Advertisement

ದೇವರ ದಾಸಿಮಯ್ಯರ ಆದರ್ಶ ಪಾಲಿಸಿ: ನಾಗರಾಜ್‌

03:47 PM Apr 07, 2022 | Team Udayavani |

ದೇವನಹಳ್ಳಿ: ಸಮಾಜದಲ್ಲಿನ ಅಸಮಾನತೆಯ ವಿರುದ್ಧ ಕ್ರಾಂತಿಕಾರರನ್ನು ಹುಟ್ಟುಹಾಕಿದ ಬಸವವಾದಿ ಶರಣರಿಗೆ ದೇವರ ದಾಸಿಮಯ್ಯ ವಚನ ಸಾಹಿತ್ಯಗಳು ಸ್ಫೂರ್ತಿಯಾಗಿದ್ದವು ಎಂದು ಪುರಸಭಾ ಮುಖ್ಯಾಧಿಕಾರಿ ಎ.ಎಚ್‌.ನಾಗರಾಜ್‌ ತಿಳಿಸಿದರು.

Advertisement

ಪಟ್ಟಣದ ಪುರಸಭಾ ಕಾರ್ಯಾಲಯದ ಆವರಣದಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ದೇವರ ದಾಸಿಮಯ್ಯ ಅವರು ಕೂಡ ಜಾತಿ ನಿರ್ಮೂಲನೆಗಾಗಿ ಹೋರಾಟ ಮಾಡಿದ್ದಾರೆ. ಸಮಾಜದಲ್ಲಿ ಜಾತಿ-ಧರ್ಮ ತಾರತಮ್ಯವಿಲ್ಲದೆ ಸಮಾಜದಲ್ಲಿ ಸಹೋದರತ್ವ ಭಾವನೆಯಿಂದ ಬದುಕಬೇಕು.

ದೇವರದಾಸಿಮಯ್ಯ ಶ್ರೇಷ್ಠ ವಚನಕಾರರು. ಮನುಷ್ಯನ ತಪ್ಪುಗಳನ್ನು ತಿದ್ದಲು ದೇವರದಾಸಿಮಯ್ಯ ಅವರ ವಚನಗಳು ಸಹಕಾರಿಯಾಗಲಿದೆ. ವೃತ್ತಿಯಲ್ಲಿ ನೇಕಾರನಾದ ದೇವರ ದಾಸಿಮಯ್ಯ ಅವನು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವ ಭಕ್ತಿ ಮೆರೆದಿರುವುದು ಪುರಾಣಗಳಲ್ಲಿ ಕಾಣಬಹುದಾಗಿದೆ. ದಾಸಿಮಯ್ಯ ಅವರು 176 ವಚನಗಳನ್ನು ವಚನಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರ ವಚನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು
ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಗೋಪಮ್ಮ ಮಾತನಾಡಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ವಚನ ಸಾಹಿತಿ ದೇವರದಾಸಿಮಯ್ಯ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ವೇಳೆಯಲ್ಲಿ ಪುರಸಭಾ ಉಪಾಧ್ಯಕ್ಷೆ ಗೀತಾ ಶ್ರೀಧರ್‌ ಮೂರ್ತಿ, ನಾಮಿನಿ ಪುರಸಭಾ ಸದಸ್ಯ ಪುನೀತ, ಪುರಸಭಾ ಪರಿಸರ ಅಭಿಯಂತರೆ ನೇತ್ರಾವತಿ, ಆರೋಗ್ಯ ನಿರೀಕ್ಷಕಿ ಶ್ರೀದೇವಿ, ಮುಖಂಡರಾದ ಮಂಜುನಾಥ್‌, ಶ್ರೀಧರ್‌ ಮೂರ್ತಿ ಪುರಸಭೆಯ ಬೈರಪ್ಪ ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next