Advertisement

ವರ್ಷದ ಸರ್ವಶ್ರೇಷ್ಠ ವಿದ್ಯಾರ್ಥಿ ಪುರಸ್ಕಾರ

08:09 PM Mar 23, 2018 | |

ಕುಮಟಾ: ಇಲ್ಲಿನ ಕೆನರಾ ಕಾಲೇಜು ಸೊಸೈಟಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಏಳು ವಿದ್ಯಾರ್ಥಿಗಳನ್ನು ಗುರುತಿಸಿ ವರ್ಷದ
ಸರ್ವಶ್ರೇಷ್ಠ ವಿದ್ಯಾರ್ಥಿ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ಪ್ರದಾನ ಸಮಾರಂಭ ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನ ಆವರಣದಲ್ಲಿ ನಡೆಯಿತು.

Advertisement

ಪಿಯು ವಿಜ್ಞಾನ ವಿಭಾಗದಿಂದ ರಾಮದಾಸ ಕಮಲಾಕಾಂತ ಕಾಮತ, ಪಿಯು ವಿಭಾಗದಿಂದ ಸಿದ್ಧಾರ್ಥ ಅರುಣ ಕುಮಟಾಕರ, 
ಡಿಪ್ಲೋಮಾದಿಂದ ಸಂದೇಶ ಕೃಷ್ಣ ಶೆಟ್ಟಿ, ಬಿಬಿಎದಿಂದ ಗುರುಪ್ರಸಾದ ಮಹಾಬಲೇಶ್ವರ ಹೆಗಡೆ, ವಾಣಿಜ್ಯ ಪದವಿ ವಿಭಾಗದಿಂದ ಭಾಸ್ಕರ ಈಶ್ವರ ಮರಾಠಿ, ವಿಜ್ಞಾನ ಪದವಿ ವಿಭಾಗದಿಂದ ಅಪೂರ್ವ ಗೋಪಾಲ ಹೆಗಡೆ ಹಾಗೂ ಬಿಎಡ್‌ನಿಂದ ಮಾಝಿ°ಯಾ ಮಹಮ್ಮದ ಗೌಸ್‌ ಬೇಗ್‌ ವರ್ಷದ ಸರ್ವಶ್ರೇಷ್ಠ ವಿದ್ಯಾರ್ಥಿ ಪುರಸ್ಕಾರಕ್ಕೆ ಪಾತ್ರರಾದರು.

ಭಟ್ಕಳದ ಗುರುಸುಧೀಂದ್ರ ಕಾಲೇಜಿನ ಪ್ರಾಚಾರ್ಯ ನಾಗೇಶ ಭಟ್ಟ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿ ದೆಸೆಯಲ್ಲಿನ ನಿಮ್ಮ 
ಧ್ಯೇಯಗಳೇ ಮುಂದೆ ನಿಮ್ಮ ಬದುಕಿನ ಅಕ್ಷಾಂಶ ರೇಖಾಂಶಗಳನ್ನು ನಿರ್ಧರಿಸುತ್ತವೆ. ಆತ್ಮವಿಶ್ವಾಸದಿಂದ ಗುರಿಯೆಡೆಗೆ ಸಾಗಿದರೆ
ಸಫಲತೆ ಕಟ್ಟಿಟ್ಟ ಬುತ್ತಿ ಎಂದರು.

