ಮಂಗಳಗಂಗೋತ್ರಿ: ಅಂಬಿಗರ ಚೌಡಯ್ಯ ಅವರು ಅಂದಿನ ಕಾಲದಲ್ಲಿಯೇ ಜಾತಿ,ಅಸ್ಪ್ರಶ್ಯತೆಯ ಬಗ್ಗೆ ಧ್ವನಿ ಯೆತ್ತಿದ ನಾಯಕರಾಗಿದ್ದರು. ಇಂದಿನ ಪ್ರಸ್ತುತ ಕಾಲಘಟ್ಟದಲ್ಲಿಯೂ ಅಂಬಿಗರ ಚೌಡ ಯ್ಯರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು ಅವರ ವಚನಗಳ ಮಹತ್ವವನ್ನು ನಾವು ಅರಿತು ಕೊಳ್ಳುವ ಅನಿವಾರ್ಯತೆ ಇದೆ ಎಂದು ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊಣ ಕಿಶೋರಿ ನಾಯಕ್ ಅಭಿಪ್ರಾಯಪಟ್ಟರು.
ಮಂಗಳೂರು ವಿವಿಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ “ನಂಬಿಗರ ಅಂಬಿಗ’ ನಾಟಕ ಪ್ರದರ್ಶ ನಕ್ಕೆ ಅವರು ಚಾಲನೆ ನೀಡಿದರು.
ವಿವಿಯ ಕುಲಸಚಿವ ಪ್ರೊಣ ಎ.ಎಂ.ಖಾನ್ ಮಾತನಾಡಿ, ಇಂದಿನ ಕಾಲದಲ್ಲಿಯೂ ಸಮಾಜದಲ್ಲಿ ಜಾತ್ಯತೀತ ರಾಜ ಕಾರಣ,ಮೇಲು ಕೀಳು ಮೊದಲಾದ ವ್ಯತ್ಯಾಸಗಳನ್ನು ಗಮನಿಸಬಹುದು ಎಂದರು.
ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕರಾದ ಡಾಣ ನಾಗಪ್ಪ ಗೌಡ ಮಾತನಾಡಿ, ಅಧ್ಯಯನ ಕೇಂದ್ರದ ವತಿಯಿಂದ ಈಗಾಗಲೇ ಹಲವಾರು ಪ್ರಚಾರೋಪನ್ಯಾಗಳು, ಪ್ರಕಟನೆಗಳು ಹೀಗೆ ಹಲವಾರು ಚಟುವಟಿಕೆಗಳ ಮೂಲಕ ಅಂಬಿಗರ ಚೌಡಯ್ಯರ ಬಗ್ಗೆ ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿದೆ. ಈಗ ನಾಟಕ ಮೂಲಕ ಅಂಬಿಗರ ಚೌಡಯ್ಯರ ಹೋರಾಟದ ಬಗ್ಗೆ ತಿಳಿಯಪಡಿಸುವ ವಿಭಿನ್ನ ಪ್ರಯತ್ನ ಮಾಡಲಾಗಿದೆ ಎಂದರು.
ಪರೀಕ್ಷಾಂಗಕುಲಸಚಿವ ಪ್ರೊಣ ರವೀಂದ್ರಾಚಾರಿ, ನಾಟಕ ನಿರ್ದೇಶಕ ಜಗನ್ ಪವಾರ್,ಸಂಶೋಧನ ಸಹಾಯಕ ಯತೀಶ್ ಉಪಸ್ಥಿತರಿದ್ದರು. ಅರ್ಪಿತಾ ನಿರೂಪಿಸಿದರು.