ಬೆಂಗಳೂರು: ತಂಗಿಯ ನಿಶ್ಚಿತಾರ್ಥಕ್ಕೆ ಬಾರಲಿಲ್ಲ ಎಂದು ಪತ್ನಿಗೆ ಚಾಕುವಿನಿಂದ ಇರಿದ ಪತಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಂಕದಕಟ್ಟೆ ನಿವಾಸಿ ಜಯಪ್ರಕಾಶ್ (32) ಬಂಧಿತ. ಈತನ ಪತ್ನಿ ದಿವ್ಯಶ್ರೀ (26) ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು.
ಜಯಪ್ರಕಾಶ್ ಹಾಗೂ ದಿವ್ಯಶ್ರೀ ಕ್ಯಾಟರಿಂಗ್ ಕೆಲಸ ಮಾಡು ತ್ತಿದ್ದು, ಪರಸ್ಪರ ಪ್ರೀತಿಸಿ 2019ರಲ್ಲಿ ವಿವಾಹವಾಗಿದ್ದರು. ಪೋಷಕರ ವಿರೋಧದ ಹಿನ್ನಲೆ ಬೆಂಗಳೂರಲ್ಲಿ ವಾಸಿಸುತ್ತಿದ್ದರು. ಮೊದಲು ಮೂಡಲ ಪಾಳ್ಯ ದಲ್ಲಿ ಮನೆ ಮಾಡಿಕೊಂಡು ವಾಸವಿದ್ದ ದಂಪತಿ, ನಂತರ ಸುಂಕ ದಕಟ್ಟೆಗೆ ಮನೆ ಸ್ಥಳಾಂತರಿಸಿದ್ದರು. ವಿವಾಹ ವಾದ ಕೆಲ ತಿಂಗಳ ಬಳಿಕ ಜಯಪ್ರಕಾಶ್ ಪತ್ನಿ ಮೇಲೆ ಅನುಮಾನ ಹೊಂದಿದ್ದ. ನಿನಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿ ಜಯಪ್ರಕಾಶ್ ಜಗಳ ಮಾಡುತ್ತಿದ್ದ. ಬೇರೆಯವರ ಜೊತೆಗೆ ಸದಾ ಮಾತನಾ ಡುತ್ತೀಯಾ ಎಂದು ಪತ್ನಿಗೆ ಹಲ್ಲೆ ನಡೆಸುತ್ತಿದ್ದ.
ಪತ್ನಿ ಕಾಲಿಗೆ ಚಾಕುವಿನಿಂದ ಇರಿದ ಪತಿ: ಇತ್ತೀ ಚೆಗೆ ಜಯಪ್ರಕಾಶ್ ಸಹೋ ದರಿಯ ನಿಶ್ಚಿ ತಾರ್ಥ ನಡೆದಿತ್ತು. ಈ ಸಮಾ ರಂಭಕ್ಕೆ ಪತ್ನಿ ದಿವ್ಯಶ್ರೀ ಹೋಗಿ ರಲಿಲ್ಲ. ಇದರಿಂದ ಆರೋಪಿ ಜಯ ಪ್ರಕಾಶ್ ಆಕ್ರೋಶಗೊಂಡಿದ್ದ. ಇದೇ ವಿಚಾರಕ್ಕೆ ಫೆ.15ರಂದು ಬೆಳಗ್ಗೆ 9 ಗಂಟೆಗೆ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ತಾರಕಕ್ಕೆ ಹೋಗಿ ಜಯಪ್ರಕಾಶ್ ಏಕಾ ಏಕಿ ಚಾಕುವಿನಿಂದ ದಿವ್ಯಶ್ರೀಗೆ ಇರಿದು ಕೊಲೆ ಮಾಡಲು ಮುಂದಾಗಿದ್ದ. ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ದಿವ್ಯಶ್ರೀ ಕಾಲಿಗೆ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯ ಗೊಂಡ ದಿವ್ಯಶ್ರೀ ಕುಸಿದು ಬಿದ್ದಿದ್ದಳು. ದಿವ್ಯಶ್ರೀ ಚೀರಾಟ ಕೇಳಿ ನೆರೆ ಹೊರೆಯವರು ಬರುತ್ತಿದ್ದಂತೆ ಜಯಪ್ರಕಾಶ್ ಸ್ಥಳದಿಂದ ಪರಾರಿಯಾಗಿದ್ದ. ಕೂಡಲೇ ದಿವ್ಯಶ್ರೀಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿ ಜಯಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಜೈಲಿಗಟ್ಟಿದ್ದಾರೆ.