Advertisement

ಮನೆ ಬೇಸಿಗೆಯಲ್ಲೂ ತಂಪಾಗಿರಲಿ…

12:30 AM Mar 11, 2019 | Team Udayavani |

ನಮಗೆಲ್ಲ ತಿಳಿದಿರುವಂತೆ ಬೇಸಿಗೆ, ಚಳಿಗಾಲ ಉಂಟಾಗುವುದೇ ಸೂರ್ಯ ಕಿರಣಗಳು ನಾನಾ ಭೂಭಾಗವನ್ನು ವಿವಿಧ ಕೋನಗಳಲ್ಲಿ ತಾಗುವುದರಿಂದ. ಬೇಸಿಗೆಯಲ್ಲೂ ತಂಪಾಗಿರಬೇಕೆಂದರೆ ನಮ್ಮ ಮನೆಯನ್ನು ಬಿಸಿ ಕಿರಣಗಳು ಹೆಚ್ಚು ತಾಗದಂತೆ ನೋಡಿಕೊಳ್ಳಬೇಕಾಗುತ್ತದೆ.ಮನೆಯನ್ನು ತೀಕ್ಷ್ಣವಾದ ಸೂರ್ಯ ಕಿರಣಗಳಿಂದ ರಕ್ಷಿಸಿಕೊಂಡರೆ, ಬೇಸಿಗೆಯಲ್ಲೂ ಒಳಾಂಗಣ ತಂಪಾಗಿರುತ್ತದೆ. 

Advertisement

ಶಿವರಾತ್ರಿ ಮುಗಿಯುತ್ತಿದ್ದಂತೆ ಬಿಸಿಲಿನ ಬೇಗೆಗೆ “ಶಿವಶಿವ’ ಎನ್ನುವಂತೆ ಆಗುತ್ತದೆ.  ಈ ಬಾರಿ ಬಹುತೇಕ ಕಡೆ ಮುಂಗಾರು ಮಳೆ ಸರಿಯಾಗಿ ಆಗದ ಕಾರಣ, ವಾತಾವರಣದ ಬಿಸಿ ಮತ್ತೂ ಏರಿದೆ. ಚಳಿಗಾಲದಲ್ಲಿ ಕೆಳ ಕೋನದಲ್ಲಿ ಬೀಳುತ್ತಿದ್ದ ಸೂರ್ಯನ ಕಿರಣಗಳು ಉತ್ತರಾಯಣದ ಈ ಅವಧಿಯಲ್ಲಿ ಏರು ಕೋನ ಆಗಲು ತೊಡಗಿದ್ದು, ಏಪ್ರಿಲ್‌ ಹೊತ್ತಿಗೆ ನೇರವಾಗಿ ತಲೆಯ ಮೇಲೆ ಬೀಳಲು ಶುರುಮಾಡುವುದರಿಂದ, ನಮಗೆ ಬೇಸಿಗೆಯ ಪೂರ್ಣ ಅನುಭವ ಆಗಲು ತೊಡಗುತ್ತದೆ.  ವಿವಿಧ ಕಾಲಗಳ ಅನುಭವ ಆಗುವುದು ಸೂರ್ಯನ ಕಿರಣಗಳ ಕೋನಗಳ ಮೂಲಕವೇ . ಚಳಿಗಾಲದಲ್ಲಿ ಮೈಒಡ್ಡಿದ್ದರೂ ಬಿಸಿಯ ಅನುಭವ ನೀಡದ ಅದೇ ಕಿರಣಗಳು, ಈಗ ತಾಗಿದ ಕೆಲವೇ ಸಮಯದಲ್ಲಿ ಬಿಸಿಯೇರಿಸಿ ತಾಳಿಕೊಳ್ಳಲಾಗದಂತೆ ಮಾಡಿಬಿಡುತ್ತವೆ. ಹಾಗಾಗಿ, ನಮ್ಮ ಮನೆಯನ್ನು ತಂಪಾಗಿ ಇಟ್ಟುಕೊಳ್ಳಬೇಕೆಂದರೆ ಮುಖ್ಯವಾಗಿ ಪ್ರಖರವಾದ ಬೇಸಿಗೆಯ ಬಿಸಿ ಕಿರಣಗಳು ಹೆಚ್ಚು ತಾಗದಂತೆ ಹಾಗೂ ಮುಖ್ಯವಾಗಿ ಮನೆಯನ್ನು ಪ್ರವೇಶಿಸದಂತೆ ತಡೆಯೊಡ್ಡಬೇಕಾಗುತ್ತದೆ.

