Advertisement
ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗಂತೂ ಇದು ಕನಸಿನ ಮಾತೇ ಸರಿ. ಇದಕ್ಕೆಲ್ಲ ಪರಿಹಾರವಾಗಿ ನಗರಗಳಲ್ಲಿ ಈಗ ಹೊಸ ಟ್ರೆಂಡ್ ಶುರುವಾಗಿದೆ. ಟೆರ್ರಾರಿಯಮ್ ಗಾರ್ಡನ್ ತಯಾರಿಸಿ ಮನೆಯಲ್ಲಿ ಇಡುವುದರಿಂದ ಮನೆಯ ಅಂದ ಹೆಚ್ಚುವುದರ ಜತೆಗೆ ಮನೆಯಲ್ಲೊಂದು ಪ್ರಶಾಂತವಾದ ವಾತಾವಾರಣ ನೆಲೆಸುತ್ತದೆ.
ಮನೆಯಲ್ಲಿ ಉಪಯೋಗ ಶೂನ್ಯವಾದ ಪ್ಲಾಸ್ಟಿಕ್ ಅಥವಾ ಗಾಜಿನ ಬಾಟಲ್ಗಳಲ್ಲಿ ಕಲ್ಲು, ಮಣ್ಣು ತುಂಬಿಸಿ ಅದರಲ್ಲಿ ಸಣ್ಣ ಗಿಡ ಅಥವಾ ಹುಲ್ಲುಗಳನ್ನು ನೆಟ್ಟು ಬೆಳೆಸುವುದನ್ನು ಟೆರ್ರಾರಿಯಂ ಗಾರ್ಡನ್ ಎನ್ನುತ್ತಾರೆ. ಬಾಟಲಿಗಳಿಗೆ ಮುಚ್ಚಳವಿರುವುದು ಅಗತ್ಯವಾಗಿರುತ್ತದೆ. ಇದರಿಂದ ಆಕರ್ಷಣೆ ಹೆಚ್ಚಾಗುತ್ತದೆ. ಬಾಟಲಿಗಳಲ್ಲಿ ನೆಡಲು ಅಕ್ವೇರಿಯಂಗಳಲ್ಲಿ ಬಳಸುವಂತಹ ಗಿಡಗಳನ್ನು ಬಳಸಬೇಕು. ಇವುಗಳು ಹೆಚ್ಚು ಬೆಳವಣಿಗೆ ಹೊಂದುವುದಿಲ್ಲವಾದುದರಿಂದ ಹೆಚ್ಚು ಸೂಕ್ತವಾಗುತ್ತದೆ. ಹೀಗೆ ತಯಾರಿಸಿದ ಹೂಕುಂಡಗಳನ್ನು ಸೂರ್ಯನ ಬೆಳಕು ಹೆಚ್ಚು ಬೀಳುವ ಜಾಗದಲ್ಲಿಡಬೇಕು. ಇದು ಗಿಡದ ಬೆಳವಣಿಗೆಗೆ ಸಹಕರಿಸುತ್ತದೆ.
Related Articles
Advertisement
ತಯಾರಿಸುವ ವಿಧಾನಮನೆಯಲ್ಲಿ ಉಪಯೋಗ ಶೂನ್ಯವಾದ ಗಾಜು ಅಥವಾ ಪ್ಲಾಸ್ಟಿಕ್ ಬಾಟಲ್ನ ಒಳಗೆ ಮೊದಲು ಸ್ವಲ್ಪ ಅಲಂಕಾರಯುತವಾದ ಕಲ್ಲುಗಳನ್ನು ಹಾಕಬೇಕು. ಅದರ ಮೇಲೆ ಗಾರ್ಡನ್ ಮಣ್ಣು ಅಥವಾ ಫೈಬರ್ ಹಸ್ಕ್ನ್ನು ಹಾಕಬೇಕು. ಇದು ಗಿಡಗಳ ಬೆಳವಣಿಗೆಗೆ ತುಂಬಾ ಮುಖ್ಯವಾಗಿದೆ. ಅನಂತರ ಹೆಚ್ಚು ಬೆಳೆಯದ ಗಿಡ ಅಥವಾ ಗಾರ್ಡನ್ ಹುಲ್ಲುಗಳನ್ನು ತಂದು ಇದರಲ್ಲಿ ನೆಡಬೇಕು. ಪ್ರತಿದಿನ ನೀರು ಹಾಕಬೇಕು. ಅಲ್ಲಿಗೆ ಟೆರ್ರಾರಿಯಂ ಗಾರ್ಡನ್ ಸಿದ್ಧವಾಗುತ್ತದೆ. ಬಾಟಲಿಗಳ ಆಕಾರಕ್ಕೆ ತಕ್ಕಂತೆ ಅವುಗಳನ್ನು ಮನೆಯ ಕೆಲವು ಸ್ಥಳಗಳಲ್ಲಿ ಜೋಡಿಸಬಹುದು. ಅಗಲವಾದ ಸಣ್ಣ ಗಾಜಿನ ಜಾರಲ್ಲಿ ಗಿಡವಿದ್ದರೆ ಅದನ್ನು ಟೀಪಾಯ್‌ನಲ್ಲಿದ್ದರೆ ಮನೆಯ ಅಂದ ಹೆಚ್ಚುತ್ತದೆ. ಉದ್ದವಾದ ಬಾಟಲಿಗಳಾಗಿದ್ದರೆ ಬಾಲ್ಕನಿಯಲ್ಲಿ ಜೋಡಿಸಬಹುದು.
- ಸುಶ್ಮಿತಾ ಶೆಟ್ಟಿ. ಸಿರಿಬಾಗಿಲು