Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಆಯೋಗದ ಮೆಗಾ ಅದಾಲತ್‌ನ ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.,
ವಿವಾಹ ವೇಳೆ ತಾಯಿ ಮನೆಯಿಂದ ನೀಡಲಾಗುವ ಬಂಗಾರದ ಆಭರಣ ಮತ್ತು ನಗದು ಅನಂತರ ಪತಿ ಹಾಗೂ ಮನೆಮಂದಿ ಬಳಸುವ ಕ್ರಮ ವ್ಯಾಪಕವಾಗಿ ಕಂಡುಬರುತ್ತಿದೆ. ಈ ಸೊತ್ತುಗಳ ಪೂರ್ಣ ಹಕ್ಕು ಮಹಿಳೆಯರಿಗೆ ಲಭಿಸುವಂತಾಗಬೇಕು. ಇದಕ್ಕೆ ರಾಜ್ಯ ಮಹಿಳಾ ಆಯೋಗ ಯತ್ನಿಸುತ್ತಿದೆ ಎಂದವರು ಹೇಳಿದರು.
Related Articles
Advertisement
ವೈದ್ಯೆ ದೂರುದೂರವಾಣಿ ಮೂಲಕ ಕರೆಮಾಡಿ ಕಿರುಕುಳ ನೀಡುತ್ತಿರುವ ಸಹವರ್ತಿಯೊಬ್ಬರ ವಿರುದ್ಧ ವೈದ್ಯೆಯೊಬ್ಬರು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿದ್ದರೂ ಅದು ದುರ್ಬಲವಾಗಿದೆ. ಈ ಬಗ್ಗೆ 350 ಕಾಯಿದೆ ಪ್ರಕಾರ ದೂರು ದಾಖಲಿಸುವಂತೆ ಆಯೋಗ ಆದೇಶಿಸಿದ್ದು, ವಿಚಾರಣೆ ನಡೆಯುತ್ತಿದೆ. ಇಂಥಾ ಪ್ರಕರಣಗಳು ಎಲ್ಲೆಡೆ ಹೆಚ್ಚುತ್ತಿದ್ದು, ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಮಹಿಳೆಯರು ಈ ನಿಟ್ಟಿನಲ್ಲಿ ಅ ಧಿಕ ಸಂಖ್ಯೆಯಲ್ಲಿ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದರು. ಆಸ್ತಿ ತಗಾದೆ ಪ್ರಕರಣವೊಂದಕ್ಕೆ ಸಂಬಂ ಧಿಸಿ ಮಹಿಳೆಯೊಬ್ಬರೊಂದಿಗೆ ಯುವಕನೊಬ್ಬ ಅಸಭ್ಯವಾಗಿ ಮಾತನಾಡಿದ ಸಂಬಂಧ ದೂರು ಸಲ್ಲಿಕೆಯಾಗಿದೆ. ಈ ಸಂಬಂಧ ಇಲಾಖೆಗಳಿಂದ ವರದಿ ಯಾಚಿಸಲಾಗಿದೆ ಎಂದು ಅವರು ನುಡಿದರು. ಪ್ರಕರಣವೊಂದಕ್ಕೆ ಸಂಬಂ ಧಿಸಿ ತಂತಿ ಬೇಲಿಯಲ್ಲಿ ಸೋಲಾರ್ ವಿದ್ಯುತ್ ಹರಿಸಿದ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸುವಂತೆ ಆಯೋಗ ಸಂಬಂಧಪಟ್ಟವರಿಗೆ ಆದೇಶಿಸಿದೆ. ಸೋಲಾರ್ ಇರಲಿ, ಯಾವುದೇ ರೀತಿಯ ವಿದ್ಯುತ್ ಇರಲಿ. ಅದನ್ನು ಗಂಭೀರವಾಗಿ ಪರಿಶೀಲಿಸುವಂತೆ ಆಯೋಗ ಆದೇಶಿಸಿದೆ ಎಂದರು. ಬೇರೊಂದು ಜಿಲ್ಲೆಯ ಪ್ರಕರಣವೊಂದಕ್ಕೆ ಸಂಬಂ ಧಿಸಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ಸಿದ್ಧರಾಗದ ಅವರು ಆಯಾ ಜಿಲ್ಲೆಗಳ ಮಹಿಳೆಯರ ಸಮಸ್ಯೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ಅವರಿಗೆ ನ್ಯಾಯ ಒದಗಿಸುವ ಪ್ರಯತ್ನ ಆಯೋಗದ್ದು ಎಂದು ಸ್ಪಷ್ಟನೆ ನೀಡಿದರು. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡು ಜಿಲ್ಲೆಯಲ್ಲಿ ಮಹಿಳಾ ಆಯೋಗಕ್ಕೆ ಲಭಿಸಿದ ದೂರುಗಳ ಸಂಖ್ಯೆ ಕಡಿಮೆ ಎಂದು ತಿಳಿಸಿದರು. ಉಳಿದ ಜಿಲ್ಲೆಗಳಲ್ಲಿ 100ಕ್ಕಿಂತ ಅಧಿ ಕ ದೂರುಗಳು ಸಲ್ಲಿಕೆಯಾದರೆ, ಕಾಸರಗೋಡು ಜಿಲ್ಲೆಯಲ್ಲಿ 40 ದೂರುಗಳು ಮಾತ್ರ ಲಭಿಸಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಪ್ರತಿನಿ ಧಿಗಳಾದ ಡಾ.ಶಾಹಿದಾ ಕಮಾಲ್, ಪಿ.ಎಂ.ರಾಧಾ, ನ್ಯಾಯವಾದಿ ಷಿಜಿ ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳ ಮೇಲೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ಇದರ ವಿರುದ್ಧ ಕಾನೂನು ಜಾಗೃತಿ ಮೂಡಿಸುವ ಯತ್ನ ರಾಜ್ಯ ಮಹಿಳಾ ಆಯೋಗದಿಂದ ನಡೆಸಲಾಗುತ್ತಿದೆ. ಇದರ ಅಂಗವಾಗಿ ಪೋಕೊÕà ಕಾಯಿದೆ ಕುರಿತು ರಾಜ್ಯಾದ್ಯಂತ ಮಹಿಳೆಯರಿಗಾಗಿ ತರಗತಿ ನಡೆಸಲಾಗುತ್ತಿದೆ.ತರಗತಿಯ ಪೂರ್ಣ ವೆಚ್ಚವನ್ನು ಆಯೋಗವೇ ವಹಿಸುತ್ತಿದೆ. ರಾಜ್ಯ ಮಹಿಳಾ ಆಯೋಗ ಒಂದು ಅರ್ಧ ನ್ಯಾಯಾಂಗ ವ್ಯವಸ್ಥೆ. ಆದರೂ ರಾಜ್ಯದ ಮಹಿಳೆಯರಿಗೆ ಪೂರ್ಣ ರೂಪದಲ್ಲಿ ನ್ಯಾಯ ಒದಗಿಸುವ ಯತ್ನ ನಡೆಸುತ್ತಿದೆ. ರಾಜಕೀಯೇತರವಾಗಿ ಅದು ತನ್ನ ಕಾರ್ಯವೈಖರಿ ನಡೆಸುತ್ತಿದೆ ಎಂದು ಜೋಸ್‌ಫೈನ್ ಅವರು ಹೇಳಿದರು.