Advertisement
ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಸರಕಾರ ಈ ಬಾರಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡುತ್ತದೆಯೋ? ಇಲ್ಲವೋ? ಎಂದು ಈ ಹಿಂದೆ ಪಟಾಕಿ ಮಾರಾಟಗಾರರು ಆತಂಕದಲ್ಲಿದ್ದರು. ಆದರೆ ಸುಪ್ರೀಂ ಕೋರ್ಟ್ ಮಾಲಿನ್ಯ ಮತ್ತು ಶಬ್ಧದ ಪ್ರಮಾಣ ಕಡಿಮೆಯಿರುವ ಹಸುರು ಪಟಾಕಿಗಳನ್ನು ಸಿಡಿಸಲು ತನ್ನ ಆಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದ ಬಳಿಕ ರಾಜ್ಯ ಸರಕಾರ ಕೆಲವು ನಿರ್ಬಂಧಗಳ ಜತೆಗೆ ಹಸುರು ಪಟಾಕಿಗಳ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದಾಗಿ ಮಾರಾಟಗಾರ ರಲ್ಲಿ ಇದ್ದ ದುಗುಡ ಮಾಯವಾಗಿದ್ದು ಹಸುರು ಪಟಾಕಿಗಳ ಮಾರಾಟಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಈಗಾಗಲೇ ಪಟಾಕಿ ಮಾರಾಟದ ಅಂಗಡಿಗಳು ತಲೆಎತ್ತಿದ್ದು ದೀಪಗಳ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆ ತುಂಬಿವೆ.
Related Articles
ಈ ಹಿಂದೆ ದೀಪಾವಳಿಗೆ 2-3 ವಾರಗಳಿರು ವಾಗಲೇ ಪಟಾಕಿಗಳಿಗೆ ಆರ್ಡರ್ ಬರುತ್ತಿತ್ತು. ಆದರೆ ಈ ಬಾರಿ ಆ ರೀತಿಯ ವಾತಾವಾರಣವಿಲ್ಲ. ಹಸುರು ಪಟಾಕಿ ಎಂದೋ ಗೊತ್ತಿಲ್ಲ ಜನರು ಆರ್ಡರ್ ಮಾಡುತ್ತಿಲ್ಲ. ಈ ಹಿಂದೆ ಗ್ರಾಹಕರು 500 ರಿಂದ 5,000 ರೂ. ಮುಖ ಬೆಲೆಯ ಪಟಾಕಿಗಳನ್ನು ಖರೀದಿ ಮಾಡುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿಯಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
Advertisement
ಹಬ್ಬದ ಸಂಭ್ರಮ ಈಗಷ್ಟೇ ಆರಂಭಗೊಂಡಿದೆ. ಹಸುರು ಪಟಾಕಿಯನ್ನು ಗ್ರಾಹಕರು ಖರೀದಿ ಸುತ್ತಾರೆ ಎಂಬ ನಿರೀಕ್ಷೆ ಇದೆ ಎಂಬ ವಿಶ್ವಾಸ ವ್ಯಾಪಾರಿಗಳದ್ದಾಗಿದೆ.
ಇದನ್ನೂ ಓದಿ:ದ್ವೀಪರಾಷ್ಟ್ರಗಳಿಗೆ ಮೋದಿ ಗಿಫ್ಟ್ : ಪ್ರಾಕೃತಿಕ ವಿಕೋಪ ತಡೆಯಲು ಇಸ್ರೋದಿಂದ ವಿಶೇಷ ವ್ಯವಸ್ಥೆ
ಹಸುರು ಪಟಾಕಿ ಎಂದರೇನು?ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಿ ಹೊಗೆ ಮತ್ತು ಮಾಲಿನ್ಯಕಾರಕ ಕಣಗಳನ್ನು ಹೊರಹಾಕುವ ಪಟಾಕಿಗಳನ್ನು ಹಸುರು ಪಟಾಕಿಗಳು ಎಂದು ಹೇಳಲಾಗುತ್ತದೆ. ಈ ಪಟಾಕಿಗಳು ಕಡಿಮೆ ಬೆಳಕು ಮತ್ತು ಶಬ್ಧ ಹೊರಸೂಸುವ ಜತೆಯಲ್ಲಿ ಸಿಡಿತದ ಬಳಿಕ ಕಡಿಮೆ ಪ್ರಮಾಣದ ನೈಟ್ರೋಜನ್ ಆಕ್ಸೆ„ಡ್, ಸಲ#ರ್ ಡೈ ಆಕ್ಸೆ„ಡ್ ಹೊರಚೆಲ್ಲುತ್ತವೆ. ಇದರಿಂದಾಗಿ ವಾಯು ಮತ್ತು ಶಬ್ಧ ಮಾಲಿನ್ಯದ ಪ್ರಮಾಣ ಕಡಿಮೆಯಾಗುತ್ತದೆ. ಕೌನ್ಸಿಲ್ ಫಾರ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರೀಸ್ ರಿಸರ್ಚ್ (ಸಿಎಸ್‌ಐಆರ್) ಅಭಿವೃದ್ದಿಪಡಿಸಿದ ಹಸುರು ಪಟಾಕಿಗಳು ಮಾಲಿನ್ಯಕಾರಕಗಳನ್ನು ತಮ್ಮ ಸಾಂಪ್ರದಾಯಿಕ ಪ್ರತಿರೂಪಗಳಿಗಿಂತ ಶೇ.30ರಷ್ಟು ಕಡಿಮೆ ಪ್ರಮಾಣದಲ್ಲಿ ಹೊರ ಸೂಸುತ್ತವೆ. ಹಾಗೆಯೇ ಈ ಪಟಾಕಿಗಳನ್ನು ಕಡಿಮೆ ಅಪಾಯಕಾರಿ ಮತ್ತು ಹೆಚ್ಚು ಹಾನಿಕಾರಕವಲ್ಲದ ರಾಸಾಯನಿಕಗಳಿಂದ ತಯಾರು ಮಾಡಲಾಗಿ ರುತ್ತದೆ. ಈ ಹಸುರು ಪಟಾಕಿಗಳ ಪತ್ತೆ ಗಾಗಿಯೇ ಹಸುರು ಲೋಗೊ ಮತ್ತು ಕ್ಯು ಆರ್ ಕೋಡಿಂಗ್ ಅನ್ನು ಪಟಾಕಿ ಪ್ಯಾಕೆಟ್‌ಗಳ ಮೇಲೆ ಹಾಕಲಾಗಿರುತ್ತದೆ. ಸಾಮಾನ್ಯ ಪಟಾಕಿಗಳಲ್ಲಿ ನೈಟ್ರೇಟ್ ಮತ್ತು ಬೇರಿಯಂಗಳು ಕಂಡುಬರುತ್ತವೆ. ಈ ರಾಸಾಯನಿಕಗಳು ಹಸುರು ಪಟಾಕಿಗಳಲ್ಲಿ ಇರುವುದಿಲ್ಲ. ಹಾಗೆಯೇ ಹಸುರು ಪಟಾಕಿಗಳು ಸಿಡಿದಾಗಲೂ ಆವಿ ಮತ್ತು ಹೊಗೆ ಹೊರಹಾಕುವ ಪ್ರಮಾಣ ಕಡಿಮೆ. ಈ ಪಟಾಕಿಗಳಲ್ಲಿ ಸುರಕ್ಷಿತ ಅಲ್ಯೂಮಿನಿಯಂ ಮತ್ತು ಥರ್ಮೈಟ್ ಇರುತ್ತದೆ. ಜತೆಗೆ ಸಾಮಾನ್ಯ ಪಟಾಕಿಗಳು ಸಿಡಿದಾಗ ಸುಮಾರು 160 ಡೆಸಿಬಲ್ ಪ್ರಮಾಣದ ಧ್ವನಿ ಹೊರಸೂಸಿದರೆ ಹಸುರು ಪಟಾಕಿಗಳು ಹೊರಸೂಸುವ ಧ್ವನಿಯ ಪ್ರಮಾಣ 110ರಿಂದ 120 ಡೆಸಿಬಲ್‌ಗಳಿಗೆ ಸೀಮಿತವಾಗಿರುತ್ತದೆ. ಪರಿಸರ ಎಂಜಿನಿಯರಿಂಗ್ ಸಂಶೋಧನ ಸಂಸ್ಥೆ (ನೀರಿ)ಯು ಹಸುರು ಪಟಾಕಿಗಳೆಂದರೇನು? ಮತ್ತು ಇದರಿಂದ ಪ್ರಯೋಜನಗಳೇನು? ಎಂಬುದನ್ನು ಹಸುರು ಪಟಾಕಿಗಳ ಕುರಿತಾಗಿನ ಮಾನದಂಡದಲ್ಲಿ ಸ್ಪಷ್ಟವಾಗಿ ವಿವರಿಸಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು. ಪಟಾಕಿ ಸಿಡಿಸುವುದರಿಂದ ಆಗುವ ಮಾಲಿನ್ಯದ ಪ್ರಮಾಣವನ್ನು ಶೇ.30ರಷ್ಟು ಕಡಿಮೆ ಮಾಡಬೇಕು ಎಂಬುದು ನೀರಿ ಮಾನದಂಡದಲ್ಲಿರುವ ಮುಖ್ಯಾಂಶವಾಗಿದೆ. “ನೀರಿ’ ಪ್ರಮಾಣೀಕರಿಸಿದ ಪಟಾಕಿಗಳು ಮಾತ್ರ ಹಸುರು ಪಟಾಕಿಗಳಾಗಿದ್ದು ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು. ವಿವಿಧ ಬಣ್ಣಗಳಿಂದ ತಯಾರಾಗುವ ಪಟಾಕಿಗಳು ಅಪಾಯಕಾರಿಗಳಾಗಿವೆ. ಹೆಚ್ಚಿನ ಪ್ರಮಾಣದ ರಾಸಾಯನಿಕಗ ಳನ್ನು ಬಳಕೆ ಮಾಡಿ ಅವುಗಳನ್ನು ತಯಾರು ಮಾಡಲಾಗುತ್ತದೆ. ಅದು ಗಾಳಿಯ ಮೂಲಕ ಹಾರಿಬಂದು ನೀರಿನಲ್ಲಿ ಸೇರು ತ್ತವೆ. ಆ ನೀರನ್ನು ಬಳಕೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.
– ಶ್ರೀನಿವಾಸುಲು, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