Advertisement

ಮೊಬೈಲ್‌ನಿಂದ ಪುಸ್ತಕ ಓದುವ ಹವ್ಯಾಸ ಕ್ಷೀಣ

02:45 PM Nov 22, 2022 | Team Udayavani |

ದೊಡ್ಡಬಳ್ಳಾಪುರ: ಹೆಚ್ಚಾದ ಮೊಬೈಲ್‌ ಬಳಕೆಯಿಂದ ವಿಶೇಷವಾಗಿ ಯುವ ಜನರು, ಸಾಹಿತ್ಯದ ಅಭಿರುಚಿ, ಪುಸ್ತಕಗಳ ಓದಿನಿಂದ ದೂರ ಸರಿಯುತ್ತಿದ್ದಾರೆ. ವಿದ್ಯಾರ್ಥಿಗಳು ತಮಗೆ ಬೇಕಾದ ಭಾಷೆ ಕಲಿಯಬಹುದಾಗಿದ್ದು, ಕನ್ನಡದ ಬಳಕೆಗೆ ಆದ್ಯತೆ ನೀಡಬೇಕಿದೆ ಎಂದು ದೇವರಾಜ ಅರಸು ವಿದ್ಯಾಸಂಸ್ಥೆ ಉಪಾಧ್ಯಕ್ಷ ಜೆ. ರಾಜೇಂದ್ರ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ಸಹಯೋಗದಲ್ಲಿ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ನಡೆದ ಸಾಹಿತ್ಯ, ವಿಜ್ಞಾನ ಸಂಸ್ಕೃತಿ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಕೇವಲ ಕೊರಳ ಭಾಷೆಯಾಗಿರದೆ, ಕರುಳ ಭಾಷೆ ಆಗಬೇಕಿದೆ. ನಗರಿಕರಣದ ಪ್ರಭಾವದಿಂದ ಕನ್ನಡ ಭಾಷೆ ಬಳಕೆ ಕಡಿಮೆಯಾಗುತ್ತಿದೆ. ಸಮೃದ್ಧ, ಸಂಪತ½ರಿತವಾದ ಕನ್ನಡ ಭಾಷೆ ಎನ್ನುವುದಕ್ಕೆ 2 ಸಾವಿರದಿಂದ 2 ಸಾವಿರದ ಐನೂರು ವರ್ಷ ಇತಿಹಾಸ, ನಮ್ಮ ಜ್ಞಾನಪೀಠ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ, ಕನ್ನಡಕ್ಕೆ ಲಭಿಸಿರುವ ಶಾಸ್ತ್ರೀಯ ಸ್ಥಾನಮಾನಗಳೇ ಸಾಕ್ಷಿ ಎಂದರು.

ಹೋರಾಟಗಾರರಿಗೆ ಸ್ಫೂರ್ತಿ: ಕನ್ನಡ ಪಕ್ಷದ ಮುಖಂಡ ಸಂಜೀವ್‌ ನಾಯಕ್‌ ಮಾತನಾಡಿ, ದೊಡ್ಡಬಳ್ಳಾಪುರದ ಕನ್ನಡ ಪಕ್ಷಕ್ಕೆ, ಕನ್ನಡಕ್ಕೆ ಕನ್ನಡಪರ ಹೋರಾಟಗಾರರಿಗೆ, ರೈತಪರ ಹೋರಾಟಗಾರರಿಗೆ ಮಾ.ರಾಮಮೂರ್ತಿ, ಡಾ.ಎನ್‌.ವೆಂಕಟರೆಡ್ಡಿ ಸ್ಫೂರ್ತಿಯ ಸೆಲೆಯಾಗಿದ್ದಾರೆ. 1905ರಿಂದ ಆರಂಭವಾದ ಕನ್ನಡದ, ಕನ್ನಡ ಕುರಿತಾದ ಚಳವಳಿಗಳು ಹಂತ-ಹಂತವಾಗಿ ಕವಲೊಡೆಯುತ್ತಿವೆ ಎಂದು ಹೇಳಿದರು.

ದೇಶಿ ಮಾರುಕಟ್ಟೆ ವ್ಯವಹಾರ ಕುಸಿತ: ರಾಜ್ಯ ರೈತ ಸಂಘ ಜಿಲ್ಲಾ ಅಧ್ಯಕ್ಷ ನಾಗಸಂದ್ರ ಪ್ರಸನ್ನ ಮಾತನಾಡಿ, ಹಿಂದಿನ ಕೃಷಿ ಪದ್ಧತಿಗೂ ಈಗಿನ ಆಧುನಿಕ ಕೃಷಿ ಪದ್ಧತಿಗೂ ತುಂಬಾ ವ್ಯತ್ಯಾಸವಿದೆ. ಇಂದು ಕಸಿ ಸಂಸ್ಕೃತಿಯಿಂದ ಮತ್ತು ಆಧುನಿಕ ಯಂತ್ರಗಳ ಬಳಕೆ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಇಳುವರಿ ಹೆಚ್ಚು ಬರುತ್ತಿದೆ. ಪಾಶ್ಚಾತ್ಯ ದೇಶಗಳ ಹಾವಳಿಯಿಂದ ದೇಶಿ ಮಾರುಕಟ್ಟೆಯ ವ್ಯವಹಾರ ಕುಸಿಯುತ್ತಿವೆ ಎಂದು ತಿಳಿಸಿದರು.

ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಿ.ಎಂ. ಸುರೇಂದ್ರ ರೆಡ್ಡಿ, ಡಾ.ಎಂ.ಚಿಕ್ಕಣ್ಣ, ಕನ್ನಡ ಜಾಗೃತ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಿ.ಪಿ ಆಂಜನೇಯ, ಉಪಪ್ರಾಂಶುಪಾಲ ಕೆ.ದಕ್ಷಿಣ ಮೂರ್ತಿ, ನ್ಯಾಕ್‌ ಸಂಯೋಜಕ ಆರ್‌. ಉಮೇಶ್‌, ನಿರ್ವಹಣಾ ವಿಭಾಗದ ಮುಖ್ಯಸ್ಥ ಸಿ.ಪಿ.ಪ್ರಕಾಶ್‌, ಪ್ರಾಧ್ಯಾಪಕರಾದ ಪಿ.ಚೈತ್ರಾ, ದಿವ್ಯಾ, ಪರಿಸರ ವಾದಿ ಕೆ.ಗುರುದೇವ್‌, ಶಬ್ಬೀರ್‌, ಲಕ್ಷ್ಮೀಶ, ವ್ಯವಸ್ಥಾಪಕ ಶ್ರೀನಿವಾಸ್‌ ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next