Advertisement
ಕಾರ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1,83,528 ಮತದಾರರ ಪೈಕಿ 1,43,962 ಮಂದಿ ಮತ ಚಲಾಯಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಶೇ.79.80ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.78.44 ಮತದಾನವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಪ್ರಮಾಣ ಎಂಬಂತೆ ಶೇ.80.19ರಷ್ಟು ಮತದಾನವಾಗಿತ್ತು.
ಸೆ„ಂಟ್ ಜೋಸೆಫ್ ಅನುದಾನಿತ ಹಿ.ಪ್ರಾ. ಶಾಲೆ ಬೆಳ್ಮಣ್ (ಪೂರ್ವ) ಶೇ.89.02, ಸರಕಾರಿ ಕಿ.ಪ್ರಾ.ಶಾಲೆ ದುರ್ಗಾ ಗ್ರಾಮ ಮಲೆಬೆಟ್ಟು ಶೇ.88.78, ಜನಾರ್ದನ ಅನುದಾನಿತ ಹಿ.ಪ್ರಾ.ಶಾಲೆ ದೇವಸ್ಥಾನಬೆಟ್ಟು ಶೇ.87.0. ಕನಿಷ್ಠ ಮತದಾನವಾದ 3 ಮತಗಟ್ಟೆಗಳು
ಸರಕಾರಿ ಕಿ.ಪ್ರಾ.ಶಾಲೆ ಸೂಡ (ಪೂರ್ವ) ಶೇ.69.33, ಸರಕಾರಿ ಜೂ. ಕಾಲೇಜು ಕಾರ್ಕಳ (ಉತ್ತರ) ಶೇ.67.08, ಸರಕಾರಿ ಹಿ.ಪ್ರಾ.ಶಾಲೆ ಸೀತಾನದಿ ನಾಡಾ³ಲು ಶೇ.67.
Related Articles
ನಾಡಾ³ಲು ನಕ್ಸಲೆ„ಟ್ ಪ್ರದೇಶವೆಂಬ ಹಿನ್ನೆಲೆಯಲ್ಲಿ ಅತಿಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲ್ಪಟ್ಟಿತ್ತು. ಮತಗಟ್ಟೆ ಮುಖ್ಯರಸ್ತೆಗೆ ಹೊಂದಿಕೊಂಡಂತಿದ್ದರೂ ಮತದಾರರು ಹಲವು ಕಿ.ಮೀ. ದೂರದಿಂದ ಆಗಮಿಸಬೇಕಿತ್ತು. ಹೀಗಾಗಿ ಕೆಲವರು ಬಿಸಿಲಿನ ಬೇಗೆಗೆ ಆಗಮಿಸಲಿಲ್ಲ. ಇನ್ನು, ಗ್ರಾಮದಲ್ಲಿ ಸೂಕ್ತ ಅಭಿವೃದ್ಧಿಯಾಗಿಲ್ಲ ಎಂಬ ಕಾರಣಕ್ಕೆ ಮೇಗದ್ದೆ ಕೂಡ್ಲು ಅಜೊjಳ್ಳಿ ಗ್ರಾಮಸ್ಥರು ಚುನಾವಣ ಬಹಿಷ್ಕಾರದ ಧ್ವನಿಮೊಳಗಿಸಿದ್ದು ಆ ಭಾಗದಿಂದಲೂ ಮತದಾರರು ಕಡಿಮೆಯಾಗಿದ್ದಾರೆ ಎನ್ನಲಾಗಿದೆ.
Advertisement