Advertisement

ತಳವಾರ ದೊಡ್ಡ ವೆಂಕಟಪ್ಪ ಸರ್ಕಾರಿ ಶಾಲೆಗೆ ಸೌಕರ್ಯ ಮರೀಚಿಕ

03:06 PM Jun 12, 2018 | |

ಹೂವಿನಹಡಗಲಿ: ಪಟ್ಟಣದ ಹೃದಯ ಭಾಗದಲ್ಲಿರುವ ತಳವಾರ ದೊಡ್ಡ ವೆಂಕಟಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ವಾತಂತ್ರ್ಯ ಪೂರ್ವ ಇತಿಹಾಸವಿದೆ. ಆದರೆ, ಶಾಲೆ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಶಾಲೆ ಭವ್ಯವಾದ ಕಟ್ಟಡ ಹೊಂದಿದ್ದರೂ ಆ ಕಟ್ಟಡಕ್ಕೆ ತಕ್ಕಂತೆ ಅಗತ್ಯ ಸೌಕರ್ಯಗಳಿಲ್ಲ.

Advertisement

ತಳವಾರ ದೊಡ್ಡ ವೆಂಕಟಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 1ರಿಂದ 7ನೇ ತರಗತಿಯನ್ನು
ಹೊಂದಿದ್ದು, ಒಟ್ಟು 250 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಬಾಲಕ- ಬಾಲಕಿಯರು ಜೊತೆಗೂಡಿ ಆಭ್ಯಾಸ
ಮಾಡುತ್ತಿರುವ ಶಾಲೆಯಲ್ಲಿ ಮೂಲ ಸಮಸ್ಯೆಗಳು ಮಾತ್ರ ಸಾಕಷ್ಟಿವೆ. ಶಾಲಾ ವಿದ್ಯಾರ್ಥಿಗಳಿಗೆ ಒಟ್ಟು 13 ಕೊಠಡಿಗಳ ಆವಶ್ಯಕತೆಯಿದೆ. 13 ಕೊಠಡಿಗಳಿದ್ದರೂ ಅದರಲ್ಲಿ 3 ಕೊಠಡಿಗಳು ಮಾತ್ರ ಶಿಥಿಲಾವಸ್ಥೆಯಲ್ಲಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಮೂರು ಕೊಠಡಿಗಳಿಗೆ ಬೀಗ ಹಾಕಲಾಗಿದೆ. 6 ಹಾಗೂ 7ನೇ ತರಗತಿಯಲ್ಲಿ 60 ವಿದ್ಯಾರ್ಥಿಗಳಿದ್ದು, ಒಂದೇ ಕೊಠಡಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕೊಠಡಿಗಳ ಕೊರತೆ ಇರುವುದರಿಂದಾಗಿ ಮೇಲ್ಬಾಗದಲ್ಲಿ ತಗಡು ಹಾಕಿದ್ದರೂ ಮಳೆ ಬಂದರೆ ಸೋರುತ್ತದೆ. ಬೇಸಿಗೆಯಲ್ಲಿ ಬಿಸಿಲಿನ ಝಳ ಮಕ್ಕಳಿಗೆ ತೊಂದರೆಯಾಗುತ್ತದೆ.

ಕುಡಿಯುವ ನೀರು ಇಲ್ಲ: ಕುಡಿಯುವ ನೀರಿನ ಸಮಸ್ಯೆಯಿದ್ದು, ಪುರಸಭೆಯವರು ಶಾಲೆಗೆ ಒಂದು ನಳದ ಸಂಪರ್ಕ
ಕಲ್ಪಿಸಿದ್ದಾರೆ. ಆ ನಳದಿಂದಾಗಿ ವಾರಕ್ಕೆ ಒಮ್ಮೆ ನೀರು ಬರುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುತ್ತಿರುವುದರಿಂದ ಮಕ್ಕಳು ಊಟ ಮಾಡಿದ ಮೇಲೆ ಕೈ ತೊಳೆಯಲು, ನೀರನ್ನು ಕುಡಿಯಲು ತಟ್ಟೆ ತೊಳೆಯಲು ನೀರಿಗಾಗಿ ಹರಸಾಹಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ವಿದ್ಯಾರ್ಥಿಗಳು ಶಾಲೆಯ ಹೊರಗಡೆ ಇರುವ ಆಕ್ಕ-ಪಕ್ಕದ ಮನೆಗೆ ಹೋಗಿ ತಟ್ಟೆ ತೊಳೆದು ಕೈ ತೊಳೆದುಕೊಂಡು ಬರುವಂತಾಗುತ್ತದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಜಗದೀಶ್‌.

ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಶೌಚಾಲಯವಿದ್ದು, ನೀರಿನ ಸಮಸ್ಯೆ ಇರುವುದರಿಂದಾಗಿ ಆದನ್ನು ಬಳಕೆ
ಮಾಡದೇ ಬೀಗ ಹಾಕಲಾಗಿದೆ. ಕಳೆದ 2013-14 ರಲ್ಲಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಯೂನಿಟ್‌ ಮಂಜೂರಾಗಿದ್ದು, ಫಿಲ್ಟರ್‌ ತಂದು ಜೋಡಣೆ ಮಾಡಲಾಗಿತ್ತು. ಆದರೆ ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಅನುಕೂಲವಾಗಿಲ್ಲ. ಇನ್ನೂ ಶಾಲೆಯಲ್ಲಿನ ಸಮಸ್ಯೆ ಕುರಿತು ಶಾಸಕರಿಗೆ ಹಾಗೂ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ .

ಕಳೆದ ವರ್ಷ ತರಗತಿ ಕೊಠಡಿಗಾಗಿ ಕ್ರಿಯಾ ಯೋಜನೆ ಮಾಡಿದ್ದರ ಕುರಿತು ಮಾಹಿತಿಯಿಲ್ಲ. ಈ ಕುರಿತು ಪರಿಶೀಲನೆ ಮಾಡಿ ಕೊಠಡಿಗಳ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು.
 ಬಸವರಾಜ್‌ ಶಿವಪುರ, ಕ್ಷೇತ್ರ ಶಿಕ್ಷಣಾಧಿಕಾರಿ.

Advertisement

ಶಾಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದೆ. ಆದರೆ ಮಕ್ಕಳಿಗೆ ಪಾಠದ ಜೊತೆಯಲ್ಲಿ ಆಟವಾಡಲು ಸೂಕ್ತ ಮೈದಾನವಿಲ್ಲ. ಸೂಕ್ತ ನೀರಿನ ವ್ಯವಸ್ಥೆ ಮಾಡಿಲ್ಲ, ಕೊಠಡಿಗಳ ಅವಶ್ಯಕತೆಯಿದ್ದು, ಅಧಿಕಾರಿಗಳು ಗಮನಹರಿಸಬೇಕು.
 ಎಂ. ಕೋಟೆಪ್ಪ, ಗ್ರಾಮಸ

ವಿಶ್ವನಾಥ ಹಳ್ಳಿಗುಡಿ

Advertisement

Udayavani is now on Telegram. Click here to join our channel and stay updated with the latest news.

Next