Advertisement
ಯಾವುದೇ ವೈಯಕ್ತಿಕ ಸಂದೇಶ ಅಥವಾ ಲಾಂಛನವನ್ನು ಆಟಗಾರರ ಬಟ್ಟೆ ಅಥವಾ ಸಾಧನದ ಮೇಲೆ ಪ್ರದರ್ಶಿಸುವುದಕ್ಕೆ ಐಸಿಸಿ ಆಯೋಜಿಸುತ್ತಿರುವ ಕ್ರಿಕೆಟ್ ಕೂಟಗಳ ನಿಯಮವು ಅನುಮತಿ ನೀಡುವುದಿಲ್ಲ. ಧೋನಿ ಧರಿಸಿದ ಸೇನೆಯ ಲಾಂಛನವು ವಿಕೆಟ್ ಕೀಪರ್‌ನ ಗ್ಲೌಸ್ ಮೇಲೆ ನೀಡಲಾದ ಅನುಮತಿಯ ಉಲ್ಲಂಘನೆಯಾಗಿದೆ ಎಂದು ಐಸಿಸಿಯು ಬಿಸಿಸಿಐಯ ಮನವಿಗೆ ಪ್ರತಿಕ್ರಿಯೆ ನೀಡಿದೆ.
ಧೋನಿ ಅವರ ವಿಕೆಟ್ ಕೀಪಿಂಗ್ ಗ್ಲೌಸ್‌ನ ವಿವಾದ ಬಗ್ಗೆ ಹೇಳಿಕೆ ನೀಡಿದ ಭಾರತೀಯ ಸೇನೆ ಇದಕ್ಕೆ ಮತ್ತು ಸೇನೆಗೆ ಯಾವುದೇ ಸಂಬಂಧವಿಲ್ಲ ಎಂದಿದೆ. ಮುಂಚಿತ ಒಪ್ಪಿಗೆ ಅಗತ್ಯ
ಐಸಿಸಿಯ “ಬಟ್ಟೆ ಮತ್ತು ಸಾಧನ’ ನಿಯಮವು ಹೇಳುವಂತೆ ಆಟಗಾರರು ಆರ್ಮ್ಬ್ಯಾಂಡ್ ಅಥವಾ ಇನ್ನಿತರ ಸಾಧನಗಳ ಮೇಲೆ ವೈಯಕ್ತಿಕ ಸಂದೇಶ ಪ್ರದರ್ಶಿಸುವುದಕ್ಕೆ ಅವಕಾಶ ಇರುವುದಿಲ್ಲ. ಇದಕ್ಕೆ ಸಾಕಷ್ಟು ಮುಂಚಿತವಾಗಿ ಒಪ್ಪಿಗೆ ಪಡೆಯಬೇಕು ಎಂದು ಐಸಿಸಿ ಸ್ಪಷ್ಟವಾಗಿ ತಿಳಿಸಿದೆ.