Advertisement

ಫೇಸ್‌ಆ್ಯಪ್‌ ಎಂಬ ಭ್ರಮಾಲೋಕ

07:33 PM Aug 08, 2019 | mahesh |

ಬೆಳಗ್ಗೆ ಎದ್ದಕೂಡಲೇ ಮೊಬೈಲ್‌ನತ್ತ ಕಣ್ಣಾಡಿಸುವ ಅಭ್ಯಾಸವಿರುವ ನನಗೆ ಅಚ್ಚರಿಯೊಂದು ಕಾದಿತ್ತು. ನಿನ್ನೆ ಮೊನ್ನೆಯಷ್ಟೇ ತಿಳಿಮೀಸೆ ಬಿಟ್ಟಿದ್ದ ಯುವಕರೆಲ್ಲ ಫೇಸ್‌ಬುಕ್‌-ವಾಟ್ಸಾಪ್‌ ಸ್ಟೋರಿಗಳಲ್ಲಿ ಮುದುಕರಂತೆ ಕಾಣುತ್ತಿದ್ದರು. ಈ ಅನುಭವ ಹಲವರಿಗೆ ಆಗಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಟಿಕ್‌ಟಾಕ್‌, ಪಬ್‌ಜಿ ಆ್ಯಪ್‌ಗ್ಳು ವಿಶ್ವದೆಲ್ಲೆಡೆ ಸದ್ದು ಮಾಡಿದ್ದವು.ಈಗ ಫೇಸ್‌ಆ್ಯಪ್‌ ಸಾಮಾಜಿಕ ಜಾಲತಾಣ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ. ಮೂಲತಃ ರಷ್ಯಾ ದೇಶದಲ್ಲಿ ತಯಾರಾದ ಫೇಸ್‌ಆ್ಯಪ್‌ ವಿಶ್ವದೆಲ್ಲೆಡೆ ನೂರು ಮಿಲಿಯನ್‌ಗಿಂತ ಅಧಿಕ ಬಳಕೆದಾರರನ್ನು ಸಂಪಾದಿಸಿ ಮುನ್ನುಗ್ಗುತ್ತಿದೆ. ಕೃತಕ ಬುದ್ಧಿ ಮತ್ತೆಯ ಸಹಾಯದಿಂದ ಕೆಲಸ ಮಾಡುವ ಈ ಆ್ಯಪ್‌ ವಿವಿಧ ಫಿಲ್ಟರ್‌ಗಳನ್ನೊಳಗೊಂಡಿದೆ. ಇದರಲ್ಲಿ ಬಾಲ್ಯಾವಸ್ಥೆಯಿಂದ ಮುಪ್ಪಾಗುವ ಹಾಗೆ ಭಾವಚಿತ್ರವನ್ನು ಬದಲಾಯಿಸಬಹುದು. ಜೊತೆಗೆ ಗಡ್ಡಬಿಟ್ಟು, ಲಿಂಗ ಪರಿವರ್ತಿಸಿ, ಕೂದಲಿನ ಬಣ್ಣವನ್ನು ಬದಲಾಯಿಸುವವರೆಗಿನ ವ್ಯವಸ್ಥೆ ಇದರಲ್ಲಿದೆ.

Advertisement

ಸದ್ಯ ಫೇಸ್‌ಆ್ಯಪ್‌ನ ಕ್ರೇಜ್‌ ಎಷ್ಟರ ಮಟ್ಟಿಗೆ ಇದೆ ಎಂದರೆ ಟ್ವಿಟ್ಟರ್‌, ಫೇಸ್‌ಬುಕ್‌, ಇನ್ಸ್‌ ಟ್ರಾಗ್ರಾಮ್‌ಗಳಲ್ಲಿ ಇದನ್ನು ಚಾಲೆಂಜ್‌ ಆಗಿ ಸ್ವೀಕರಿಸಲಾಗುತ್ತಿದೆ. ದೊಡ್ಡ ದೊಡ್ಡ ಸೆಲೆಬ್ರೆಟಿಗಳು ಫೇಸ್‌ಆ್ಯಪ್‌ ತಂತ್ರಜ್ಞಾನ ಬಳಸಿ ಇನ್ನಷ್ಟು ಜನಪ್ರಿಯರಾಗುತ್ತಿದ್ದಾರೆ. ಟ್ರೋಲಿಗರ ನಿದ್ದೆಗೆಡಿಸಿರುವ ಈ ಆ್ಯಪ್‌ ವಿವಿಧ ಜನಪ್ರಿಯ ನಾಯಕರ ಮುಖಚಹರೆಯನ್ನೇ ಬದಲಿಸಿದೆ. ಸಾಮಾನ್ಯ ಜನರಿಗೆ ತಾವು ಮುಂದೆ ಹೇಗೆ ಕಾಣುತ್ತೇವೆ ಎಂಬ ಕುತೂಹಲ ಒಂದು ಕಡೆಯಾದರೆ, ಬದಲಾಯಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವ ಹಠ ಇನ್ನೊಂದು ಕಡೆಯಾಗಿದೆ.

