Advertisement

ಕನಸು ನನಸಾಗಲು ಕಠಿಣ ಪರಿಶ್ರಮ ಮುಖ್ಯ

10:05 AM Sep 08, 2018 | Team Udayavani |

ಕಲಬುರಗಿ: ಕನಸುಗಳು ನನಸಾಗಲು ಕಠಿಣ ಪರಿಶ್ರಮ ಹಾಗೂ ಆತ್ಮ ವಿಶ್ವಾಸ ಮುಖ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಹೇಳಿದರು.

Advertisement

ನಗರದ ಶೆಟ್ಟಿ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನಲ್ಲಿ ವಿಟಿಯು ಅಂತರ್‌ ಕಾಲೇಜು ಪುರುಷ ಮತ್ತು ಮಹಿಳೆಯರ
ಟೇಬಲ್‌ ಟೆನ್ನಿಸ್‌ ಪಂದ್ಯಾವಳಿಯ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ ಯಶಸ್ಸು ಸಾಧಿಸಲು ಧೃಡ ನಿರ್ಧಾರ ಮುಖ್ಯವಾಗುತ್ತದೆ ಎಂದರು.

ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿಯಾಗಲೂ ಇಲ್ಲವೇ ಅಂತಾರಾಷ್ಟ್ರೀಯ ಕ್ರೀಡಾಪಟು ಆಗಲು ಆತ್ಮವಿಶ್ವಾಸವೇ ಮುಖ್ಯ ಸಾಧನವಾಗಿದೆ. ಆದ್ದರಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ| ಅಶೋಕ ವಣಗೇರಿ, ಕ್ರೀಡಾಪಟುಗಳಲ್ಲಿ ಇರಬೇಕಾದ ಕ್ರೀಡಾ ಮನೋಭಾವ ಮತ್ತು
ಕ್ರೀಡೆಯ ಮಹತ್ವ ವಿವರಿಸಿ, ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಅನೇಕ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
 
ಎಸ್‌ಐಟಿ ಚೇರ್‌ಮನ್‌ ಉದಯಶಂಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಂಶುಪಾಲ ಡಾ| ರವಿ ಸೋಂತ್‌, ತಾಂತ್ರಿಕ ಸಲಹೆಗಾರ ಪ್ರೊ| ಪುರುಷೋತ್ತಮ ಐನಾಪುರ, ಶೆಟ್ಟಿ ಪಾಲಿಟೆಕ್ನಿಕ್‌ ಪ್ರಾಂಶುಪಾಲ ಶಿವಶಂಕರ ಮಂಗಲಗಿ ಭಾಗವಹಿಸಿದ್ದರು.

ಪ್ರೊ| ಸೌಮ್ಯಾ ಪಾಟೀಲ ನಿರೂಪಿಸಿದರು, ಪ್ರೊ| ನೇಹಾ ಪಾಟೀಲ ಪರಿಚಯಿಸಿದರು, ಪ್ರೊ| ಅನಿಲಕುಮಾರ, ಪ್ರೊ| ಅರುಣ ಕುಮಾರ, ಪ್ರೊ| ವೈಭವ್‌ ಮತ್ತು ದೈಹಿಕ ಶಿಕ್ಷಕ ಶ್ರೀದತ್ತನ ಮಂತಗಿ ಪಂದ್ಯಾವಳಿಯನ್ನು ನಡೆಸಿಕೊಟ್ಟರು.

Advertisement

ವಿಜಯಪುರ, ಬಳ್ಳಾರಿ ಪ್ರಥಮ: ಅಂತರ್‌ ಕಾಲೇಜು ಟೆನ್ನಿಸ್‌ ಪಂದ್ಯಾವಳಿಯಲ್ಲಿ ಬೀದರ್‌ನಿಂದ ಬಾಗಲಕೋಟೆವರೆಗಿನ
ತಾಂತ್ರಿಕ ವಿದ್ಯಾಲಯಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪುರುಷ ವಿಭಾಗದಲ್ಲಿ ವಿಜಯಪುರ ತಂಡ, ಮಹಿಳೆಯರ
ವಿಭಾಗದಲ್ಲಿ ಬಳ್ಳಾರಿ ತಂಡ ಪ್ರಥಮ ಸ್ಥಾನ ಪಡೆದು ಟ್ರೋಫಿ ಗೆದ್ದುಕೊಂಡವು.

ಪುರುಷರ ವಿಭಾಗದಲ್ಲಿ ವಿಜಯಪುರದ ಬಿಎಲ್‌ಡಿ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ, ಕಲಬುರಗಿಯ
ಪಿಡಿಎ ಕಾಲೇಜು ವಿದ್ಯಾರ್ಥಿಗಳು ದೀತಿಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಬಳ್ಳಾರಿಯ ಬಿಐಟಿಎಂ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಇದೇ ಜಿಲ್ಲೆಯ ಆರ್‌ವೈಎಂಇಸಿ ಕಾಲೇಜಿನ ವಿದ್ಯಾರ್ಥಿಗಳು ದ್ವೀತಿಯ ಸ್ಥಾನ ಪಡೆದರು. ವಿಜೇತ ತಂಡಗಳಿಗೆ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ| ಉಮೇಶ ಎಸ್‌.ಆರ್‌. ಟ್ರೋಫಿ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next