Advertisement

ವಿಶ್ವಾಸ ಪರ್ವದಲ್ಲಿ ಸದನ ಸೆಳೆದ ಶೂರರು…

10:28 PM Jul 23, 2019 | Lakshmi GovindaRaj |

ಸಮ್ಮಿಶ್ರ ಸರ್ಕಾರ ಪತನವಾಗುತ್ತಿದ್ದಂತೆ ಸಂಸದೀಯ ಪಟುಗಳಿಂದ ತುಲನೆಗೊಂಡ ರಾಜಕೀಯ, ಸಂವಿಧಾನ, ಕಾನೂನು-ಕಟ್ಟಳೆಗಳು ಜನರ ಮೆಚ್ಚುಗೆಗೂ ಪಾತ್ರವಾಗಿದೆ. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೂರ್‍ನಾಲ್ಕು ದಿನಗಳಿಂದ ಸದನದ ಒಳಗೆ ತಮ್ಮದೇ ಆದ ಕಾರ್ಯತಂತ್ರ ಹೆಣೆದ ಈ ರಾಜಕಾರಣಿಗಳ ಕಾರ್ಯತಂತ್ರ ಜನರ ಶ್ಲಾಘನೆಗೆ ಕಾರಣವಾಗಿದೆ. ಅಂತಹ ಸದನ ವೀರರ ಕಿರು ಮಾಹಿತಿ ಇಲ್ಲಿದೆ.

Advertisement

ಕೃಷ್ಣ ಬೈರೇಗೌಡ: ಅಧಿವೇಶನದಲ್ಲಿ ಶಾಸಕರ ರಾಜೀನಾಮೆ, ಸುಪ್ರೀಂಕೋರ್ಟ್‌ ತೀರ್ಪು, ರಾಜ್ಯಪಾಲರ ನಿರ್ದೇಶನ, ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದ ಹಿಂದಿನ ಆದೇಶ ವಿಚಾರಗಳನ್ನು ಸಮರ್ಥವಾಗಿ ಮಂಡಿಸಿ, ಗಮನ ಸೆಳೆದವರು ಕೃಷ್ಣ ಬೈರೇಗೌಡ. ಸಂಸದೀಯ ವ್ಯವಹಾರಗಳ ಸಚಿವರಾಗಿಯೂ ಪ್ರಕರಣಗಳ ಬಗ್ಗೆ ಅಧ್ಯಯನ ಮಾಡಿ ಸದನದಲ್ಲಿ ಎರಡು ದಿನಗಳ ಕಾಲ ಬಿಜೆಪಿಯವರಿಗೆ ತಿರುಗೇಟು ನೀಡಿ ಮಿಂಚಿದವರು.

ಜೆ.ಸಿ.ಮಾಧುಸ್ವಾಮಿ: ಅಧಿವೇಶನದಲ್ಲಿ ವಿಶ್ವಾಸಮತ ನಿರ್ಣಯ ಕುರಿತು ನಡೆದ ಚರ್ಚೆ ವೇಳೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಕಾನೂನಾತ್ಮಕ ಹಾಗೂ ಸುಪ್ರೀಂಕೋರ್ಟ್‌ ತೀರ್ಪು, ಹಿಂದಿನ ಘಟನೆಗಳ ಪ್ರಸ್ತಾಪ ಸಂದರ್ಭದಲ್ಲಿ ಬಿಜೆಪಿ ಕಡೆಯಿಂದ ಸಮರ್ಥವಾಗಿ ಎದುರಿಸಿ ದವರು ಜೆ.ಸಿ.ಮಾಧುಸ್ವಾಮಿ. ಪ್ರತಿ ಹಂತ ದಲ್ಲೂ ಕ್ರಿಯಾಲೋಪ ಎತ್ತಿ ಆಡಳಿತಾ ರೂಢ ಪಕ್ಷದವರನ್ನು ಮಣಿಸುತ್ತಿ ದ್ದರು. ಒಮ್ಮೊಮ್ಮೆ ಸ್ಪೀಕರ್‌ ಅವರಿಗೂ ಕಾನೂನಾತ್ಮಕ ಆಂಶ ನೆನಪಿಸುತ್ತಿದ್ದರು.