ಆದರೆ, ಫೇಸ್‌ಆ್ಯಪ್‌ನ ಬಳಕೆ ಸುರಕ್ಷಿತವಲ್ಲ ಎಂಬ ಎಚ್ಚರಿಕೆಯನ್ನು ಅಮೆರಿಕಾದ ರಕ್ಷಣಾ ಸಂಸ್ಥೆಯಾದ ಎಫ್ಬಿಐ ಬಹಿರಂಗಪಡಿಸಿದೆ. ಫೇಸ್‌ಆ್ಯಪ್‌ ತನ್ನ ಬಳಕೆದಾರರಿಗೆ ವಿವಿಧ ಷರತ್ತುಗಳನ್ನು ವಿಧಿಸಿರುತ್ತದೆ ಇವೆಲ್ಲದಕ್ಕೆ ಒಪ್ಪಿಕೊಂಡರೆ ಮಾತ್ರ ಈ ಆ್ಯಪ್‌ಅನ್ನು ಉಪಯೋಗಿಸಬಹುದು. ಇದರ ಅನ್ವಯ ಫೇಸ್‌ಆ್ಯಪ್‌ ತನ್ನ ಬಳಕೆದಾರರ ಭಾವಚಿತ್ರಗಳನ್ನು ಬಳಸಬಹುದಾಗಿದೆ. ಇದರಿಂದ ಫೇಸ್‌ಆ್ಯಪ್‌ ಬಳಕೆದಾರರ ಗೌಪ್ಯಗಳ ಮೇಲೆ ರಷ್ಯಾ ದೇಶವು ನಿಗಾವಹಿಸಬಹುದು ಎಂಬುವುದು ಸೈಬರ್‌ ಲೋಕದ ತಜ್ಞರ ವಾದ. ಆದರೆ, ಈ ವಾದವನ್ನು ಫೇಸ್‌ಆ್ಯಪ್‌ ಸಂಸ್ಥೆಯು ಸಂಪೂರ್ಣವಾಗಿ ಅಲ್ಲಗಳೆದಿದೆ ಹಾಗೂ ಫೇಸ್‌ಆ್ಯಪ್‌ ಬಳಕೆದಾರರ ಮೇಲೆ ರಷ್ಯಾ ದೇಶವು ಯಾವುದೇ ರೀತಿಯ ನಿಗಾವಹಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಫೇಸ್‌ಆ್ಯಪ್‌ ಭಾರತದಲ್ಲಿ ಅತ್ಯಂತ ಜನಪ್ರಿಯವಾಗುತ್ತಿದೆ. ಈ ಹಿಂದೆ ಟ್ರೆಂಡಿಂಗ್‌ನಲ್ಲಿದ್ದ ಎಲ್ಲಾ ಆ್ಯಪ್‌ಗ್ಳನ್ನು ಹಿಂದಿಕ್ಕಿ ಫೇಸ್‌ಆ್ಯಪ್‌ ಹೊಸ ದಾಖಲೆ ಬರೆಯಲು ಮುಂದಾಗಿದೆ. ಯುವಸಮುದಾಯಕ್ಕೆ ಮಾತ್ರ ಸೀಮಿತವಾಗಿರದ ಈ ಆ್ಯಪ್‌, ಮಕ್ಕಳಿಂದ ಹಿಡಿದು ವೃದ್ಧರವರೆಗಿನ ಆಸಕ್ತಿ ಕೆರಳಿಸಿದೆ. ಕೆಲವರು ತಮ್ಮ ತಮ್ಮ ಭಾವಚಿತ್ರಗಳನ್ನು ಎಡಿಟ್‌ ಮಾಡಿ ಖುಷಿಪಟ್ಟರೆ ಇನ್ನೂ ಕೆಲವರು ಫೇಸ್‌ಆ್ಯಪ್‌ನ ಬಳಕೆ ಮಿತಿಮೀರುತ್ತಿರುವುದರ ಬಗೆಗೆ ಕಳವಳ ವ್ಯಕ್ತಪಡಿಸುತ್ತಿ¨ªಾರೆ.

ಇಂತಹ ಆ್ಯಪ್‌ಗ್ಳು ತ್ವರಿತವಾಗಿ ಬದಲಾಗುತ್ತಿರುವ ಪ್ರಪಂಚದಲ್ಲಿ ಮನೋರಂಜನೆಗೆ ನೆರವಾಗುತ್ತಿದೆ. ಆದರೆ, ಸಂಘಜೀವಿಯಾದ ಮಾನವ ತನ್ನ ಮನೋರಂಜನೆಗಳನ್ನು ಇಂತಹ ಆ್ಯಪ್‌ಗ್ಳಿಗೆ ಸೀಮಿತಗೊಳಿಸುತ್ತಿರುವುದು ವಿಪರ್ಯಾಸ.

Advertisement

ಭರತ್‌ ಕೋಲ್ಪೆ
ಪ್ರಥಮ ಪತ್ರಿಕೋದ್ಯಮ ವಿಭಾಗ,
ವಿವೇಕಾನಂದ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next