ಸೂರ್ಯ ಕಿರಣಗಳ ಕೋನಗಳ ಬಗ್ಗೆ
ನಮಗೆಲ್ಲ ತಿಳಿದಿರುವಂತೆ ಬೇಸಿಗೆ, ಚಳಿಗಾಲ ಉಂಟಾಗುವುದೇ ಸೂರ್ಯ ಕಿರಣಗಳು ನಾನಾ ಭೂಭಾಗವನ್ನು ವಿವಿಧ ಕೋನಗಳಲ್ಲಿ ತಾಗುವುದರಿಂದ. ಬೇಸಿಗೆಯಲ್ಲೂ ತಂಪಾಗಿರಬೇಕೆಂದರೆ ನಮ್ಮ ಮನೆಯನ್ನು ಬಿಸಿ ಕಿರಣಗಳು ಹೆಚ್ಚು ತಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ವಿವಿಧ ಋತುಮಾನಗಳಲ್ಲಿ ಬೀಳುವ ಸೂರ್ಯ ಕಿರಣಗಳ ಜಾnನ ಹೊಸದೇನಲ್ಲ, ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿಯ ದಿನ ಕಿರಣಗಳು ಲಿಂಗವನ್ನು ಸ್ಪರ್ಶಿಸುವಂತೆ ಮಾಡಿ ಶತಮಾನಗಳೇ ಕಳೆದಿದೆ. ಇದೇ ಜಾnನವನ್ನು ಬಳಸಿಕೊಂಡು ನಾವೂ ಕೂಡ ನಮ್ಮ ಮನೆಗಳನ್ನು ಚಳಿಗಾಲದಲ್ಲಿ ಬೆಚ್ಚಗಿರಿಸಿಕೊಳ್ಳುವಂತೆಯೇ, ಬೇಸಿಗೆಯಲ್ಲಿ ಬಿಸಿಯೇರದಂತೆಯೂ ನೋಡಿಕೊಳ್ಳಬಹುದು.  ಮನೆಯನ್ನು ತೀಕ್ಷ್ಣವಾದ ಸೂರ್ಯ ಕಿರಣಗಳಿಂದ ರಕ್ಷಿಸಿಕೊಂಡರೆ, ಬೇಸಿಗೆಯಲ್ಲೂ ಒಳಾಂಗಣ ತಂಪಾಗಿರುತ್ತದೆ! ಸೂರ್ಯ ಪ್ರತಿದಿನವೂ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುವ ಲೆಕ್ಕದಲ್ಲಿ ಸರಿ ಇದ್ದರೂ ಚಳಿಗಾಲದಲ್ಲಿ ದಕ್ಷಿಣಕ್ಕೆ ವಾಲಿದ್ದರೆ, ಬೇಸಿಗೆಯಲ್ಲಿ ಉತ್ತರಕ್ಕೆ ವಾಲಿರುತ್ತಾನೆ. ಈ ವಾಲುವಿಕೆಯೇ ಋತುಗಳ ಬದಲಾವಣೆಗೆ ಮುಖ್ಯ ಕಾರಣ.  ಆದುದರಿಂದ ನಾವು ವಿಶೇಷವಾಗಿ ಈ ಬದಲಾಗುವ ಕೋನಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು.

