Advertisement
ಪಟ್ಟಣದ ಶತಮಾನೋತ್ಸವ ಭವನದಲ್ಲಿ ನಡೆದ ಜಿಲ್ಲಾ ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿದ ಅವರು ಮಾತನಾಡಿ, ಮಹಿಳೆ ಸಂಸಾರದ ಜತೆಗೆ ಇಡೀ ದೇಶವನ್ನೇ ಮುನ್ನಡೆಸ ಬಲ್ಲಳು ಎಂಬುದಕ್ಕೆ ಉದಾಹರಣೆಗಳಿವೆ. ಮಹಿಳೆ ಸಾಧನೆ ಮಾಡಬೇಕೆಂದರೆ ಆಕೆಯ ಹಿಂದೆ ಪ್ರೋತ್ಸಾಹ ನೀಡುವ ಹಲವು ಅವಕಾಶ ಗಳಿವೆ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು ಎಂದು ಹೇಳಿದರು.
Related Articles
Advertisement
ದೇಶ ಅಭಿವೃದ್ಧಿಗೆ ಮುಂದಾಗಿ: ಹೋರಾಟಗಾರ್ತಿ ಅನುಸೂಯಮ್ಮ ಮಾತನಾಡಿ, ಯುವಕರು ಸ್ವಾರ್ಥ ಮನೋಭಾವವನ್ನು ಬದಿಗೊತ್ತಿ ದೇಶದ ಅಭಿವೃದ್ಧಿಗೆ ಮುಂದಾಗಬೇಕು. ಭಯ ಇರುವ ತನಕ ದೇಶದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಮಹಿಳೆಯರು ಎಲ್ಲವನ್ನೂ ಎದುರಿಸಿ ಸಮಾಜದ ಸುಸ್ಥಿತಿಗೆ ದುಡಿಯುವ ಜತೆಗೆ ಅಭಿವೃದ್ಧಿಯಾಗಬೇಕು ಎಂದರು.
ಕಾರ್ಯಕ್ರಮ ಉತ್ತಮ ಬೆಳವಣಿಗೆ: ಜಿಪಂ ಸದಸ್ಯೆ ಸುಗುಣ ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಿಳಾ ಸಾಂಸ್ಕೃತಿಕ ಉತ್ಸವದ ಮೂಲಕ ಜಿಲ್ಲೆಯಲ್ಲಿ ಸಾಧನೆ ಮಾಡಿರುವ ಮಹಿಳೆಯರು, ಕಲಾವಿದರನ್ನು ಒಂದೆಡೆ ಸೇರಿಸಿ ಹಬ್ಬದಂತೆ ಕಾರ್ಯಕ್ರಮ ರೂಪಿಸಿ ರುವುದು ಉತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕೊಲ್ಲಾಪುರದ ಮಹಾಲಕ್ಷ್ಮೀ ದೇವಾಲಯದ ಆವರಣದಿಂದ ಜಾನಪದ ಕಲಾ ತಂಡಗಳಿಗೆ ಚಾಲನೆ ನೀಡಲಾಯಿತು. ಅಂಚೆ ಕಚೇರಿ ರಸ್ತೆಯ ಮೂಲಕ ಶತಮಾನೋತ್ಸವ ಭವನದವರೆಗೆ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವು ಕಲಾ ತಂಡಗಳು ಪ್ರದರ್ಶನ ನೀಡಿದವು, ವಿಚಾರ ಗೋಷ್ಠಿ, ಕವಿಗೋಷ್ಠಿಗಳು ನಡೆಯಿತು. ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಮಾಗಡಿ ಕಸಾಪ ಅಧ್ಯಕ್ಷೆ ಕಲ್ಪನಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆ.ಟಿ.ಲಕ್ಷ್ಮಮ್ಮ, ಟೆಕ್ಕೀಸ್ ಟೀಂ ಅಧ್ಯಕ್ಷೆ ನವ್ಯಶ್ರೀ ಆರ್., ಟಿಎಪಿಸಿಎಂಎಸ್ ಅಧ್ಯಕ್ಷೆ ವನಜ, ಸುಮಂಗಲ, ಕವಿತಾ ರಾವ್, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಕಾವೇರಮ್ಮ, ಮುಖಂಡರಾದ ಜಯಮ್ಮ, ಪಾರ್ವತಮ್ಮ, ಸಾವಿತ್ರಿ ರಾವ್, ರಾಧಿಕಾ ರವಿಕುಮಾರಗೌಡ, ರೇಖಾ ಉಮಾಶಂಕರ್, ಗೀತಾ ವೆಂಕಟೇಶ್, ಶಾರದಾ ನಾಗೇಶ್, ವಿಮಲಾ ಯೋಗ ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.