Advertisement
ದಿ ಗ್ರೆನೇಡಿಯರ್ ರೆಜಿಮೆಂಟ್ ಇತಿಹಾಸವನ್ನು ನೋಡ ಹೋದರೆ ಕಾಮನ್‌ವೆಲ್ತ್‌ನಲ್ಲಿನ ಸೈನ್ಯದ ಅತ್ಯಂತ ಹಳೆಯ ಗ್ರೆನೇಡಿಯರ್ ರೆಜಿಮೆಂಟ್ ಭಾರತೀಯ ಸೈನ್ಯಕ್ಕೆ ಸೇರಿದೆ. ನಮ್ಮ ಭಾರತೀಯ ಸೈನ್ಯದಲ್ಲಿ ಅತ್ಯಂತ ಹಳೆಯ, ನುರಿತ ಹಾಗೂ ತನ್ನ ಅಸ್ತಿತ್ವವನ್ನು ನಶಿಸಿಹೋಗದಂತೆ ಕಾರ್ಯ ನಿರ್ವಹಿಸಿಕೊಂಡು ಇಂದಿಗೂ ಇತಿಹಾಸದ ಪುಟಗಳಲ್ಲಿ ತನ್ನ ಇರುವಿಕೆಯನ್ನು ದಿ ಗ್ರೆನೇಡಿಯರ್ ರೆಜಿಮೆಂಟ್ ದೇಶ ಸೇವೆಗೆ ಆಧಾರವಾಗಿ ಉನ್ನತ ಮಟ್ಟದಲ್ಲಿ ನಿಂತಿದೆ.
Related Articles
Advertisement
ಅನಂತರದ ದಿನಗಳಲ್ಲಿ ಬಾಂಬೆ ಸೈನ್ಯವು ಹಲವಾರು ಸಿಪಾಯಿ ಬೆಟಾಲಿಯನ್‌ಗಳನ್ನು ಒಳಗೊಂಡು, ಪ್ರತಿಯೊಂದು ಒಂದು ಅಥವಾ ಎರಡು ಗ್ರೆನೇಡಿಯರ್ ಕಂಪೆನಿಗಳಾಗಿ ರಚನೆಯಾಯಿತು. ಇವುಗಳನ್ನು ಬಾಂಬೆ ಸಿಪಾಯಿಯ ಬೆಟಾಲಿಯನ್‌ಗಳ ಗ್ರೆನೇಡಿಯರ್ ಕಂಪೆನಿಗಳನ್ನು ಒಳಗೊಂಡ ಸಂಯೋಜಿತ ಬೆಟಾಲಿಯನ್‌ನ ಆಗಿ ಕೊಡಿಸಲಾಯಿತು. 1778ರಲ್ಲಿ ಪ್ರಸಿದ್ಧ ಐತಿಹಾಸಿಕ ಯುದ್ಧಗಳ ಸಾಲಿನಲ್ಲಿ ನಿಲ್ಲುವ ತಲೇಗಾಂವ್ ಯುದ್ಧದಲ್ಲಿ ವಿಜಯ ಪತಾಕೆಯನ್ನು ಹಾರಿಸಿತ್ತು. ಈ ಸಂಯೋಜಿತ ಬೆಟಾಲಿಯನ್ನ ಕಾರ್ಯಕ್ಷಮತೆ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಬಾಂಬೆ ಪ್ರಸಿಡೆನ್ಸಿ ಗ್ರೆನೇಡಿಯರ್ ಬೆಟಾಲಿಯನ್ ಅನ್ನು ಶಾಶ್ವತವಾಗಿ ವರ್ಧಿಸಲು ಆದೇಶಿಸಿತು. ಮಾರ್ಚ್ 12, 1779 ರಂದು ಮೊದಲ ಬಾರಿಗೆ ಮೂವತ್ತಾರು ವರ್ಷಗಳ ಹಿಂದಿನ ಬ್ರಿಟಿಷ್ ಬೆಟಾಲಿಯನ್ ಗೆ “ಗ್ರೆನೇಡಿಯರ್” ಎಂದು ಕರೆಯುವ ಗೌರವವನ್ನು ನೀಡಲಾಯಿತು.
