Advertisement

ಯೋಗ ಮುದ್ರೆ ಮಹತ್ವ

12:08 AM Jan 14, 2020 | mahesh |

ಯೋಗ ಮುದ್ರಾಗಳಿಂದಲೂ ಆರೋಗ್ಯ ವೃದ್ಧಿಸಲಿದ್ದು, ಪ್ರತಿಯೊಂದು ಯೋಗ ಮುದ್ರೆಗೂ ವಿಶೇಷ ಪ್ರಾಮುಖ್ಯತೆ ಇದೆ. ಈ ಹಿನ್ನಲೆ ಪ್ರಮುಖ ಯೋಗ ಮುದ್ರೆಗಳು ಮತ್ತು ಅದರಿಂದ ದೇಹಕ್ಕಾಗುವ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿವೆ. ಈ ಪೈಕಿ ಮೊದಲ ನಾಲ್ಕರ ಬಗ್ಗೆ ಮಾಹಿತಿ ನೀಡಲಾಗಿದೆ. ಉಳಿದದ್ದು ಮುಂದಿನ ಸಂಚಿಕೆಯಲ್ಲಿ.

Advertisement

ಜ್ಞಾನ ಮುದ್ರಾ
ಜ್ಞಾನ ಮತ್ತು ಏಕಾಗ್ರತೆಗೆ ಇರುವ ಅತ್ಯಂತ ಸಾಮಾನ್ಯ ಯೋಗ ಮುದ್ರೆ ಇದು. ಪದ್ಮಾಸನ ಹಾಕಿಕೊಂಡು ಬೆಳಗ್ಗೆ ಈ ಜ್ಞಾನ ಮುದ್ರಾ ವನ್ನು ಅಭ್ಯಾಸ ಮಾಡಬೇಕು. ಇದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಜತೆಗೆ ನಿದ್ರಾಹೀನತೆ ಸಮಸ್ಯೆಯನ್ನೂ ಇದು ಪರಿಹರಿಸಲಿದೆ. ಅಷ್ಟೇ ಅಲ್ಲ, ಕೋಪದ ಸಮಸ್ಯೆಯನ್ನೂ ನಿಭಾಯಿಸಬಹುದು.

ವಾಯು ಮುದ್ರಾ
ಈ ಮುದ್ರೆಯು ದೇಹದ ಗಾಳಿಯನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಈ ಮುದ್ರಾವನ್ನು ನಿಂತು, ಕುಳಿತು ಅಥವಾ ಮಲಗಿದ ಭಂಗಿಯಲ್ಲೂ ಮಾಡಬಹುದು. ಇದಕ್ಕೆ ಸಮಯದ ನಿರ್ದಿಷ್ಟತೆ ಇಲ್ಲ. ಇದು ದೇಹದಲ್ಲಿರುವ ಹೆಚ್ಚುವರಿ ಗಾಳಿಯನ್ನು ಹೊರಹಾಕಿ ಗ್ಯಾಸ್‌ ನಿಂದ ಉಂಟಾಗುವ ಎದೆನೋವನ್ನು ಕಡಿಮೆ ಮಾಡುತ್ತದೆ.

ಅಗ್ನಿಮುದ್ರಾ
ಇದು ದೇಹದಲ್ಲಿನ ಅಗ್ನಿಯ ಅಂಶವನ್ನು ಸಮತೋಲನದಲ್ಲಿಡವಲ್ಲಿ ಸಹಕಾರಿ. ಈ ಮುದ್ರಾವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಇದು ತೂಕ ಇಳಿಸುವ ಮುದ್ರಾ ಸಹ. ಈ ಮುದ್ರೆಯನ್ನು ನಿಯಮಿತವಾಗಿ ಮಾಡುವುದರಿಂದ ಕೊಬ್ಬಿನಾಂಶ ಕರಗಲಿದ್ದು, ಜೀರ್ಣಕ್ರಿಯೆ ಹೆಚ್ಚುತ್ತದೆ.

ವರುಣ ಮುದ್ರಾ
ಈ ಮುದ್ರಾವು ದೇಹದಲ್ಲಿರುವ ನೀರಿನ ಅಂಶವನ್ನು ಸಮತೋಲನದಲ್ಲಿಡುತ್ತದೆ. ಜತೆಗೆ ದೇಹದ ಸೌಂದರ್ಯ, ಚರ್ಮಕ್ಕೆ ಕಾಂತಿ ತುಂಬುತ್ತದೆ. ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರುವ ಶಕ್ತಿ ಈ ಮುದ್ರೆಗಿದ್ದು, ದೇಹದಲ್ಲಿನ ನೀರಿನ ಅಂಶವನ್ನು ಸುಸ್ಥಿತಿಯಲ್ಲಿಟ್ಟು ಚರ್ಮವನ್ನು ಪೋಷಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next