ಎಲ್ಲೆಲ್ಲಿ ಸೂರ್ಯಾಘಾತ
ಮನೆಗೆ ಅತಿ ಹೆಚ್ಚು ಸೂರ್ಯನ ಕಿರಣಗಳು ತಾಗುವ ಸ್ಥಳ ಸೂರೇ ಆಗಿರುತ್ತದೆ. ಸೂರು ಬಿಸಿಯೇರಿದರೆ ರಾತ್ರಿ ಇಡೀ ಶಾಖವನ್ನು ಕೆಳಗೆ ಹರಿಯಲು ಬಿಟ್ಟು ಮನೆಯೊಳಗೆ ಫ್ಯಾನ್‌ ಎಷ್ಟೇ ಜೋರಾಗಿ ತಿರುಗಿದರೂ ನಮಗೆ ತಂಪೆನಿಸುವುದಿಲ್ಲ. ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದ ಸೂರು ರಕ್ಷಣೆ ಪಡೆಯಲು  ಎಲ್ಲರ ಮನೆಯ ಮೇಲೆ ಸಾಮಾನ್ಯವಾಗೇ ಇರುವ ಸ್ಟೇರ್‌ ಕೇಸ್‌ ರೂಮ್‌ ಹಾಗೂ ನೀರಿನ ಟ್ಯಾಂಕ್‌ ಸ್ಥಳವನ್ನು ಸೂಕ್ತ ರೀತಿಯಲ್ಲಿ ಬಳಸಬಹುದು. ಬೇಸಿಗೆಯಲ್ಲಿ ಸುಮಾರು ಹನ್ನೆರಡು ತಾಸು ಸೂರ್ಯನ ಕಿರಣಗಳು ಬೀಳುತ್ತವೆ. ಇದರ ಹೊಡೆತವನ್ನು ಕಡೇ ಪಕ್ಷ ಆರುಗಂಟೆಗಳ ಕಾಲ ತಡೆದರೂ ನಮ್ಮ ಮನೆಯಲ್ಲಿ ತಾಪಮಾನ ಏರದಂತೆ ಮಾಡಬಹುದು. ಸೂರಿಗಿಂತ ಎತ್ತರದಲ್ಲಿರುವ ಈ ಸ್ಥಳಗಳು ಕಡೇಪಕ್ಷ ಹತ್ತು ಅಡಿ ಎತ್ತರ ಇರುತ್ತದೆ. ಇವು ಕೂಡ ನೆರಳು ಬೀಳಿಸುವ ಮೂಲಕ ಸೂರನ್ನು ತಂಪಾಗಿ ಇಡುತ್ತವೆ. ಇದರ ಜೊತೆಗೆ ಮಾಮೂಲಿಯಾಗಿ ಹಾಕುವ ಸುಮಾರು ಮೂರು ಅಡಿ ಪ್ಯಾರಾಪೆಟ್‌ -ಮೋಟು ಗೋಡೆಯ ಎತ್ತರವನ್ನು ಮತ್ತೂಂದಡಿ ಹೆಚ್ಚಿಸುವುದರಿಂದಲೂ ಸಾಕಷ್ಟು ಸೂರ್ಯ ಕಿರಣಗಳನ್ನು ತಡೆಯಬಹುದು. ಮೋಟು ಗೋಡೆಗಳ ಎತ್ತರ ಹೆಚ್ಚಿಸಲು ಇಟ್ಟಿಗೆ ಗೋಡೆಗಳನ್ನೇ ಕಟ್ಟಬೇಕು ಎಂದೇನಿಲ್ಲ.  ಒಂದಡಿ ಪಾಟ್‌ ಇಲ್ಲವೇ ಉದ್ದನೆಯ ಪ್ಲಾಂಟರ್‌ -ಹೂ ಕುಂಡಗಳನ್ನು ಅಲಂಕಾರಿಕವಾಗಿ ಜೋಡಿಸಿ, ಗಿಡ ನೆಟ್ಟು, ಸೂರಿಗೆ ಒಂದಷ್ಟು ನೆರಳನ್ನು ಒದಗಿಸಿದರೂ ನಮ್ಮ ಮನೆ ತಂಪಾಗಿರುತ್ತದೆ.

