Advertisement

ಏಕಾಂಗಿ ಮಿಗ್‌ ಹಾರಿಸಿದ ವಾಯುಪಡೆ ಮುಖ್ಯಸ್ಥ

03:45 AM Jan 13, 2017 | Team Udayavani |

ನವದೆಹಲಿ: ರಾಜಸ್ಥಾನದ ವಾಯುಪಡೆಗೆ ಗುರುವಾರ ಭೇಟಿ ನೀಡಿದ್ದ ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋವ್‌ ಏಕಾಂಗಿಯಾಗಿ “ಮಿಗ್‌-21′ ಯುದ್ಧ ವಿಮಾನವನ್ನು ಚಾಲನೆ ಮಾಡಿದ್ದಾರೆ. ಇದೊಂದು ಅಪರೂಪದಲ್ಲೇ ಅಪರೂಪ ಎನ್ನುವಂತಹ ಘಟನೆಯಾಗಿದ್ದು, ವಾಯುಪಡೆಯ ಮುಖ್ಯಸ್ಥರೊಬ್ಬರು ಏಕಾಂಗಿಯಾಗಿ ಯುದ್ಧ ವಿಮಾನ ಚಾಲನೆ ಮಾಡಿದ ಘಟನೆ ಇದಾಗಿದೆ. ಧನೋವ್‌ ಅವರು ವಾಯುಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ರೀತಿ ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿದ್ದಾರೆ. ಧನೋವ್‌ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಇದೇ ಮಾದರಿಯ ಯುದ್ಧವಿಮಾನಗಳ ಹಾರಾಟವನ್ನು ನಡೆಸಿದ್ದರು. ಅನೇಕಸಲ ರಾತ್ರಿ ವೇಳೆ ನಡೆಯುತ್ತಿದ್ದ ಕಾರ್ಯಾಚರಣೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇವರ ಸಾಧನೆ ಮೆಚ್ಚಿ ಯೋಧ ಸೇವಾ ಪದಕವನ್ನು ಸಹ ನೀಡಲಾಗಿತ್ತು. “ಮಿಗ್‌-21′ ಭಾರತೀಯ ವಾಯುಪಡೆ ಬಳಿ ಇರುವ ಅತ್ಯಂತ ಹಳೆಯ ಯುದ್ಧವಿಮಾನವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next