Advertisement

ಚುನಾವಣೆಗಾಗಿ ಮನೆ, ಹೊಲ ಅಡವಿಟ್ಟ ಕರಡಿ

11:21 PM Apr 21, 2019 | Lakshmi GovindaRaju |

ಕೊಪ್ಪಳ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಯವರು ಚುನಾವಣಾ ಸ್ಪರ್ಧೆಗೆ ತಮ್ಮ ಸ್ವಂತ ಆಸ್ತಿಯನ್ನು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಡವಿಟ್ಟ ವಿಷಯ ರಾಜಕೀಯದಲ್ಲಿ ಹೊಸ ಟ್ವಿಸ್ಟ್‌ ಪಡೆದಿದೆ.

Advertisement

ಸಂಗಣ್ಣ ಕರಡಿಯವರು ಹಾಲಿ ಸಂಸದರಾಗಿದ್ದು, 25 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. 6 ಚುನಾವಣೆಗಳನ್ನು ಎದುರಿಸಿದ್ದಾರೆ. ಆದರೆ, ಈ ಹಿಂದಿನ ಚುನಾವಣಾ ಸಂದರ್ಭದಲ್ಲಿ ಆಸ್ತಿ ಒತ್ತೆಯಿಟ್ಟು ಚುನಾವಣೆ ನಡೆಸಿದ್ದು ಮಾಧ್ಯಮದ ಬೆಳಕಿಗೆ ಬಂದಿರಲಿಲ್ಲ.

ಈ ಬಾರಿಯ ಲೋಕಸಮರದಲ್ಲಿ ತಮ್ಮ ಸ್ವಂತ ಆಸ್ತಿಗಳನ್ನು ಒತ್ತೆಯಿಟ್ಟು ಚುನಾವಣಾ ವೆಚ್ಚಕ್ಕೆ ಹಣ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ಹಲವು ಚರ್ಚೆಗೆ ಎಡೆಮಾಡಿ ಕೊಟ್ಟಿದೆ. ನಗರದಲ್ಲಿರುವ ಮನೆ, ತಾಲೂಕಿನ ವಿವಿಧ ಕಡೆ ಇರುವ ಜಮೀನನ್ನು ಅಡವಿಟ್ಟಿದ್ದು, ಹಣ ನೀಡಿದ ಬ್ಯಾಂಕ್‌, ಸಂಸ್ಥೆ ಹಾಗೂ ಖಾಸಗಿ ವ್ಯಕ್ತಿಗಳಿಗೆ ಆಸ್ತಿಗಳನ್ನು ಮಾರ್ಟ್‌ಗೇಜ್‌ ಮಾಡಿಸಿದ್ದಾರೆ ಎನ್ನಲಾಗಿದೆ.

ಕೇಂದ್ರದಲ್ಲಿ ಮೋದಿ ಅವರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವ ವಿಶ್ವಾಸದಿಂದಲೇ ಮತ್ತೂಮ್ಮೆ ಲೋಕಸಭೆಗೆ ಆಯ್ಕೆಯಾಗಲು ಕರಡಿ ನಾನಾ ಕಸರತ್ತು ನಡೆಸಿದ್ದು, ಆಸ್ತಿ ಅಡಮಾನ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next