ಗೋಡೆಗಳ ರಕ್ಷಣೆ
ದಿನದ ನಾಲ್ಕು ಇಲ್ಲವೇ ಐದು ಗಂಟೆಗಳ ಕಾಲ ಮಾತ್ರ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಕಿರಣಗಳು ಬೀಳುವುದಾದರೂ ಇದೂ ಕೂಡ ಮನೆಯನ್ನು ಬಿಸಿಯೇರಿಸಲು ಕಾರಣ ಆಗಬಹುದು. ಆದುದರಿಂದ, ಒಂದಷ್ಟು ಸಜಾj ಹೊರಚಾಚುಗಳನ್ನು, ಪರ್ಗೊಲ ಮಾದರಿಯ ವಿನ್ಯಾಸಗಳನ್ನು ಮಾಡಿದರೆ, ಗೋಡೆಗಳ ಮೇಲೆ ಸೂರ್ಯನ ಕಿರಣಗಳ ನೇರ ಕೋನ ಪ್ರಹಾರ ಕಡಿಮೆ ಆಗಿ ಮನೆ ತಂಪಾಗಿರುತ್ತದೆ. ದಕ್ಷಿಣ ದಿಕ್ಕಿನ ಗೋಡೆಗಳ ಮೇಲೆ ಬೇಸಿಗೆಯಲ್ಲಿ ಪ್ರಖರವಾದ ಸೂರ್ಯ ಕಿರಣಗಳು ಬೀಳುವುದಿಲ್ಲ, ಹಾಗಾಗಿ, ನಾವು ಈ ದಿಕ್ಕಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ.  ಸೂರಿನ ಮಟ್ಟದಲ್ಲಿ ಆರು ಇಲ್ಲವೇ ಒಂಭತ್ತು ಇಂಚಿನ ಹೊರಚಾಚು – ಕಾನೀìಸ್‌ ಮಾದರಿಯಲ್ಲಿ ನೀಡಿದರೂ, ಇಡೀ ಗೋಡೆ ನೆರಳಿನಲ್ಲಿ ಉಳಿಯುತ್ತದೆ. ನಾವು ಉತ್ತರದ ಗೋಡೆಗೆ ಸೂಕ್ತ ರಕ್ಷಣೆ ನೀಡಬೇಕಾಗುತ್ತದೆ. ಈ ದಿಕ್ಕಿನಲ್ಲಿ ಸೂರ್ಯ ಕಿರಣಗಳು ಏರು ಕೋನಗಳಲ್ಲಿ ದಿನವಿಡೀ ಪ್ರಖರವಾಗಿ ಬೀಳುವುದರಿಂದ ಸಜಾj ಪೆರ್ಗೊಲ ಜೊತೆಗೆ ದಪ್ಪ ಗೋಡೆ  ಇಲ್ಲವೇ ಗಾಳಿ ಹಿಡಿದಿಡುವ ಟೊಳ್ಳು ಇಟ್ಟಿಗೆ ಗೋಡೆಗಳನ್ನು ಕಟ್ಟುವುದು ಉತ್ತಮ. ಮಾಮೂಲಿ ಇಟ್ಟಿಗೆಗಳನ್ನೇ ಬಳಸಿಯೂ “ರ್ಯಾಟ್‌ ಟ್ರಾಪ್‌’ ಮಾದರಿಯಲ್ಲಿ ಮಧ್ಯೆ ಗಾಳಿ ಬರುವಂತೆ ಮಾಡಬಹುದು. 

Advertisement

ಕಿಟಕಿ ಬಾಗಿಲಿಗೆ ಸೂಕ್ತ ರಕ್ಷಣೆ 
ಸೂರ್ಯನ ಕಿರಣಗಳಿಗೆ ಮನೆಯನ್ನು ಪ್ರವೇಶಿಸಿ ಶಾಖವೇರಿಸುವ ವಿಶೇಷ ಗುಣ ಇರುತ್ತದೆ. ಚಳಿಗಾಲದಲ್ಲಿ ಇದು ಸ್ವಾಗತಾರ್ಹವಾದರೂ ಬಿರುಬೇಸಿಗೆಯಲ್ಲಿ ಖಂಡಿತ ನಮಗೆ ಇದು ಬೇಡವಾಗಿರುತ್ತದೆ. ಕಿರಣಗಳ ಕೋನ ಆಧರಿಸಿ ನಾವು ಚಳಿಗಾಲದಲ್ಲಿ ಮನೆಯೊಳಗೆ ಸೂರ್ಯ ರಶ್ಮಿಯನ್ನು ಬಿಟ್ಟುಕೊಳ್ಳುವಂತೆಯೇ ಬೇಸಿಗೆಯ ಪ್ರಖರವಾದ ಕಿರಣ ಒಳ ಪ್ರವೇಶಿಸದಂತೆಯೂ ತಡೆಯಬಹುದು.