ಬಾಂಬೆಯ ಗವರ್ನರ್‌ಜನರಲ್ ನವೆಂಬರ್ 12, 1779ರಲ್ಲಿ ಈ ಆದೇಶವನ್ನು ಹೊರಡಿಸಿದರು. ಅದರ ಪ್ರಕಾರ ಐದು ರೆಜಿಮೆಂಟ್‌ಗಳ ಗ್ರೆನೇಡಿಯರ್ ಕಂಪೆನಿಗಳು ಸೇರಿ ವಿಶ್ವದ ಮೊಟ್ಟ ಮೊದಲ ಗ್ರೆನೇಡಿಯರ್ ರೆಜಿಮೆಂಟ್ ಅನ್ನು ರೂಪಿಸಿದವು. ಭಾರತದ ಅತ್ಯುನ್ನತ ಪದಕವಾದ ಪರಮವೀರ ಚಕ್ರಗಳನ್ನು ಪಡೆದಿರುವ ಗ್ರೆನೇಡಿಯರ್‌ರೆಜಿಮೆಂಟ್‌ಗೆ ವಿಶೇಷ ಗೌರವವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಗ್ರೆನೇಡಿಯರ್ಸ್‌ನೊಂದಿಗೆ ಸೇವೆಸಲ್ಲಿಸಿದ ಬ್ರಿಟಿಷ್ ಅಧಿಕಾರಿಗಳು ನಾಲ್ಕು ವಿಕ್ಟೋರಿಯಾ ಕ್ರಾಸ್‌ಗಳನ್ನು ಗೆದ್ದು ಸಾಧನೆ ಮಾಡಿದ್ದು ವಿಶೇಷ. ಪ್ರತೀ ಗಾರ್ಡ್ ನ ರೆಜಿಮೆಂಟ್‌ನ ಸಾರ್ವಭೌಮ ಕಂಪೆನಿಯಲ್ಲಿ ಮೊದಲ ಬಾರಿಗೆ ಮಹಿಳೆಯರಿಗೂ ಸೇವೆ ಸಲ್ಲಿಸಲು ಅವಕಾಶವಿರುತ್ತದೆ. ಉನ್ನತ ಘಟಕವು ಸಾಮಾನ್ಯವಾಗಿ ಬೆಟಾಲಿಯನ್‌ನ ಬಲಿಷ್ಠ ಹಾಗೂ ಎತ್ತರದ ಯೋಧರನ್ನು ಒಳಗೊಂಡಿರುತ್ತದೆ. ಅಂತಹ ಯೋಧರು ಸರಾಸರಿ 6 ಫೀಟ್, 2 ಇಂಚ್ ಇರುತ್ತಾರೆ.
ದಿ ಗ್ರೆನೇಡಿಯರ್ ರೆಜಿಮೆಂಟ್ ಮೊದಲನೆಯ ಮಹಾಯುದ್ಧದ ಮುನ್ನವೇ 17 ಪ್ರಮುಖ ಯುದ್ಧ ಗೌರವಗಳನ್ನು ಗಳಿಸಿತ್ತು. ಮೊದಲ ಮತ್ತು 2ನೇ ಮಹಾಯುದ್ಧದಲ್ಲಿ ರೆಜಿಮೆಂಟ್ ಸುಮಾರು 22 ಗೌರವಗಳನ್ನು ಜಯಸಿತು. 2015ರಲ್ಲಿ 2ನೇ ಮಹಾಯುದ್ಧವನ್ನು ಕೊನೆಗೊಳಿಸಿದ ಯುರೋಪಿನಲ್ಲಿ ವಿಜಯದ 20ನೇ ವರ್ಷಾಚರಣೆಯ ನೆನಪಿಗೆ ನಡೆದ ಮಾಸ್ಕೋ ವಿಜಯ ದಿನದಂದು ದಿ ಗ್ರೆನೇಡಿಯರ್ ರೆಜಿಮೆಂಟ್‌ನ ಗ್ರೇನೆಡಿಯರ್ಸ್‌ಗಳು ನಮ್ಮ ಭಾರತವನ್ನು ಪ್ರತಿನಿಧಿಸಿದ್ದರು.
ಸಹನಾ
ತುಮಕೂರು ವಿಶ್ವವಿದ್ಯಾನಿಲಯ