Advertisement

ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ಆತ್ಮಹತ್ಯೆ

12:50 PM Nov 13, 2017 | |

ಬೆಂಗಳೂರು: ಪರ ಪುರುಷನೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿರುವ ಅನುಮಾನದಿಂದ ಬೇಸತ್ತ ವ್ಯಕ್ತಿಯೊಬ್ಬ ಡೆತ್‌ನೋಟ್‌ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್‌ಎಎಲ್‌ ಸಮೀಪದ ಜಗದೀಶ್‌ನಗರದಲ್ಲಿ ನಡೆದಿದೆ. ಪೇಂಟರ್‌ ಕೆಲಸ ಮಾಡುತ್ತಿದ್ದ ಆಂಥೋಣಿ (27) ಮೃತನು.

Advertisement

ನಾಲ್ಕು ವರ್ಷಗಳ ಹಿಂದೆ ಪ್ರಭಾ ಎಂಬಾಕೆಯನ್ನು ವಿವಾಹವಾಗಿದ್ದ ಆಂಥೋಣಿ, ಪತ್ನಿಯೊಂದಿಗೆ ಜಗದೀಶ್‌ನಗರದಲ್ಲಿ ವಾಸವಿದ್ದರು. ಇತ್ತೀಚಿಗೆ ನಡತೆ ಬಗ್ಗೆ ಸಂಶಯಪಟ್ಟು ಪತ್ನಿಯೊಂದಿಗೆ ಜಗಳ ಮಾಡಿದ್ದ. ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪತ್ನಿ ಠಾಣೆಗೆ ದೂರು ನೀಡಿದ್ದರು. ನಂತರ ಹಿರಿಯರು ಮಧ್ಯೆ ಪ್ರವೇಶಿಸಿ ದಂಪತಿ ನಡುವೆ ಸಂಧಾನ ಮಾಡಿದ್ದರು.

ಆದರೂ ಕಳೆದ ವಾರ ಪತ್ನಿಯ ತವರು ಮನೆಗೆ ಹೋಗಿದ್ದ ಆಂಥೋಣಿ ಅಲ್ಲಿಯೂ ಜಗಳ ಮಾಡಿದ್ದ. ಅಲ್ಲಿಂದ ಶುಕ್ರವಾರ ನಗರಕ್ಕೆ ಬಂದಿದ್ದ. ಇದೇ ವೇಳೆ ಪಕ್ಕದ ಮನೆ ನಿವಾಸಿಯೊಂದಿಗೆ ಪತ್ನಿ ಸ್ನೇಹದಿಂದ ಇರುವುದನ್ನು ಕಂಡು ಮತ್ತೂಮ್ಮೆ ಜಗಳ ಮಾಡಿದ್ದ. ಬಳಿಕ ಶನಿವಾರ ರಾತ್ರಿ ಮನೆಯಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೆತ್‌ ನೋಟ್‌ನಲ್ಲೇನಿದೆ?: “ಪತ್ನಿಯ ಅಕ್ರಮ ಸಂಬಂಧದಿಂದ ನನಗೆ ಬದುಕಬೇಕೆಂಬ ಎಂಬ ಆಸೆ ಇಲ್ಲವಾಗಿದೆ. ನಾನು ಸಾವಿಗೆ ಶರಣಾಗುತ್ತಿದ್ದೇನೆ. ನನ್ನ ಸಾವಿನ ಬಳಿಕ ಪತ್ನಿ ಹಾಗೂ ಆಕೆ ಕುಟುಂಬದವರಿಗೆ ಶಿಕ್ಷೆಯಾಗಬೇಕು. ಆಗಲೇ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ’ ಎಂದು ಆಂಥೋಣಿ ಆತ್ಮಹತ್ಯೆಗೆ ಮೊದಲು ಬರೆದಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ್ದಾರೆ. ಪ್ರಕರಣ ಎಚ್‌ಎಎಲ್‌ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next