Advertisement

ಅಮರ ಸುಳ್ಯ ಸಮರ ವಿಚಾರ ಸಂಕಿರಣ

09:14 PM Nov 08, 2019 | Lakshmi GovindaRaju |

ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್‌ ವತಿಯಿಂದ ಅಮರ ಸುಳ್ಯ ಸಮರ- 1837ರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ, ಮುಖ್ಯಮಂತ್ರಿ ಯಡಿಯೂರಪ್ಪನವರು ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಮರ ಸುಳ್ಯ ಸಮರ ಕುರಿತಾದ ಛಾಯಾಚಿತ್ರ ಪ್ರದರ್ಶನವನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವಥ್‌ ನಾರಾಯಣ್‌ ಉದ್ಘಾಟಿಸುವರು.

Advertisement

ಡಾ. ಬಿ.ಎಸ್‌. ಪುಟ್ಟಸ್ವಾಮಿ ಸಂಪಾದಿತ ಅಮರ ಸುಳ್ಯ ವಿಪ್ಲವ 1837ರ ಪರಿಚಯದ ಪುಸ್ತಕವನ್ನು, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್‌ ಬಿಡುಗಡೆ ಮಾಡಲಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ಅಧ್ಯಕ್ಷತೆ ವಹಿಸುವರು. ಪ್ರೊ.ಎಂ.ವಿ. ಶ್ರೀನಿವಾಸ್‌, ಡಾ. ಎಂ.ಜಿ. ನಾಗರಾಜ್‌ರಿಂದ ಉಪನ್ಯಾಸ ನಡೆಯಲಿದೆ. ಗುಡ್ಡೆಮನೆ ಅಪ್ಪಯ್ಯ ಗೌಡರ ವಂಶಸ್ಥರು, ಕೆದಂಬಾಡಿ ರಾಮಗೌಡರ ವಂಶಸ್ಥರು, ಲೇಖಕ ಎನ್‌.ಎಸ್‌. ದೇವಿಪ್ರಸಾದ ಸಂಪಾಜೆ, ಡಾ. ಹೆಬ್ಬಾಲೆ ಕೆ. ನಾಗೇಶ್‌, ಪ್ರೊ.ವಿ.ಶಿವರಾಂ ಅವರನ್ನು ಗೌರವಿಸಲಾಗುವುದು.

ಎಲ್ಲಿ?: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ
ಯಾವಾಗ?: ನ.9, ಶನಿವಾರ ಬೆಳಗ್ಗೆ 10

Advertisement

Udayavani is now on Telegram. Click here to join our channel and stay updated with the latest news.

Next