Advertisement

ಕೊಳವೆಬಾವಿ ದುರಂತ ತಡೆಗೆ ಕಠಿಣ ಕಾನೂನು

12:23 PM Apr 24, 2017 | Harsha Rao |

ಬೆಂಗಳೂರು: ಕೊಳವೆ ಬಾವಿಗಳ ಕೊರೆದು ನೀರು ಬಾರದಿದ್ದರೆ, ಅವುಗಳನ್ನು ಸರಿಯಾಗಿ ಮುಚ್ಚದಿದ್ದರೆ, ಸಂಬಂಧ ಪಟ್ಟ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನು ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ. ಬೆಳಗಾವಿಯ ಝುಂಜರವಾಡ ಗ್ರಾಮದಲ್ಲಿ ಬಾಲಕಿ ಕಾವೇರಿ ಕೊಳವೆ
ಬಾವಿಗೆ ಬಿದ್ದ ಪ್ರಕರಣದ ಕುರಿತು ಬೆಂಗಳೂರಿಲ್ಲಿ ಪ್ರತಿಕ್ರಿಯಿಸಿದ ಅವರು, ಕಾವೇರಿಯನ್ನು ಬಾವಿಯಿಂದ ಮೇಲೆತ್ತಲು
ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ನಿರಂತರ ಕಾರ್ಯಾಚರಣೆ ನಡೆಸಲಾಗಿದ್ದು, ಹೈದರಾಬಾದ್‌ನಿಂದಲೂ ನುರಿತ ತಜ್ಞರನ್ನು ಕರೆಸಲಾಗಿದೆ.

Advertisement

ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳುವ ಪ್ರಕರಣ ಹೆಚ್ಚಾಗುತ್ತಿವೆ. ಸರ್ಕಾರ ಕೊರೆದ ಬೋರ್‌ವೆಲ್‌ ಗಳಲ್ಲಿ ಮಕ್ಕಳು ಬಿದ್ದರೆ, ಅದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಬಹುದು. ಆದರೆ, ಖಾಸಗಿಯವರು ತಮ್ಮ ಜಮೀನಿನಲ್ಲಿ ಬೋರ್‌ ವೆಲ್‌ ಕೊರೆದು, ನೀರು ಬಾರದಿದ್ದಾಗ ಮಾಲೀಕರು ಪಂಚಾಯತಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಮಾಹಿತಿ ಕೊಟ್ಟ ನಂತರ ಅಧಿಕಾರಿಗಳು ಕೊಳವೆ ಬಾವಿ ಮುಚ್ಚದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಕೊರೆದ ಕೊಳವೆ ಬಾವಿ ಮುಚ್ಚಬೇಕು ಎಂದು ಈ ಹಿಂದೆಯೇ ಸರ್ಕಾರ ಸುತ್ತೋಲೆ ಹೊರಡಿಸಿದೆ. ಬೆಳಗಾವಿಯ ಕಾವೇರಿ ಪ್ರಕರಣದಲ್ಲಿ ಮಾಲೀಕನೇ ಹೊಣೆಗಾರನಾಗುತ್ತಾನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next