Advertisement

ಚೀನಾದಿಂದ ಬಂದ ಹುಬ್ಬಳ್ಳಿ ವ್ಯಕ್ತಿಗೆ ಅನಾರೋಗ್ಯ; ಕೊರೊನಾ ಶಂಕೆ

11:54 PM Feb 03, 2020 | Lakshmi GovindaRaj |

ಹುಬ್ಬಳ್ಳಿ: ಚೀನಾದಿಂದ ಬಂದ ನಗರದ ವ್ಯಕ್ತಿಯೊಬ್ಬರು ಜ್ವರ-ಕಫದಿಂದ ಬಳಲಿ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೂ ಕೊರೊನಾ ವೈರಸ್‌ ತಗುಲಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಕೇಶ್ವಾಪುರ ನಿವಾಸಿ ಸಂದೀಪ ಕೆಳಸಂಗದ (39) ಕಿಮ್ಸ್‌ಗೆ ದಾಖಲಾ ದವರು. ಇವರ ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆಗಾಗಿ ಪುಣೆಯ ಎಫ್‌ಎಸ್‌ಎಲ್‌ ವಿಭಾಗಕ್ಕೆ ಕಳುಹಿಸಲಾಗಿದೆ.

Advertisement

ಆರೋಗ್ಯವಾಗಿದ್ದಾರೆ: ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಸಂದೀಪ, ಚೀನಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಜ.18ರಂದು ಚೀನಾದಿಂದ ಮುಂಬೈಗೆ ಆಗಮಿಸಿ ನಂತರ ಹುಬ್ಬಳ್ಳಿಗೆ ಬಂದಿದ್ದಾರೆ. ತೀವ್ರ ಜ್ವರ ಹಾಗೂ ತಲೆ ನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂದೀಪ ಚೀನಾದಿಂದ ಹುಬ್ಬಳ್ಳಿಗೆ ಆಗಮಿಸಿ 15 ದಿನಗಳು ಕಳೆದಿವೆ.

ಕೊರೊನಾ ವೈರಸ್‌ ಇರುವುದೇ ಆಗಿದ್ದರೆ ಇಷ್ಟರಲ್ಲಿಯೇ ಅವರ ಆರೋಗ್ಯದಲ್ಲಿ ಏನಾದರೂ ಬದಲಾವಣೆ ಕಾಣ ಬಹುದಾಗಿತ್ತು. ಮುಂಜಾಗ್ರತಾ ಕ್ರಮ ವಾಗಿ ಎಲ್ಲ ಬಗೆಯ ತಪಾಸಣೆ ನಡೆಸಿ ತೀವ್ರ ನಿಗಾ ವಹಿಸಿದ್ದೇವೆ. ಅವರಲ್ಲಿ ಕೊರೊನಾ ವೈರಸ್‌ ಇರುವ ಸಾಧ್ಯತೆ ಕಡಿಮೆ ಇದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ವರದಿಯ ನಂತರವೇ ಸ್ಪಷ್ಟನೆ ಸಿಗಲಿದೆ. ಮಂಗಳವಾರ ವರದಿ ಬರಲಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಹೇಳಿದರು.

ಕೊರೊನಾ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಜಾಗೃತಿ ಫಲಕ ಅಳವಡಿಸಲಾಗಿದ್ದು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಗಾಗಿ ಪ್ರತ್ಯೇಕ ವಾರ್ಡ್‌ ಕಲ್ಪಿಸಲಾಗಿದೆ. ಅಗತ್ಯಬಿದ್ದರೆ, ಹೆಲ್ಪ್ ಡೆಸ್ಕ್ ತೆರೆಯಲೂ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next