ವಿಪ್ರೋ, ಗೂಗಲ್‌, ಮೈಕ್ರೋಸಾಫ್ಟ, ಇನ್ಫೋಸಿಸ್‌ನಂತಹ ಅತ್ಯುತ್ತಮ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ನೀಡುವ
ಸಾಮರ್ಥ್ಯ ಹಾಗೂ ಅರ್ಹತೆ ಇಲ್ಲಿನ ಶಿಕ್ಷಣ ಸಂಸ್ಥೆಗಳಿಗಿರುವುದು ಉತ್ತರ ಕನ್ನಡ ಜಿಲ್ಲೆಯ ಸಾಧನೆ. ಬಾಳಿಗಾ ಕಾಲೇಜಿನಿಂದ
ಪಳಗಿ ಸಾವಿರಾರು ಮಂದಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಸಮಾಜ ಮತ್ತು ಬದುಕಿನಲ್ಲಿ ಪರಿಣಾಮಕಾರಿ ಬದಲಾವಣೆ ತರುವುದೇ
ಶಿಕ್ಷಣದ ಉದ್ದೇಶವಾಗಿದ್ದು ಕೇವಲ ಉದ್ಯೋಗ ಮಾಡುವಂಥ ಉತ್ಪನ್ನವಾಗಬಾರದು. ವಿದ್ಯಾರ್ಥಿಗಳಲ್ಲೇ ಶಿಕ್ಷಕರ ಅಸ್ತಿತ್ವ ಇರುತ್ತದೆ.
ವಿದ್ಯಾರ್ಥಿಗಳ ಸಫಲತೆಯಲ್ಲಿ ಶಿಕ್ಷಕರ ಧನ್ಯತೆ ಇದೆ ಎಂದರು.

ಕೆನರಾ ಕಾಲೇಜು ಸೊಸೈಟಿ ಅಧ್ಯಕ್ಷ ರಘು ಪಿಕಳೆ ಅಧ್ಯಕ್ಷತೆ ವಹಿಸಿ, ಕೆನರಾ ಕಾಲೇಜು ಸೊಸೈಟಿ ಆರಂಭಿಸಿ ಜಿಲ್ಲೆಯ ಶಿಕ್ಷಣ ಕ್ರಾಂತಿಗೆ
ಕಾರಣರಾದ ಡಾ| ಎ.ವಿ.ಬಾಳಿಗಾರವರ ಜೀವನ ವಿಶೇಷಗಳನ್ನು ವಿವರಿಸಿದರು. ಸೊಸೈಟಿ ಕಾರ್ಯಾಧ್ಯಕ್ಷ ಮುರಲೀಧರ
ಪ್ರಭು, ಉಪಾಧ್ಯಕ್ಷ ರತ್ನಾಕರ ಕಾಮತ, ಪ್ರಾಚಾರ್ಯ ಎಸ್‌.ಜಿ. ರಾಯ್ಕರ, ಎನ್‌.ಜಿ. ಹೆಗಡೆ, ಯು.ಜಿ. ಶಾಸ್ತ್ರಿ, ಜಯರಾಮ ಭಟ್ಟ,
ರತನ್‌ ಗಾಂವಕರ, ವೀಣಾ ಕಾಮತ ಮತ್ತಿತರರು ಇದ್ದರು.

Advertisement

ಕಾರ್ಯದರ್ಶಿ ಎಲ್‌.ವಿ. ಶಾನಭಾಗ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ವಿನೋದ ಪ್ರಭು ವಂದಿಸಿದರು. ಪ್ರೊ| ಜಿ.ಡಿ.ಭಟ್ಟ, ಪ್ರೀತಿ ಭಂಡಾರಕರ ನಿರೂಪಿಸಿದರು. ಡಾ| ಜಿ.ಎಲ್‌. ಹೆಗಡೆ, ಡಿ.ಡಿ.ಭಟ್ಟ, ಎಂ.ಕೆ. ಶಾನಭಾಗ ಮತ್ತಿತರರು ಪುರಸ್ಕೃತ
ವಿದ್ಯಾರ್ಥಿಗಳನ್ನು ಬಣ್ಣಿಸಿದರು.  ಪ್ರಮುಖರಾದ ಜೀವನ ಕವರಿ, ಸುಧಾಕರ ನಾಯಕ, ಪುರುಷೋತ್ತಮ ಹೆಗಡೆಕರ, ಅಶೋಕ
ಪಿಕಳೆ, ಡಾ| ಸಿ.ಎಸ್‌. ವೆರ್ಣೇಕರ, ಸಿರೀಸ್‌ ನಾಯ್ಕ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next