ಸೂರ್ಯ ಕಿರಣಗಳ ತೀಕ್ಷ್ಣತೆ ಕಡಿಮೆ ಇರುವ ಪ್ರದೇಶದಲ್ಲಿ ಹಿಮವೇ ಸುರಿಯಲು ತೊಡಗುತ್ತದೆ. ಹಾಗೆಯೇ, ನೇರಾತಿ ನೇರವಾಗಿ ಕಿರಣಗಳು ಬೀಳುವ ಪ್ರದೇಶದಲ್ಲಿ ಎಲ್ಲವೂ ಒಣಗಿ ಮರಭೂಮಿಮೇ ಆಗಿಬಿಡುತ್ತದೆ. ಹೀಗೆ ಹವಾಮಾನ ವೈಪರಿತ್ಯಕ್ಕೆ ಕಾರಣ ಆಗುವ ಸೂರ್ಯ ಕಿರಣಗಳಿಂದ ನಾವು ತಪ್ಪಿಸಿಕೊಳ್ಳಲು ಆಗದಿದ್ದರೂ ಉಪಾಯವಾಗಿ ಅದು ಬೀಳುವ ಕೋನವನ್ನು ಬದಲಾಯಿಸಿಕೊಂಡು, ಒಂದಷ್ಟು ನೆರಳು ಪಡೆದರೆ ನಮ್ಮ ಮನೆ ಬೇಸಿಗೆಯಲ್ಲೂ ತಂಪಾಗಿರುತ್ತದೆ!

ಬಿಸಿಗಾಳಿಯಿಂದ ಪಾರಾಗಲು..
ಕಿಟಕಿ ಬಾಗಿಲುಗಳಿಗೆ ಉತ್ತರದ ಸೂರ್ಯ ಕಿರಣಗಳು ಪ್ರವೇಶಿಸದಂತೆ ಸೂಕ್ತ ಫಿನ್‌ ಹಾಗೂ ಸಜಾjಗಳನ್ನು ವಿನ್ಯಾಸ ಮಾಡುವುದರ ಮೂಲಕ ನಾವು ಪರಿಣಾಮಕಾರಿಯಾಗಿ ಬೇಸಿಗೆಯ ಸೂರ್ಯಪ್ರಹಾರದಿಂದ ತಪ್ಪಿಸಿಕೊಳ್ಳಬಹುದು.  ಕೆಲವೊಮ್ಮೆ ಅಡ್ಜಸ್ಟಬಲ್‌,  ಅಂದರೆ ವಿವಿಧ ದಿಕ್ಕಿಗೆ ತಿರುಗಿಸಲಾಗುವ ಫಿನ್‌ಗಳನ್ನೂ ಕೂಡ ಮನೆಗೆ ಅಳವಡಿಸಬಹುದು. ಹಳೆ ಕಾಲದ ಬಂಗಲೆಗಳಲ್ಲಿ ಕಿಟಕಿಗಳಿಗೇ ಅಲ್ಲದೇ ಬಾಗಿಲುಗಳಿಗೂ ಋತುಗಳಿಗೆ ಹೊಂದಿಸಿಕೊಳ್ಳಲು ಮರದಲ್ಲೇ ಅಡ್ಡ ಪಟ್ಟಿಗಳನ್ನೂ ಫಿನ್‌ ಮಾದರಿಯ ಕೀಲಿ ಮೂಲಕ ಮುಚ್ಚಿಡುವ ಇಲ್ಲವೇ  ತೆರೆದಿಡಬಹುದಾದ ಲೂವರ್‌ ಗಳನ್ನು ಹಾಕಲಾಗುತ್ತಿತ್ತು. ನಾವು ಮತ್ತೆ ಅದೇ ಮಾದರಿಯ ವಿನ್ಯಾಸಕ್ಕೆ ಮೊರೆ ಹೋಗಿ, ನಮ್ಮ ಫ್ಯಾನ್‌ಗಳ ಬಿಸಿಗಾಳಿಯಿಂದ ತಪ್ಪಿಸಿಕೊಳ್ಳಬಹುದು.

– ಆರ್ಕಿಟೆಕ್ಟ್ ಕೆ ಜಯರಾಮ್‌

ಮಾಹಿತಿಗೆ-98441 32826

Advertisement

Udayavani is now on Telegram. Click here to join our channel and stay updated with the latest news.

Next