Advertisement

ರಿಸೆಪ್ಶನ್‌ನಲ್ಲಿ ನಿದ್ದೆಗೆ ಜಾರಿದ ವರ

12:05 AM Jul 16, 2021 | Team Udayavani |

ಮದುವೆ ಎಂದರೆ ಜೀವನದ ಸಂಭ್ರಮದ ಕ್ಷಣಗಳು. ಅಂಥ ಸಂದರ್ಭದಲ್ಲಿ ತೂಕಡಿಸಿದರೆ ಹೇಗೆ? ಅಂಥದ್ದೊಂದು ಘಟನೆಯ ವೀಡಿಯೋ ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಲಾಗಿರುವ ವೀಡಿಯೋ ನೋಡಿ ನೆಟ್ಟಿಗರು ನಗುತ್ತಿದ್ದಾರೆ. ಮದುವೆ ಕಳೆದು ಔತಣ ಕೂಟ ನಡೆಯುತ್ತಿತ್ತು. ವೇದಿಕೆಯಲ್ಲಿ ವಧು ಮತ್ತು ವರ ಕೂತಿದ್ದರು. ವಧು ಆರಾಮವಾಗಿ ಕುಳಿತಿದ್ದರೆ, ವರ ಮಾತ್ರ ನಿದ್ರೆಗೆ ಜಾರಿದ್ದಾನೆ. ಯಾರೋ ಒಬ್ಬರು ಆತನನ್ನು  ಎಬ್ಬಿಸಲು ಪ್ರಯತ್ನ ಮಾಡಿದ್ದಾರೆ. ಮತ್ತೂಬ್ಬರು ಕೈಗಳನ್ನು ತಟ್ಟಿ, ಎಳೆದು ಎಚ್ಚರಿಸಲು ಮುಂದಾಗಿದ್ದರೂ ಎದ್ದೇಳಲಿಲ್ಲ. ಈ ವೀಡಿಯೋಕ್ಕೆ ಯಾರೋ ಹಾಡುಗಳನ್ನು ಸೇರಿಸಿ ಅಪ್‌ಲೋಡ್‌ ಮಾಡಿದ್ದಾರೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next