ಡಿ.ಕೆ.ಶಿವಕುಮಾರ್‌: ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೂರ್‍ನಾಲ್ಕು ದಿನಗಳಿಂದ ಸದನದ ಹೊರಗೆ ಹಾಗೂ ಸದನದ ಒಳಗೆ ತಮ್ಮದೇ ಆದ ಕಾರ್ಯತಂತ್ರ ಹಣೆದು ಪ್ರತಿಪಕ್ಷ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿ ಆತಂಕಕ್ಕೂ ದೂಡಿದವರು ಡಿ.ಕೆ.ಶಿವಕುಮಾರ್‌. ಅತೃಪ್ತ ಶಾಸಕರ ಆನರ್ಹತೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ಹೊರತಾಗಿ ಯೂ ಸ್ಪೀಕರ್‌ ರೂಲಿಂಗ್‌ ಪ್ರಸ್ತಾಪಿಸಿ ಪದೇ ಪದೇ ಸದನಕ್ಕೆ ಬನ್ನಿ ಎಂದು ಮನವಿ ಮಾಡಿ ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೋರಾಟ ಮಾಡಿದವರು.

ಶಿವಲಿಂಗೇಗೌಡ: ಸಮ್ಮಿಶ್ರ ಸರ್ಕಾರದ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯಲ್ಲಿ ಅನೈತಿಕ ರಾಜಕಾರಣ, ಶಾಸಕರ ರೆಸಾರ್ಟ್‌ ಸಂಸ್ಕೃತಿ, ಶಾಸಕರ ಖರೀದಿ ಮತ್ತಿತರ ವಿಚಾರಗಳ ಬಗ್ಗೆ ಗ್ರಾಮೀಣ ಸೊಗಡಿನಲ್ಲೇ ಮಾತನಾಡಿ ಗಮನ ಸೆಳೆದವರು ಶಿವಲಿಂಗೇಗೌಡ. ಒಂದು ಹಂತದಲ್ಲಿ ಬಿಜೆಪಿಯವರಲ್ಲಿ ಆಕ್ರೋಶ ಹುಟ್ಟುವಂತೆ ಮಾತನಾಡಿ ರೊಚ್ಚಿ ಗೆಬ್ಬಿಸಿದ್ದು ಹೌದು. ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಶಿವಲಿಂಗೇಗೌಡರ ಭಾಷಣ ಪ್ರಸ್ತಾಪಿಸಿದರು.

Advertisement

ಎ.ಟಿ.ರಾಮಸ್ವಾಮಿ: ಅಧಿವೇಶನದಲ್ಲಿ ಶಾಸಕರ ಖರೀದಿ, ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಮಾತನಾಡಿ ಪ್ರಸಕ್ತ ರಾಜಕೀಯ ಕಲುಷಿತಗೊಂಡಿರುವ ಬಗ್ಗೆ ತೀರಾ ನೋವಿನಿಂದ ಮಾತನಾಡಿ ಗಮನ ಸಳೆದವರು ಎ.ಟಿ.ರಾಮಸ್ವಾಮಿ. ಒಂದು ಹಂತದಲ್ಲಿ ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಿದ ಬಗ್ಗೆಯೂ ಆಕ್ರೋಶ ಹೊರಹಾಕಿ ಗೃಹ ಇಲಾಖೆ ಯಾರು ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಮತ ಈ ಹಂತಕ್ಕೆ ಬರಲು ನಮ್ಮಿಂದಾಗಿರುವ ತಪ್ಪುಗಳು ಕಾರಣ ಎಂದೂ ನೇರವಾಗಿಯೇ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next