Advertisement

ಸಂತ ಸೇವಾಲಾಲ್‌ರ ಆದರ್ಶ ಪಾಲಿಸಿ

10:54 AM Feb 16, 2019 | Team Udayavani |

ಬಳ್ಳಾರಿ: ವಿಶೇಷ ಸಂಸ್ಕೃತಿಯುಳ್ಳ ಬಂಜಾರಾ ಸಮುದಾಯ ತನ್ನ ಸಂಸ್ಕೃತಿಯಿಂದಲೇ ದೇಶದಾದ್ಯಂತ ಗುರುತಿಸಲ್ಪಟ್ಟಿದ್ದು, ಎಂದಿಗೂ ತಮ್ಮ ಸಂಸ್ಕೃತಿ ಅಳಿಯಲು ಬಿಡಬಾರದು ಎಂದು ಲೇಖಕ ಪ್ರೊ.ಎನ್‌.ಶಾಂತಾನಾಯ್ಕ ಹೇಳಿದರು.

Advertisement

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್‌ ಜಯಂತಿಯಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಸೇವಾಲಾಲ್‌ ಸಮುದಾಯದಲ್ಲಿ ದೇವರಾಗಿ, ದೊಡ್ಡ ಪವಾಡಗಳನ್ನು ನಡೆಸಿದ್ದಾರೆ. ಒಡೆದು ಹೋಗಿದ್ದ ಸಮುದಾಯವನ್ನು ಒಗ್ಗೂಡಿಸಿ ಮೇಲೆತ್ತುವ ಕೆಲಸ ಮಾಡಿದ ಅವರ ಆಶಯದಂತೆ ಎಲ್ಲರೂ ನೈತಿಕತೆಯಿಂದ ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.

ಯಾವುದೇ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ತುಂಬಾ ಅವಶ್ಯವಾದ ಅಸ್ತ್ರ. ಎಲ್ಲರೂ ಮೊದಲು ಶಿಕ್ಷಿತರಾಗಬೇಕು. ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಸಮುದಾಯದ ಜನರಿದ್ದಾರೆ. ಸಮುದಾಯದಲ್ಲಿ ಒಡಕು ಮೂಡದಂತೆ ಒಗ್ಗಟ್ಟಿನಿಂದ ಅಭಿವೃದ್ಧಿಗಾಗಿ ಶ್ರಮಿಸಬೇಕು. ನಮ್ಮಲ್ಲಿನ ಒಡಕು ಬೇರೆಯವರಿಗೆ ನಮ್ಮ ಮೇಲೆ ಸವಾರಿ ಮಾಡಲು ದಾರಿ ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ಲಕ್ಷಾಂತರ ರೂ. ಸಾಲ ಪಡೆದು ವರ್ಷದಲ್ಲಿ ನಾಲ್ಕು ಹಬ್ಬಗಳನ್ನು ಮಾಡಿ, ಸಾಲ ತೀರಿಸಲು ಊರು ಬಿಟ್ಟು ಬೇರೆ ಕಡೆ ವಲಸೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರ ಬಗ್ಗೆ ಸಮುದಾಯದವರು ಜಾಗೃತರಾಗಬೇಕಿದೆ. ಸೇವಾಲಾಲ್‌ರು ಭಜನೆಯ ಮೂಲಕ ಸಮಾಜದಲ್ಲಿದ್ದ ತೊಡಕು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದಿನ ಯುವಕರು ಅವರ ಆದರ್ಶಗಳನ್ನು ಅನುಸರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್‌ ಯು.ನಾಗರಾಜ, ಸೇವಾಲಾಲ್‌ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಭವಿಷ್ಯದತ್ತ ಹೆಜ್ಜೆ ಇಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಪುಲ್ವಾಮಾ ಬಾಂಬ್‌ ಸ್ಫೋಟದಲ್ಲಿ ವೀರಮರಣವನ್ನಪ್ಪಿದ ಯೋಧರಿಗೆ ಶಾಂತಿ ಕೋರಿ ಮೌನ ಆಚರಿಸಿದರು.

Advertisement

ಕಾರ್ಯಕ್ರಮಕ್ಕೂ ಮುನ್ನ ಇಲ್ಲಿನ ಮುನ್ಸಿಪಲ್‌ ಕಾಲೇಜು ಮೈದಾನದಿಂದ ಸೇವಾಲಾಲ್‌ ಭಾವಚಿತ್ರ ಮೆರವಣಿಗೆ ರಂಗಮಂದಿರದವರೆಗೆ ಸಾಗಿತು. ಅಖೀಲ ಕರ್ನಾಟಕ ಬಂಜಾರಾ ಸೇವಾ ಸಂಘದಿಂದ ಭಜನೆ ಮತ್ತು ಲಂಬಾಣಿ ನçತ್ಯವನ್ನು ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಸಿದ್ಧಲಿಂಗ ಸ್ವಾಮೀಜಿ, ಸಮಾಜದ ಮುಖಂಡರಾದ ಚಂದ್ರಾನಾಯ್ಕ, ಗೋವಿಂದನಾಯ್ಕ, ಗಂಗಾಧರನಾಯ್ಕ, ಯುವರಾಜ್‌ ನಾಯ್ಕ, ಕೃಷ್ಣನಾಯ್ಕ, ಸಾಮಿನಾಯ್ಕ, ಸಕ್ರುನಾಯ್ಕ, ತಾಪಂ 

Advertisement

Udayavani is now on Telegram. Click here to join our channel and stay updated with the latest news.

Next