Advertisement

ಹಂಗಾರಕಟ್ಟೆ ಬಂದರಿಗೆ ಬೇಕಿದೆ ಅಭಿವೃದ್ಧಿಯ ಸ್ಪರ್ಶ

09:56 AM Sep 14, 2019 | sudhir |

ಕೋಟ: ಬ್ರಹ್ಮಾವರ ತಾಲೂಕು ಹಂಗಾರಕಟ್ಟೆ ಬಂದರಿಗೆ ಶತಮಾನಗಳ ಇತಿಹಾಸ ವಿದೆ. ವಿಜಯನಗರ ಅರಸರ ಕಾಲದಲ್ಲಿ ವಿದೇಶಗಳ ವ್ಯಾಪಾರ ಚಟುವಟಿಕೆಗಾಗಿ ಈ ಬಂದರು ಕರಾವಳಿ ಯಲ್ಲೆ ಪ್ರಸಿದ್ಧಿ ಪಡೆದಿತ್ತು. ಆದರೆ ಆಧುನಿಕತೆ ಬೆಳೆದಂತೆ ಇದು ತನ್ನ ಮಹತ್ವವನ್ನು ಕಳೆದುಕೊಂಡು ಕಿರು ಬಂದರಾಗಿ ಪರಿವರ್ತನೆಯಾಯಿತು. ಪ್ರಸ್ತುತ ಇಲ್ಲಿ ಹಲವಾರು ಸಮಸ್ಯೆಗಳಿದ್ದು ಮೀನುಗಾರಿಕೆ ಚಟುವಟಿಕೆ ಕುಂಠಿತಗೊಂಡಿದೆ. ಹೀಗಾಗಿ ಇದನ್ನು ಅಭಿವೃದ್ಧಿಪಡಿಬೇಕೆಂಬ ಕೂಗು ಕೇಳಿ ಬರುತ್ತಿದೆ.

Advertisement

ಪ್ರಮುಖ ಸಮಸ್ಯೆಗಳೇನು?

ಇಲ್ಲಿನ ಅಳಿವೆ ಹೂಳಿನಿಂದ ಹಾಗೂ ಅಳಿವೆಗೆ ತಡೆಗೋಡೆ (ಬ್ರೇಕ್‌ ವಾಟರ್‌) ಇಲ್ಲದಿರುವು ದರಿಂದ ಬೋಟ್ ಸಂಚರಿಸುವುದಕ್ಕೆ ಅಸಾಧ್ಯ ವಾಗುತ್ತಿದೆ. ಇದರಿಂದಾಗಿ ಈ ಬಾರಿ ಆಗಸ್ಟ್‌ನಲ್ಲಿ ಆರಂಭವಾಗಬೇಕಾದ ಮೀನುಗಾರಿಕೆ ಇನ್ನೂ ಆರಂಭವಾಗಿಲ್ಲ.

ಲಂಗರು ಹಾಕಿದ ಬೋಟ್‌ಗಳಲ್ಲಿ ಶೇ. 70ರಷ್ಟು ಜೆಟ್ಟಿಯಲ್ಲೇ ಬಾಕಿ ಉಳಿದಿವೆೆ. ಜೆಟ್ಟಿ ಸಾಕಷ್ಟು ಕಿರಿದಾಗಿದ್ದು ಹೆಚ್ಚಿನ ಬೋಟ್ ನಿಲುಗಡೆಗೆ ಅವಕಾಶವಿಲ್ಲ.

ಪ್ರಮುಖ ಬೇಡಿಕೆಗಳು

Advertisement

ಈ ಹಿಂದೆ ಇಲ್ಲಿನ ಅಳಿವೆಗೆ ತಡೆಗೋಡೆ ನಿರ್ಮಿಸುವ ಸಲುವಾಗಿ ಸುಮಾರು 110 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ಕಾರ್ಯಗೊಂಡಿರಲಿಲ್ಲ. ಆದ್ದರಿಂದ ಈ ಕಾಮ ಗಾರಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕು. ಪ್ರಸ್ತುತ ಕೇವಲ 90 ಮೀಟರ್‌ ಜೆಟ್ಟಿ ಇದ್ದು ಇದನ್ನು 500ರಿಂದ 600ಮೀಟರ್‌ಗೆ ವಿಸ್ತರಿಸಬೇಕು. ಮೀನು ಹರಾಜು ಕೇಂದ್ರಕ್ಕೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನವ ಬೇಡಿಕೆ ಮೀನುಗಾರರದ್ದು.

ಈ ಬಾರಿ ವ್ಯಾಪಕ ಕಡಲ್ಕೊರೆತ

ಅಳಿವೆಯಲ್ಲಿ ಹೂಳು ಹಾಗೂ ತಡೆಗೋಡೆ ಇಲ್ಲದಿರುವುದರಿಂದ ಈ ಬಾರಿ ಮಳೆಗಾಲದಲ್ಲಿ ಅಳಿವೆಯ ಮೂಲಕ ಆಳೆತ್ತರದ ಅಲೆಗಳು ತೀರ ಪ್ರದೇಶಕ್ಕೆ ಅಪ್ಪಳಿಸಿ ತೀರಪ್ರದೇಶಕ್ಕೆ ವ್ಯಾಪಕ ಹಾನಿಯಾಗಿದೆ ಮತ್ತು ಇಲ್ಲಿನ ನಿವಾಸಿಗಳು ಆತಂಕದಿಂದ ಕಾಲ ಕಳೆಯುವಂತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next