಂಗಳಾದೇವಿ ದೇವಸ್ಥಾನ ಮತ್ತು ಕೊಡಿಯಾಲಬೈಲ್‌ನ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ಮಹಾಪೂಜೆ, ಕುಂಜತ್ತಬೈಲ್ ತೋಡ್ಲ ಮಜಲು ಶ್ರೀ ದುರ್ಗಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚಂಡಿಕಾಯಾಗ, ಕೊಲ್ಯ ಶ್ರೀ ದೇವಿ ಮೂಕಾಂಬಿಕೆ ದೇವಸ್ಥಾನದಲ್ಲಿ ಲಲಿತ ಸಹಸ್ರನಾಮ ಪಠನ ನಡೆಯಿತು.
ಇಂದು ಲಲಿತ ಪಂಚಮಿನವರಾತ್ರಿ ಮಹೋತ್ಸವದ ಪ್ರಯುಕ್ತ ರವಿವಾರ ಲಲಿತ ಪಂಚಮಿ ಆಚರಣೆಯಾಗಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಮಂಗಳಾದೇವಿ ದೇವಸ್ಥಾನದಲ್ಲಿ ಲಲಿತ ಪಂಚಮಿ ಆಚರಣೆ, ಕೊಡಿಯಾಲಬೈಲ್ ಶ್ರೀ ಭಗವತೀ ಕ್ಷೇತ್ರದಲ್ಲಿ ವಿಶೇಷ ಕುಂಕುಮಾರ್ಚನ ಸೇವೆ ನೆರವೇರಲಿದೆ.