Advertisement

ಮಳೆಗಾಗಿ ಗೊಂಬೆಗಳ ಅದ್ಧೂರಿ ಮದುವೆ

09:50 AM Jun 09, 2019 | Suhan S |

ಲೋಕಾಪುರ: ಸಮೀಪದ ವರ್ಚಗಲ್ ಗ್ರಾಮದಲ್ಲಿ ಹಣಮಂತ ದೇವರ ದೇವಸ್ಥಾನದಲ್ಲಿ ಮಳೆಗಾಗಿ ಗೊಂಬೆಗಳ ಮದುವೆ ಮಾಡಲಾಯಿತು.

Advertisement

ಮೊದಲು ವರನ ಕಡೆಯಿಂದ ಸ್ಥಳೀಯ ನಿವಾಸಿ ಈರಪ್ಪಕಟ್ಟಿ ಅವರು ವಧು ನೋಡಲು ಮನಗೆ ಬಂದರು. ಬಳಿಕ ಎರಡು ಕುಟುಂಬಗಳ ನಡುವೆ ವಿವಾಹ ಕುರಿತು ಮಾತುಕತೆ ನಡೆದ ನಂತರ ಎರಡು ಮನೆಗಳಲ್ಲಿ ಮದುವೆ ಸಮಾರಂಭ ಆರಂಭಗೊಂಡಿತು. ವಿಳ್ಯದೆಲೆಯಲ್ಲಿ ಸಕ್ಕರೆ ನೀಡಲಾಯಿತು. ದೇವಸ್ಥಾನದ ಮುಂದೆ ಹಾಲಕಂಬ ಹಾಕಲಾಯಿತು. ಮಹಿಳೆಯರು ಮನೆ-ಮನೆಗೆ ಹೋಗಿ ಓಣಿ ನಿವಾಸಿಗಳನ್ನು ಮದುವೆಗೆ ಆಹ್ವಾನಿಸಿದ್ದರು. ಸಮಾರಂಭಕ್ಕೆ ಬಂದಿದ್ದ ಮುತ್ತೈದೆಯರಿಗೆ ಕಂಕಣ ಕಟ್ಟಲಾಯಿತು. ನೆರೆದಿದ್ದವರು ಪರಸ್ಪರ ಅರಿಶಿಣ ಹಚ್ಚಿಕೊಂಡರು.

ಸಂಪ್ರದಾಯ ಪ್ರಕಾರ ವಧು-ವರರಿಗೆ ಸುರಗಿ ನೀರು ಹಾಕಿದರು. ಒಂದೆಡೆ ಹಿರಿಯರು ಜನಪದ ಹಾಡುತ್ತಿದ್ದರೆ, ಮತ್ತೂಂದಡೆ ಚಿಕ್ಕ ಮಕ್ಕಳು ಕುಣಿದು ಸಂತೋಷಪಟ್ಟರು. ಹೆಣ್ಣಿನ ಕಡೆಯವರು ವಧು ಗೊಂಬೆಗೆ ಶೃಂಗಾರ ಮಾಡುವುದರಲ್ಲಿ ನಿರತರಾಗಿದ್ದರು. ವರ ಗೊಂಬೆಗೂ ಅಲಂಕಾರ ಮಾಡಲಾಯಿತು. ಸಂಪ್ರದಾಯದಂತೆ ವಧು ಮತ್ತು ವರರಿಗೆ ಬಾಸಿಂಗ ಕಟ್ಟಲಾಯಿತು. ಗಟ್ಟಿಮೇಳದ ನಡುವೆ ವರ ಗೊಂಬೆಯಿಂದ ವಧು ಗೊಂಬೆಗೆ ತಾಳಿ ಕಟ್ಟಿಸಲಾಯಿತು.

ಆಗಮಿಸಿದ್ದ ಸಂಬಂಧಿಕರು ನವ ಜೋಡಿಗೆ ಆಶೀರ್ವದಿಸಿದರು. ನಂತರ ವಿವಿಧ ತರಹದ ಅಡುಗೆ ಪಡಿಸಲಾಯಿತು. ಹೀಗೆ ಮಳೆಗಾಗಿ ಗೊಂಬೆಗಳ ಮದುವೆ ಕೆಲ ವರ್ಷಗಳಿಂದ ನಡೆದುಕೊಂಡು ಬಂದಿದೆ. ಗ್ರಾಮಸ್ಥರಾದ ಚಿನ್ನವ್ವ ಪಾಟೀಲ, ತಾರವ್ವ ಪಾಟೀಲ, ಪಾರ್ವತೆವ್ವ ಪಾಟೀಲ, ಯಮನವ್ವ ಮುತ್ತನ್ನವರ, ಶ್ರೀಕಾಂತ ತುಳಸಿಗೇರಿ, ಭೀಮನಗೌಡ ಪಾಟೀಲ, ಲೋಕನಗೌಡ ಪಾಟೀಲ, ಹಣಮಂತ ತುಳಸಿಗೇರಿ, ಮಹಾದೇವ ಮುದ್ನೂರ, ಎಚ್.ಕೆ. ಪಾಟೀಲ, ಶಂಕರಗೌಡ ಪಾಟೀಲ, ಹಣಮಂತ ಹನಗಲಿ, ನಿಂಗಪ್ಪ ಪೂಜಾರ, ಛಾಯಪ್ಪಗೌಡ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next